Advertisement
ಒಟ್ಟು 109 ಮಂದಿ ರೈತರ ಅಂದಾಜು 7 ಸಾವಿರದಷ್ಟು ಅಡಿಕೆ ಮರಗಳು ಮುರಿದು ಬಿದ್ದಿವೆ. ಅಂದಾಜು 6.50 ಲಕ್ಷ ರೂ. ರೈತರಿಗೆ ನಷ್ಟ ಪರಿಹಾರ ಸಿಗಬೇಕಿದ್ದು, ತೋಟಗಾರಿಕಾ ಇಲಾಖೆಯ ಅಧಿಕಾರಿಗಳು ಈ ವರದಿಯನ್ನು ಸರಕಾರಕ್ಕೆ ಸಲ್ಲಿಸಲಿದ್ದಾರೆ.
ಮೊಳಹಳ್ಳಿ ಗ್ರಾಮದಲ್ಲಿ ಗರಿಷ್ಠ ಪ್ರಮಾಣದ ಹಾನಿಯಾಗಿದ್ದು, 55 ರೈತರ 12 ಹೆಕ್ಟೇರ್ ಅಡಿಕೆ ತೋಟಕ್ಕೆ ಹಾನಿಯಾಗಿದೆ. ಅಂಪಾರು ಗ್ರಾಮದಲ್ಲಿ 36 ಮಂದಿ ರೈತರ 7 ಹೆಕ್ಟೇರ್, ಕರ್ಕುಂಜೆ ಗ್ರಾಮದ ನೇರಳಕಟ್ಟೆ ಪ್ರದೇಶದಲ್ಲಿ 18 ರೈತರ 2 ಹೆಕ್ಟೇರ್ ಸೇರಿದಂತೆ ಒಟ್ಟು 109 ಮಂದಿ ರೈತರ 21 ಹೆಕ್ಟೇರ್ ತೋಟಕ್ಕೆ ಹಾನಿಯಾಗಿದೆ. ತೆಂಕ ಗ್ರಾಮದಲ್ಲಿ ಗರಿಷ್ಠ ಮಳೆ
ಆ ಒಂದೇ ದಿನ ಕಾಪು ತಾಲೂಕಿನ ತೆಂಕ ಗ್ರಾಮದಲ್ಲಿ 158 ಮಿ.ಮೀ. ಮಳೆಯಾಗಿದೆ. ಕಾರ್ಕಳ ತಾಲೂಕಿನ ಮಾಳದಲ್ಲಿ 149 ಮಿ.ಮೀ. ಮಳೆಯಾಗಿದ್ದರೆ, ಮುದರಂಗಡಿಯಲ್ಲಿ 128 ಮಿ.ಮೀ., ಹೆಜಮಾಡಿಯಲ್ಲಿ 117 ಮಿ.ಮೀ., ಉಳಿಯಾರಗೋಳಿಯಲ್ಲಿ 106 ಮಿ.ಮೀ., ಕಾಪುವಿನಲ್ಲಿ 106 ಮಿ.ಮೀ., ಇನ್ನಂಜೆಯಲ್ಲಿ 106 ಮಿ.ಮೀ. ಮಳೆಯಾಗಿದ್ದು, ಇದು ಅತೀ ಹೆಚ್ಚು ಮಳೆಯಾದ ಪ್ರದೇಶಗಳಾಗಿವೆ. ಇನ್ನು ಹೆಚ್ಚು ಹಾನಿ ಸಂಭವಿಸಿದ ಕಾವ್ರಾಡಿ 100 ಮಿ.ಮೀ., ಕರ್ಕುಂಜೆಯಲ್ಲಿ 95 ಮಿ.ಮೀ., ಅಂಪಾರು ಹಾಗೂ ಮೊಳಹಳ್ಳಿಯಲ್ಲಿ 85 ಮಿ.ಮೀ. ಮಳೆಯಾಗಿದೆ. ಒಟ್ಟಾರೆ ಉಡುಪಿ ಜಿಲ್ಲೆಯಲ್ಲಿ ಆ ದಿನ 40 ಮಿ.ಮೀ. ಮಳೆಯಾಗಿದೆ.