Advertisement

ಎ. 5ರಂದು 55 ಮೆ. ವ್ಯಾ. ವಿದ್ಯುತ್‌ ಬೇಡಿಕೆ ಕುಸಿತ

11:28 AM Apr 09, 2020 | Sriram |

ಮಂಗಳೂರು: ಕೋವಿಡ್ 19 ವಿರುದ್ಧದ ಹೋರಾಟದ ಭಾಗವಾಗಿ ಎ. 5ರಂದು ರಾತ್ರಿ 9ಕ್ಕೆ 9 ನಿಮಿಷಗಳ ಕಾಲ ಮನೆಯ ಲೈಟುಗಳನ್ನು ಆರಿಸಿ ಹಣತೆ- ಮೋಂಬತ್ತಿ ಬೆಳಗಿ ಎಂದು ಪ್ರಧಾನಿ ನೀಡಿದ್ದ ಕರೆಯ ಪರಿಣಾಮ ಮೆಸ್ಕಾಂ ವ್ಯಾಪ್ತಿಯ ಒಟ್ಟು ವಿದ್ಯುತ್‌ ಬೇಡಿಕೆಯಲ್ಲಿ 55 ಮೆಗಾವ್ಯಾಟ್‌ನಷ್ಟು ಕುಸಿತ ಕಂಡುಬಂದಿದೆ.

Advertisement

ದಕ್ಷಿಣ ಕನ್ನಡ, ಉಡುಪಿ, ಶಿವಮೊಗ್ಗ, ಚಿಕ್ಕಮಗಳೂರು ಜಿಲ್ಲೆಗೆ ಮೆಸ್ಕಾಂ ವಿದ್ಯುತ್‌ ಸರಬರಾಜು ಮಾಡುತ್ತಿದೆ. ಒಟ್ಟು 24.29 ಲಕ್ಷ ಗ್ರಾಹಕರಿದ್ದು, ಈ ಪೈಕಿ ಗೃಹಬಳಕೆ ಗ್ರಾಹಕರು 17.70 ಲಕ್ಷ ಮಂದಿ. ಉಳಿದಂತೆ ಬೀದಿದೀಪ ಸ್ಥಾವರಗಳು 24 ಸಾವಿರ, ನೀರು ಸರಬರಾಜು ಸ್ಥಾವರಗಳು 16 ಸಾವಿರ ಇವೆ.

ಪ್ರತೀದಿನ ಸುಮಾರು 806 ಮೆಗಾವ್ಯಾಟ್‌ ವಿದ್ಯುತ್‌ ಬೇಡಿಕೆಯಿರುತ್ತದೆ. ಎ. 5ರಂದು ರಾತ್ರಿ 9ರ ಸಮಯಕ್ಕೂ ಇಷ್ಟೇ ವಿದ್ಯುತ್‌ ಸರಬರಾಜಾಗಿತ್ತು. 9 ನಿಮಿಷಗಳ ಅವಧಿಯಲ್ಲಿ 751 ಮೆಗಾವ್ಯಾಟ್‌ ವಿದ್ಯುತ್‌ ಮಾತ್ರ ಬಳಕೆಯಾಗಿ 55 ಮೆಗಾವ್ಯಾಟ್‌ನಷ್ಟು ಕುಸಿತವಾಗಿದೆ ಎಂದು ಮೆಸ್ಕಾಂ ಮೂಲಗಳು ತಿಳಿಸಿವೆ.

Advertisement

Udayavani is now on Telegram. Click here to join our channel and stay updated with the latest news.

Next