Advertisement
ಪುರುಷೋತ್ತಮ ರೆಡ್ಡಿ ಕೆ ಆರ್: ಖಂಡಿತ ವಿಸ್ತರಣೆಯಾಗಬೇಕು. ಆದರೆ ಬಡ ಕುಟುಂಬ ಗಳಿಗೆ ಸರ್ಕಾರ ಅಗತ್ಯ ಸೌಕರ್ಯ ಒದಗಿಸಬೇಕು. ಎಸ್ ಎಸ್ ಎಲ್ ಸಿ, ಪಿಯು ಪರೀಕ್ಷೆ ನಡೆಸಲು ಅವಕಾಶ ನೀಡಬೇಕು.
Related Articles
Advertisement
ಚಂದ್ರು ಶೇಖರ್: ಬಡ ಜನತೆಯನ್ನು ಮನಸ್ಸಿನಲ್ಲಿ ಇಟ್ಟುಕೊಳ್ಳಿ ಮತ್ತು ರಾಜ್ಯದ ಈಗಿನ ಆರ್ಥಿಕ ಪರಿಸ್ಥಿತಿ ಹಾಗೂ ಮುಂದಿನ ಆರ್ಥಿಕ ಪರಿಸ್ಥಿತಿ ಗಮನ ದಲ್ಲಿಟ್ಟುಕೊಂಡು ಸರ್ಕಾರ ಕೇವಲ ಅಕ್ಕಿಯನ್ನು ನೀಡಿದರೆ ಬಡವರ ಜೀವನ ನಡೆಸಲು ಅಸಾಧ್ಯ ಆದ್ದರಿಂದ ಜನರಿಗೆ ಅವರವರ ಕೆಲಸವನ್ನು ಮಾಡಿಕೊಂಡು ಜೀವನ ನಡೆಸಲು ಅವಕಾಶ ಮಾಡಿಕೊಡಬೇಕು.
ಮುರಳಿಕೃಷ್ಣ ಕಜೆಹಿತ್ಲು: ಕೋವಿಡ್-19 ನಿಯಂತ್ರಣಕ್ಕೆ ಬರಬೇಕಾದರೆ ಲೋಕ್ ಡೌನ್ ಅಗತ್ಯ ಮುಂದುವರಿಯಬೇಕು. ಜನ ಅದನ್ನು ಶಿಸ್ತಿನಿಂದ ಪಾಲಿಸಬೇಕು.
ಪ್ರೇಮಚಂದ್ರ ಕಾರಂತ್: ಖಂಡಿತ ಮಾಡಬೇಕು, ಪ್ರಾಣ ಉಳಿಯ ಬೇಕೆಂದಿದ್ದರೆ, ಇತರರಿಗೆ ತೊಂದರೆ ಕೊಡಬಾರದು, ಹಾಗೂ ಸಹಾಯ ಮಾಡಬೇಕೆಂದಿದ್ದರೆ ಲಾಕ್ ಡೌನ್ ವಿಸ್ತರಣೆ ಆಗಲೇಬೇಕು.
ಮೊಹಮ್ಮದ್ ಆಲಿ: ಚರ್ಚ್, ಮಸೀದಿ, ದೇವಸ್ಥಾನ, ಚಿತ್ರಮಂದಿರ, ಮದುವೆ ಹಾಲ್, ಬೀಚ್, ಮಾಲ್, ಸಭೆ, ಸಮಾರಂಭ ಗಳಿಗೆ ನಿರ್ಬಂಧ ಮುಂದುವರಿಯಲಿ ಆದರೆ ಮತ್ತೆ ಎಲ್ಲದಕ್ಕೂ ವಿನಾಯತಿ ನೀಡಲಿ.. ಒಮ್ಮೆ ಎಲ್ಲಾ ರೋಗಿಗಳನ್ನು ಕವರ್ ಮಾಡಿಬಿಡಿ
ಭಾರತಿ ರಮೇಶ್: ಲಾಕ್ ಡೌನ್ ಮಾಡುವುದು ಒಂದು ರೀತಿಯಲ್ಲಿ ಒಳ್ಳೆಯದು, ಆದರೆ ಮನುಷ್ಯತ್ವನೇ ಇಲ್ಲದವರ ಕಡೆ ಎಷ್ಟು ಸ್ರ್ಟಿಕ್ಟ್ ಮಾಡಿದರೂ ಪ್ರಯೋಜನ ಆಗ್ತಾ ಇಲ್ಲಾ, ಇದರಿಂದ ಬೇರೆಯವರಿಗೂ ತೊಂದರೆ. ಅವರವರ ಊರಿಗೆ ಹೋಗಲಾದರೂ ಅವಕಾಶ ಮಾಡಿದ್ರೆ ಉತ್ತಮ. ಸ್ವಂತ ವಾಹನಗಳಿದ್ದರೆ ರಿಜಿಸ್ರ್ಟೇಷನ್ ನೋಡಿ ಅವರಿಗಾದರೂ ಅವಕಾಶ ಮಾಡಿಕೊಡಲಿ. ಗಲಾಟೆ ಮಾಡುವವರಿಗೆ ಕಾನೂನು ಸರಿಯಾಗಿ ಶಿಕ್ಷೆ ನೀಡಲಿ, ಆಗಲಾದರೂ ಕೋವಿಡ್-19 ತಹಬದಿಗೆ ಬರಬಹುದು.