ತೀರ್ಥಹಳ್ಳಿ: ಜನತಂತ್ರ ಯೋಜನೆಯಲ್ಲಿ ಪ್ರತಿಯೊಬ್ಬ ಪ್ರಜೆಯು ಮತದಾನವನ್ನು ಮಾಡಬೇಕು. ಚುನಾವಣೆಯಲ್ಲಿ ನಿಷ್ಠಾವಂತ ವ್ಯಕ್ತಿಯನ್ನು ಆಯ್ಕೆ ಮಾಡಬೇಕೆಂದರೆ ದೇಶದ ಪ್ರಜೆಗೆ ಇರುವ ಒಂದೇ ಒಂದು ಹಕ್ಕು ಎಂದರೆ ಮತದಾನದ ಎಂದು ಗೃಹಸಚಿವ ಆರಗ ಜ್ಞಾನೇಂದ್ರ ತಿಳಿಸಿದರು.
ಪಟ್ಟಣ ಪಂಚಾಯತ್ ನ ರವೀಂದ್ರ ಶೆಟ್ಟಿ ಸಭಾಂಗಣದಲ್ಲಿ ಸೋಮವಾರ ಮಾತನಾಡಿದ ಅವರು,ದೇಶದ ಎಲ್ಲಾ ಪ್ರಜೆಯು ಈ ಒಂದು ಆಂದೋಲನದ ಕಾರ್ಯಕ್ರಮದಲ್ಲಿ ಭಾಗಿಯಾಗಬೇಕು. ಮತದಾರರ ಪಟ್ಟಿಯಲ್ಲಿ ಹೆಸರು ಇಲ್ಲದೆ ಹೋದರೆ ಹತಾಶರಾಗುವವರು ಇದ್ದಾರೆ. ನಾವು ಈ ದೇಶದ ಪ್ರಜೆ ಅಲ್ಲವೇನೋ ಎಂಬ ಭಾವನೆ ಬರುತ್ತದೆ. ಹಾಗಾಗಿ ಪ್ರತಿಯೊಬ್ಬರ ಮತವು ಕೂಡ ತಿರಸ್ಕೃತ ಆಗಬಾರದು. ಇತ್ತೀಚಿಗೆ ಹಲವರು ಅಸ್ಸಾಂ ಸೇರಿ ಹೊರ ಭಾಗದಿಂದ ತಾವು ಗೆಲ್ಲುವ ಸಲುವಾಗಿ ಜನರನ್ನು ಕರೆದುಕೊಂಡು ಬಂದು ಇಲ್ಲಿ ಮತದಾನ ಹಾಕಿಸುತ್ತಾರೆ ಹಾಗೆ ಆಗಬಾರದು ಎಂಬ ಕಾರಣಕ್ಕೆ ಓಟರ್ ಐಡಿಗೆ ಆಧಾರ್ ಲಿಂಕ್ ಮಾಡಬೇಕು ಮತ್ತು ಯಾರಾದರೂ ಹೊಸದಾಗಿ ವೋಟರ್ ಐಡಿಗೆ ತಮ್ಮ ಹೆಸರು ಸೇರಿಸುವವರು ಈಗಲೇ ಸೇರಿಸಬಹುದು ಎಂದು ಗೃಹಸಚಿವರು ತಿಳಿಸಿದರು.
ಮತದಾರರು ಮತದಾನ ಮಾಡುವಾಗ ಲೋಪವಾಗಬಾರದು ಎಂಬ ಕಾರಣಕ್ಕೆ ಓಟರ್ ಐಡಿಗೆ ಆಧಾರ್ ಲಿಂಕ್ ಮಾಡಬೇಕೆಂದು ಪಟ್ಟಣ ಪಂಚಾಯತ್ ಅಧ್ಯಕ್ಷೆ ಶಬನಮ್ ತಿಳಿಸಿದರು.
ದೇಶಾದ್ಯಂತ ಆಧಾರ್ ಜೋಡಣೆ ಮಾಡುವಂತೆ ಕೇಂದ್ರ ಸರ್ಕಾರ ಅದೇಶಿಸಿದ್ದು ತೀರ್ಥಹಳ್ಳಿಯಲ್ಲಿ ಆಗಸ್ಟ್ 22 ರಿಂದ 25 ರವರೆಗೆ ಈ ಒಂದು ಕಾರ್ಯಕ್ರಮ ನೆಡೆಯಲಿದೆ ಎಂದು ತಹಸೀಲ್ದಾರ್ ಅಮೃತ್ ಅತ್ರೇಶ್ ತಿಳಿಸಿದರು.
ಈ ಸಂದರ್ಭದಲ್ಲಿ ತಹಸೀಲ್ದಾರ್ ಅಮೃತ್ ಅತ್ರೇಶ್, ಪ. ಪಂ ಅಧ್ಯಕ್ಷೆ ಶಬನಮ್ , ಉಪಾಧ್ಯಕ್ಷರಾದ ಜಯಪ್ರಕಾಶ್ ಶೆಟ್ಟಿ, ಮುಖ್ಯಾಧಿಕಾರಿ ಕುರಿಯಕೋಸ್, ಪಟ್ಟಣ ಪಂಚಾಯತ್ ಸದಸ್ಯರಾದ ರಾಘವೇಂದ್ರ ಸೊಪ್ಪುಗುಡ್ಡೆ, ಸಂದೇಶ ಜವಳಿ, ವಿನುತ್,ಮಂಜುಳಾ ನಾಗೇಂದ್ರ, ಗೀತಾ ರಮೇಶ್, ಸುಶೀಲಾ ಶೆಟ್ಟಿ,ಧತ್ತಣ್ಣ, ಸೇರಿದಂತೆ ಹಲವರು ಉಪಸ್ಥಿತರಿದ್ದರು.