Advertisement

ಅಪ್ಪು ಸ್ಮರಣಾರ್ಥ ಅನ್ನ ಸಂತರ್ಪಣೆ : 3೦ ಸಾವಿರಕ್ಕೂ ಹೆಚ್ಚು ಜನ ಭಾಗಿ

10:16 PM Nov 09, 2021 | Team Udayavani |

ಬೆಂಗಳೂರು: ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಅವರ 11ನೇ ದಿನದ ಪುಣ್ಯಸ್ಮರಣೆ ಹಿನ್ನೆಲೆಯಲ್ಲಿ ಮಂಗಳವಾರ ರಾಜ್ ಕುಟುಂಬದಿಂದ ಹಮ್ಮಿಕೊಂಡ ಅನ್ನಸಂತರ್ಪಣೆಯಲ್ಲಿ 30 ಸಾವಿರಕ್ಕೂ ಹೆಚ್ಚು ಜನರು ಊಟ ಮಾಡಿದ್ದಾರೆ.

Advertisement

ನೆಚ್ಚಿನ ಅಪ್ಪುವಿನ ಪ್ರಸಾದ ಸ್ವೀಕರಿಸಲು ಬೆಳಗ್ಗೆ 10 ಗಂಟೆಯಿಂದಲೇ ಅರಮನೆ ಮೈದಾನದ ಸುತ್ತ ಅಭಿಮಾನಿಗಳು ಜಮಾಯಿಸಿದ್ದರು.

ಇಂದು 11 ಘಂಟೆಯಿಂದ ಅರಮನೆ ಮೈದಾನದ ವೈಟ್ ಪೆಟಲ್ಸ್ ಹಾಗು ತ್ರಿಪುರವಾಸಿನಿಯಲ್ಲಿ ಅನ್ನಸಂತರ್ಪಣೆ ಆರಂಭಿಸಲಾಯಿತು.

ಆಹಾರ ಪ್ರಿಯರಾಗಿದ್ದ ಅಪ್ಪು ಅವರ ಅಭಿಮಾನಿಗಳಿಗೆ ಮಾಂಸಾಹಾರ ಸೇರಿದಂತೆ ಗೀ ರೈಸ್, ಅನ್ನ ಸಾರು,‌ ಅಕ್ಕಿ ಪಾಯಸ, ಮಸಾಲೆ ವಡೆ, ಸೇರಿದಂತೆ ವಿವಿಧ ರೀತಿಯ ಭಕ್ಷಗಳನ್ನು ಸಿದ್ಧ ಮಾಡಿ ಅಭಿಮಾನಿಗಳಿಗೆ ಬಡಿಸಲಾಯಿತು.

ಅನ್ನ ಸಂತರ್ಪಣೆ ಕಾರ್ಯಕ್ರಮಕ್ಕೆ 30 ಸಾವಿರಕ್ಕೂ ಹೆಚ್ಚು ಜನ ಸೇರಿದ್ದು, ಅಚ್ಚುಕಟ್ಟಾಗಿ ವ್ಯವಸ್ಥೆ ಮಾಡಲಾಗಿತ್ತು. ಬಿಗಿ ಪೊಲೀಸ್ ಬಂದೋಬಸ್ತ್ ಕೂಡ ನೇಮಿಸಲಾಗಿತ್ತು. ವೆಜ್ ಮತ್ತು ನಾನ್ ವೆಜ್ ಊಟಕ್ಕೆ ಪ್ರತ್ಯೇಕ ವ್ಯವಸ್ಥೆ ಮಾಡಲಾಗಿತ್ತು.

Advertisement

ಶಿವರಾಜ್ ಕುಮಾರ್, ರಾಘವೇಂದ್ರ ರಾಜ್ ಕುಮಾರ್, ಪುನೀತ್ ಪತ್ನಿ ಅಶ್ವಿನಿ ಅವರು ಅಭಿಮಾನಿಗಳಿಗೆ ಊಟವನ್ನು ಬಡಿಸಿ ಭಾವುಕರಾದರು.

ಗೇಟ್ ಬಂದ್
ಅಭಿಮಾನಿಗಳ ಸಂಖ್ಯೆ 3 ಗಂಟೆಯ ವೇಳೆಗೂ ಕಡಿಮೆಯಾಗದ ಹಿನ್ನಲೆಯಲ್ಲಿ ತ್ರಿಪುರವಾಸಿನಿಯ ಮುಖ್ಯ ದ್ವಾರವನ್ನು ಪೊಲೀಸರು ಬಂದ್ ಮಾಡಬೇಕಾಯಿತು.

ಸದಾಶಿವ ನಗರದ ಪುನೀತ್ ಅವರ ನಿವಾಸ ಬಳಿಯೂ ನೂರಾರು ಅಭಿಮಾನಿಗಳು ಜಮಾಯಿಸಿದ್ದಾರೆ.

ರಾಘವೇಂದ್ರ ರಾಜ್ ಕುಮಾರ್ ಧನ್ಯವಾದ
ಅಣ್ಣ ಸಂತರ್ಪಣೆ ಬಳಿಕ ಮಾತನಾಡಿದ ರಾಘವೇಂದ್ರ ರಾಜ್ ಕುಮಾರ್,ಅಪ್ಪು ದೊಡ್ಮನೆ ಮಗ ಅಲ್ಲ, ನಿಮ್ಮ ಮನೆ ಮಗ, ನಮ್ಮ ಅಪ್ಪು ಅಂತ ಸ್ವೀಕಾರ ಮಾಡಿದ್ದೀರಿ.ನಿಮಗೆ ಸಾಷ್ಟಾಂಗ ನಮಸ್ಕಾರಗಳು, ಸಹಕರಿಸಿದ ಎಲ್ಲರಿಗೂ ಧನ್ಯವಾದಗಳು ಎಂದರು.

ಸಮಾಧಿಗೆ ಉದಯನಿಧಿ ನಮನ
ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟ್ಯಾಲಿನ್ ಅವರ ಪುತ್ರ, ನಟ ಉದಯನಿಧಿ ಅವರು ಕಂಠೀರವ ಸ್ಟುಡಿಯೋಗೆ ಆಗಮಿಸಿ ಪುನೀತ್ ಅವರ ಸಮಾಧಿಗೆ ಪುಷ್ಪ ನಮನ ಸಲ್ಲಿಸಿದರು. ಪುನೀತ್ ಅಗಲುವಿಕೆಯ ಕುರಿತು ತೀವ್ರ ನೋವನ್ನು ಹೊರ ಹಾಕಿದರು.

Advertisement

Udayavani is now on Telegram. Click here to join our channel and stay updated with the latest news.

Next