Advertisement

Maisa Abdel Hadi: ಪ್ರಚೋದನಕಾರಿ ಪೋಸ್ಟ್: ಅರಬ್​-ಇಸ್ರೇಲಿ ನಟಿ ಮೈಸಾ ಅಬ್ದೆಲ್​ ಹದಿ ಬಂಧನ

12:06 PM Oct 25, 2023 | Team Udayavani |

ಟೆಲ್ ಅವಿವ್: ಇಸ್ರೇಲ್ ಮೇಲೆ ಹಮಾಸ್ ಉಗ್ರರು ನಡೆಸಿರುವ ದಾಳಿಯನ್ನು ಬೆಂಬಲಿಸಿ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ ಆರೋಪದ ಹಿನ್ನೆಲೆಯಲ್ಲಿ ಅರಬ್-ಇಸ್ರೇಲಿ ನಟಿ ಮೈಸಾ ಅಬ್ದೆಲ್ ಹದಿಯನ್ನು ಇಸ್ರೇಲಿ ಪೊಲೀಸರು ಬಂಧಿಸಿದ್ದಾರೆ.

Advertisement

ಇತ್ತೀಚಿಗೆ ಹಮಾಸ್ ಉಗ್ರರು ಇಸ್ರೇಲ್ ಮೇಲೆ ಏಕಾಏಕಿ ರಾಕೆಟ್ ದಾಳಿ ನಡೆಸಿ ಹಲವು ಇಸ್ರೇಲ್ ಪ್ರಜೆಗಳನ್ನು ಹತ್ಯೆಗೈದಿದ್ದರು. ಈ ಕುರಿತು ಪೋಸ್ಟ್ ಮಾಡಿರುವ ನಟಿ ಭಯೋತ್ಪಾದನೆಯನ್ನು ಹೊಗಳಿದ ಮತ್ತು ದ್ವೇಷಪೂರಿತ ಪೋಸ್ಟ್‌ಗಳನ್ನು ಪೋಸ್ಟ್ ಮಾಡಿದ ಆರೋಪದ ಮೇಲೆ ನಜರೆತ್ ನಗರದ ವಾಸಿಯಾಗಿರುವ ನಟಿಯನ್ನು ಇಸ್ರೇಲಿ ಪೊಲೀಸರು ಬಂಧಿಸಿದ್ದಾರೆ. ಅಲ್ಲದೆ ಈ ಪೋಸ್ಟ್ ನಲ್ಲಿ ಹಮಾಸ್‌ಗೆ ಬೆಂಬಲವಾಗಿ ನಗುತ್ತಿರುವ ಎಮೋಜಿಗಳೊಂದಿಗೆ 85 ವರ್ಷದ ಒತ್ತೆಯಾಳು ಯಾಫಾ ಅದಾರ್ ಅವರ ಫೋಟೋಗಳನ್ನು ಮಸ್ಸಾ ಅಬ್ದೆಲ್ ಹಾದಿ ಪೋಸ್ಟ್ ಮಾಡಿದ್ದಾರೆ.

ನಟಿಯ ಈ ವರ್ತನೆಗೆ ನಟ ಆಫರ್ ಶೇಖರ್ ತೀಕ್ಷ್ಣ ಪ್ರತಿಕ್ರಿಯೆ ನೀಡಿದ್ದಾರೆ. ಈ ಪೋಸ್ಟ್‌ಗಳನ್ನು ಖಂಡಿಸಿದ ಅವರು – ‘ನಿಮ್ಮ ಬಗ್ಗೆ ನನಗೆ ನಾಚಿಕೆಯಾಗುತ್ತಿದೆ. ನೀವು ನಜರೇತಿನಲ್ಲೇ ವಾಸಿಸಿ ನಮ್ಮ ಟಿವಿ ಕಾರ್ಯಕ್ರಮಗಳು ಮತ್ತು ಚಲನಚಿತ್ರಗಳಲ್ಲಿ ನಟಿಸಿ. ನಮ್ಮ ಜನರ ಬೆನ್ನಿಗೆ ಚೂರಿ ಹಾಕಿದ್ದೀರಿ ಎಂದು ಪೋಸ್ಟ್ ಮಾಡಿದ್ದಾರೆ.

ಇದನ್ನೂ ಓದಿ: Street vendor: 6 ವರ್ಷ ಕಳೆದರೂ ಬೀದಿ ಬದಿ ವ್ಯಾಪಾರಿಗಳ ಸರ್ವೇ ಇಲ್ಲ

Advertisement

Udayavani is now on Telegram. Click here to join our channel and stay updated with the latest news.

Next