ತೀರ್ಥಹಳ್ಳಿ: ತಾಲೂಕು ಪಂಚಾಯತ್ ಕಟ್ಟಡದಲ್ಲಿ ಸೋರಿಕೆ ಆಗಿದೆ. ಸಣ್ಣ ನ್ಯೂನ್ಯತೆಯಿಂದ ಆಗಿದೆ ಅದನ್ನು ಸರಿಪಡಿಸುತ್ತಿದ್ದಾರೆ. ಬೇರೆ ಎಲ್ಲಾ ಕಟ್ಟಡ ಸೋರುತ್ತಿದೆ ಎಂದು ಹೇಳಿದ್ದಾರೆ ಅದನ್ನು ಹೇಳಿದವರೇ ತೋರಿಸಬೇಕು 20 ಕೋಟಿ ರೂ ವೆಚ್ಚದ ಕಟ್ಟಡ ಉದ್ಘಾಟನೆ ಮಾಡಿದಾಗ ಕೆಲವರಿಗೆ ಉರಿ ಬಿದ್ದರೆ ನಾನು ಜವಾಬ್ದಾರನಲ್ಲ ಎಂದು ಶಾಸಕ ಆರಗ ಜ್ಞಾನೇಂದ್ರ ಹೇಳಿದರು.
ಶನಿವಾರ ಪಟ್ಟಣದ ಬೈಪಾಸ್ ತಡೆಗೋಡೆ ಕುಸಿದ ಸ್ಥಳಕ್ಕೆ ಭೇಟಿ ನೀಡಿ ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು ರಾಜಕಾರಣ ಮಾಡಿ ಹುಳುಕು ಹುಡುಕಬೇಕು ಎಂದರೆ ನಾನು ಜವಾಬ್ದಾರನಲ್ಲ. ದುರುದ್ದೇಶ ಪೂರ್ವಕವಾಗಿ ಹೇಳುತ್ತಿದ್ದಾರೆ. ಹಣ ತರಲು ಆಗದೇ ಇದ್ದರೂ ತಂದವರನ್ನು ನೋಡಲಾಗದೆ ನೋಡಿ ಸಹಿಸಲಾಗದೇ ಇರುವಂತಹ ಮಾನಸಿಕತೆ ಇರುವವರು ಈ ರೀತಿ ಮಾತನಾಡುತ್ತಾರೆ. ನಾನು ಅದರ ಬಗ್ಗೆ ಕಾಮೆಂಟ್ ಮಾಡಲ್ಲ. ಒಳ್ಳೆ ಕೆಲಸ ಮಾಡುವುದು ನನ್ನ ಜವಾಬ್ದಾರಿ, ಹಣ ತಂದುಕೊಟ್ಟಿದ್ದೇನೆ. ಗುತ್ತಿಗೆದಾರರು ಕೆಲಸ ಮಾಡಿದ್ದಾರೆ, ಇಂಜಿನಿಯರ್ ಕೆಲಸ ನೋಡಿದ್ದಾರೆ,
ಏನಾದರು ನ್ಯೂನ್ಯತೆ ಇದ್ದರೆ ಗುತ್ತಿಗೆದಾರರು ಮತ್ತು ಅಧಿಕಾರಿಗಳ ಮೇಲೆ ಕ್ರಮ ತೆಗೆದುಕೊಳ್ಳಲು ನಾನು ಹೇಳುತ್ತೇನೆ. ಮಳೆ ಬೀಳಲು ಶುರುವಾದ ಮೇಲೆ ಒಂದು ಕಡೆ ಗೋಡೆ ತಂಡಿ ಆಗುತ್ತಿರುವುದು ಗೊತ್ತಾಗಿದೆ. ಅದನ್ನು ಸರಿಪಡಿಸುವ ಕೆಲಸ ಆಗುತ್ತಿದೆ ಎಂದರು.
ನಂತರ ಬೈಪಾಸ್ ರಸ್ತೆಯ ತಡೆಗೋಡೆ ಕುಸಿದು ಬಿದ್ದ ವಿಚಾರ ಮಾತನಾಡಿ ಅದನ್ನು ನಾನೆ ಹೇಳಿ ತಡೆ ಗೋಡೆ ಮಾಡಿದ್ದು, ತಡೆಗೋಡೆ ಮೊದಲು ಎಸ್ಟಿಮೇಟ್ ಅಲ್ಲಿ ಇರಲಿಲ್ಲ. ಜಮೀನು ಹೋಗುತ್ತದೆ ಎಂಬ ಕಾರಣಕ್ಕೆ ಅಗಲ ಹೋಗಲು ಬಿಡಲಿಲ್ಲ, ಹಾಗಾಗಿ ಗುಡ್ಡ ಜರಿದು ಬರುವಾಗ ಯಾವುದೇ ತಡೆಗೋಡೆ ಕೂಡ ತಡೆಯಲು ಸಾಧ್ಯವಿಲ್ಲ. ಆದರೆ ಅದನ್ನು ಸರಿಪಡಿಸುವ ಕೆಲಸ ನಡೆಯುತ್ತಿದೆ ಎಂದರು.
ಇದನ್ನೂ ಓದಿ: Mumbai: ಭಾರಿ ಮಳೆಗೆ ಕಟ್ಟಡ ಭಾಗ ಕುಸಿತ… ಮಹಿಳೆ ಮೃತ್ಯು, ಕಟ್ಟದಲ್ಲಿದ್ದವರ ರಕ್ಷಣೆ