Advertisement
ಅಡಿಕೆ ತೋಟ ನಾಶ ಹೊಂದಿದವರಿಗೆ ಹಾಗೂ ಪರ್ಯಾಯ ಬೆಳೆ ಅಳವಡಿಸಿಕೊಳ್ಳದಿದ್ದವರಿಗೆ ಪರಿಹಾರ ರೂಪದಲ್ಲಿ 25 ಕೋಟಿ ರೂ. ಪ್ಯಾಕೇಜ್ ಘೋಷಿಸುವಂತೆ ಶಾಸಕ ಸಚಿವ ಎಸ್. ಅಂಗಾರ ನೇತೃತ್ವದಲ್ಲಿ ಕರಾವಳಿ ಶಾಸಕರು ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದ್ದರು. ಜತೆಗೆ ರೋಗ ನಿವಾರಣೆಗೆ ಉನ್ನತ ಮಟ್ಟದ ಸಂಶೋಧನೆಗೆ ಆದೇಶ ನೀಡುವಂತೆಯೂ ಆಗ್ರಹಿಸಿದ್ದರು. ಅದರಂತೆ ಅಂದಿನ ಮುಖ್ಯಮಂತ್ರಿ ಯಡಿಯೂರಪ್ಪ ಬಜೆಟ್‌ನಲ್ಲಿ 25 ಕೋ.ರೂ. ಮೀಸಲಿಟ್ಟಿದ್ದರು. ಆದರೆ ಅಷ್ಟೂ ಮೊತ್ತವನ್ನು ಸಂಶೋಧನೆಗೆ ಬಳಸಲು ನಿರ್ಧರಿಸಿದ ಕಾರಣ ನಷ್ಟ ಪರಿಹಾರ ಸಿಗುವ ನಿರೀಕ್ಷೆ ಕಮರಿತ್ತು. ಆದರೆ ಪರ್ಯಾಯ ಬೆಳೆಗೂ ಉತ್ತೇಜನ ನೀಡಬೇಕು ಎಂಬ ಕೃಷಿಕರ ಬೇಡಿಕೆಗೆ ಇದೀಗ ಮನ್ನಣೆ ಸಿಕ್ಕಿದೆ.
ಹಳದಿ ರೋಗ ಬಾಧಿತ ಪ್ರದೇಶಗಳ ವ್ಯಾಪ್ತಿ ಮತ್ತು ತೀವ್ರತೆಯ ಅಂಕಿ-ಅಂಶಗಳ ನಿಖರ ಅಧ್ಯಯನಕ್ಕೆ ಗ್ರಾ.ಪಂ. ವ್ಯಾಪ್ತಿಯಲ್ಲಿ ಸಮೀಕ್ಷೆ ನಡೆಸಲು ಕಳೆದ ಜನವರಿಯಲ್ಲಿ ತಂಡ ರಚಿಸಲಾಗಿತ್ತು. 13,993 ಸರ್ವೇ ನಂಬರ್ ಪ್ರದೇಶದಲ್ಲಿ ಸಮೀಕ್ಷೆ ನಡೆಸಿದ್ದು, ಒಟ್ಟು 7,048 ಸರ್ವೇ ನಂಬರ್ ವ್ಯಾಪ್ತಿಯಲ್ಲಿ ರೋಗ ಬಾಧೆ ಕಂಡುಬಂದಿತ್ತು. 1,043.38 ಹೆಕ್ಟೇರ್‌ಗಳಲ್ಲಿ ಸುಮಾರು 14,29,440 ಅಡಿಕೆ ಮರಗಳು ರೋಗಬಾಧಿತ ಎಂದು ಪರಿಗಣಿಸಲಾಗಿತ್ತು. ಇತ್ತೀಚೆಗೆ ಪುತ್ತೂರಿನಲ್ಲಿಯೂ ರೋಗ ಲಕ್ಷಣ ಕಂಡು ಬಂದಿದ್ದು 20 ಎಕರೆ ಅಧಿಕ ಪ್ರದೇಶಗಳನ್ನು ಗುರುತಿಸಲಾಗಿದೆ. 2022-23ನೇ ಸಾಲಿನ ಸಮಗ್ರ ತೋಟಗಾರಿಕೆ ಅಭಿವೃದ್ಧಿ ಯೋಜನೆಯಡಿ ಪರ್ಯಾಯ ಬೆಳೆಗಳಿಗೆ ಹೆಕ್ಟೇರಿಗೆ ಶೇ. 50ರಂತೆ ಪ್ರೋತ್ಸಾಹಧನ ನೀಡಲು ತಿರ್ಮಾನಿಸಲಾಗಿದೆ. ಈ ಬಗ್ಗೆ ಆಯಾ ಗ್ರಾ.ಪಂ. ವ್ಯಾಪ್ತಿಯ ಕೃಷಿಕರಿಗೆ ಮಾಹಿತಿ ನೀಡುತ್ತಿದ್ದೇವೆ.
Related Articles
ತೋಟಗಾರಿಕೆ ನಿರ್ದೇಶಕಿ, ತೋಟಗಾರಿಕೆ ಇಲಾಖೆ, ಸುಳ್ಯ
Advertisement