ಮಣಿಪಾಲ: ಕೋವಿಡ್ 19 ಮಹಾಮಾರಿ ಸಮಸ್ಯೆಯನ್ನು ನಿಭಾಯಿಸುವಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರ ಇಲ್ಲಿಯವರೆಗೆ ಕೈಗೊಂಡಿರುವ ಕಾರ್ಯ ನಿಮಗೆ ತೃಪ್ತಿ ತಂದಿದೆಯೇ ಎಂಬ ಪ್ರಶ್ನೆಯನ್ನು ಉದಯವಾಣಿ ಕೇಳಿದ್ದು, ಆಯ್ದ ಅಭಿಪ್ರಾಯಗಳು ಇಲ್ಲಿದೆ.
ದ್ವಾರಕನಾಥ್ ರಾಮಸ್ವಾಮಿ: ಎರಡೂ ಸರ್ಕಾರದ ಕಾರ್ಯಗಳು ತೃಪ್ತಿ ತಂದಿದೆ. ಆದರೆ ಕೆಲವು ಜನರ ಅಸಹಕಾರ ಶೀಘ್ರ ಫಲಿತಾಂಶ ಬರುವಲ್ಲಿ ಸ್ವಲ್ಪ ಹಿನ್ನಡೆಯಾಗಿದೆ.
ಮಲ್ಲೇಶ ಪಂಬ: ಇಂತಹ ಸಂದರ್ಭಗಳಲ್ಲಿ ಕೇಂದ್ರ ಹಾಗು ರಾಜ್ಯ ಸರ್ಕಾರಗಳು ಕೈಗೊಂಡ ನಿರ್ಧಾರಗಳನ್ನು ಭಾರತೀಯರಾದ ನಾವು ಗೌರವಿಸುತ್ತೇವೆ ಆದರೆ ಲಕ್ಷಾಂತರ ಜನರು ಇದರಿಂದ ಅನೇಕ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ ಮತ್ತು ವಲಸೆ ಕಾರ್ಮಿಕರ ಪರಿಸ್ಥಿತಿ ತುಂಬಾ ಕಠಿಣವಾಗಿದೆ ದಯವಿಟ್ಟು ಅವರಿಗೆ ಸಹಾಯವಾಗುವಂತೆ ಏನಾದರು ಕೆಲಸ ಮಾಡಬೇಕು.
ಕೆ ಎಸ್ ಕೃಷ್ಣ: ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರ ತುಂಬಾ ಒಳ್ಳೆಯ ನಿರ್ಧಾರಗಳನ್ನು ತೆಗೆದುಕೊಳ್ಳುತಿವೆ ಆದರೆ ನಾಗರಿಕರಾದ ನಾವು ಸರ್ಕಾರ ದೊಡನೆ ಸರಿಯಾಗಿ ಸ್ಪಂದಿಸುತ್ತಿಲ್ಲ.
ಮಸ್ತಿ ನೈಕ್: ರೋಗ ನಿಯಂತ್ರಣಕ್ಕಾಗಿ ಅನುಸರಿಸಿದ ಅತಿಯಾದ ಲಾಕ್ ಡೌನ್ ಕ್ರಮ ಸರಿಯಲ್ಲ. ಪ್ರತಿಯೊಬ್ಬ ನಾಗರಿಕನ ವ್ಯಕ್ತಿಗತ ಅಭಿವೃದ್ಧಿ, ಕೌಟುಂಬಿಕ ಅಭಿವೃದ್ಧಿಯ ಜೊತೆಗೆ ರಾಷ್ಟ್ರೀಯ ಅಭಿವೃದ್ಧಿಯನ್ನು ಹತ್ತಿಕ್ಕಲಾಗಿದೆ.
ನಾರಾಯಣ ರೆಡ್ಡಿ ಕೆರೆಸುರ್: ಹೌದು ಆದ್ರೆ ಎಣ್ಣೆ ಬಂದ್ ಮಾಡಬಾರದಿತ್ತು ಇದು ನಮ್ಮ ಸರ್ಕಾರಕ್ಕೆ ತುಂಬಾ ಲಾಸ್ ಆಗಿದೆ . ಇದಕ್ಕೆ ಬೇರೆ ಏನಾದ್ರು ಉಪಾಯ ಮಾಡಬಹುದಿತ್ತು