Advertisement
ಯಾಕೆ ಗೊತ್ತಾ? ಇಲ್ಲಿನ ಎಪಿಎಸ್ ಕಾಲೇಜಿನ ಮೈದಾನದಲ್ಲಿ ಸ್ಥಾಪಿನಾಗುವ ಗಣಪ ಪ್ರತಿಸಲವೂ ಜೋರು ಸದ್ದು ಮಾಡ್ತಾನೆ! ದೊಡ್ಡ ತಾರೆಗಳು ಇವನೆದುರು ನಿಂತು ಕಾರ್ಯಕ್ರಮಗಳನ್ನು ನಡೆಸಿಕೊಡ್ತಾರೆ. ಅದೇ ರೀತಿ ಈ ಬಾರಿಯೂ ಸ್ಟಾರ್‌ಗಳ ದೊಡ್ಡ ದಂಡು ಈತನನ್ನು ನೋಡಲು ಬರುತ್ತಿದೆ. ಇಲ್ಲಿನ ಪ್ರೇಕ್ಷಕರನ್ನು ರಂಜಿಸಲು ಆಗಮಿಸುತ್ತಿದ್ದಾರೆ.ಸೆಪ್ಟೆಂಬರ್ 15ರ ಭಾನುವಾರ ರಾಗರಂಜಿನಿ ಸಂಗೀತ ಕಾರ್ಯಕ್ರಮ ಮೊದಲ ದಿನದ ಹೈಲೈಟ್. 18ರಂದು ವಿವಿಧ ಕಲಾವಿದರಿಂದ ಹಾಸ್ಯ ಸಂಜೆ ಪ್ರೇಕ್ಷಕರನ್ನು ನಗೆಗಡಲಿನಲ್ಲಿ ತೇಲಿಸಲಿದೆ. 19ರಂದು ಎಸ್.ಪಿ. ಬಾಲಸುಬ್ರಹ್ಮಣ್ಯರ ಹಾಡುಗಾರಿಕೆಯಿಂದ ವೇದಿಕೆ ಕಳೆಗಟ್ಟಲಿದೆ. 21ರಂದು ಬಾಲಿವುಡ್‌ನ ಹಿರಿಯ ತಾರೆ ರಿಷಿಕಪೂರ್ ಅವರು ಗಾಯಕ ವಿಜಯ ಪ್ರಕಾಶ್ ಜೊತೆ ಸಂವಾದದಲ್ಲಿ ಪಾಲ್ಗೊಳ್ಳುತ್ತಿದ್ದಾರೆ. 22ರಂದು ಹಸ್ಮಿತಾ ಗಣೇಶ್‌ರಿಂದ ಭರತನಾಟ್ಯವಿದ್ದು, ಇದರ ಬಳಿಕ ಸುಪ್ರಸಿದ್ಧ ಗಾಯಕಿ ಶ್ರೇಯಾ ಘೋಶಲ್‌ರಿಂದ ಗಾನಸುಧೆ ಹರಿಯಲಿದೆ. 23ರಂದು ಮತ್ತೆ ಗಾಯಕ ವಿಜಯ್ ಪ್ರಕಾಶ್ ಆಗಮಿಸಲಿದ್ದು, “ಮ್ಯೂಸಿಕಲ್ ನೈಟ್’ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ.