Advertisement
ಬಿಜೆಪಿ ಮುಖಂಡ ಧಮೇಂದ್ರ ಸಿಂಗ್ ಹಾಗೂ ಸಿದ್ಧಾರ್ಥ ಸಿಂಗ್ ಅವರು ಅಪ್ಪು ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ, ಶಿಬಿರಕ್ಕೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಮನಷ್ಯ ಬದುಕಿದ್ದಾಗ ಅವನ ಬಗ್ಗೆ ತಿಳಿದಿರುವುದಿಲ್ಲ. ಆತ ಸತ್ತ ಮೇಲೆ ಅವನು ಮಾಡಿದ ಉತ್ತಮ ಕಾರ್ಯಗಳು ಬೆಳಕಿಗೆ ಬರುತ್ತವೆ. ಉಸಿರು ನಿಂತ ಮೇಲೆ ಅವರ ಹೆಸರು, ಸಾಮಾಜಿಕ ಕೆಲಸ-ಕಾರ್ಯಗಳು ಜನಮಾನಸದಲ್ಲಿ ಉಳಿಯುತ್ತವೆ. ಈ ನಿಟ್ಟಿನಲ್ಲಿ ನಟ ಪುನೀತ್ ರಾಜಕುಮಾರ್ ಅವರು ಅತ್ಯಂತ ಎತ್ತರದಲ್ಲಿ ನಿಲ್ಲುತ್ತಾರೆ. ಅವರು ವಿದ್ಯಾರ್ಥಿ-ಯುವಜನರಿಗೆ ಪ್ರೇರಣೆಯಾಗಿದ್ದಾರೆ. ಇಂದು ನಡೆದ ಸ್ವಯಂ ಪ್ರೇರಿತ ನೇತ್ರದಾನಕ್ಕೆ ನೋಂದಣಿ-ರಕ್ತದಾನ ಕಾರ್ಯಕ್ರಮದಲ್ಲಿ ಅನೇಕರು ನೇತ್ರ-ರಕ್ತದಾನ ಮಾಡಿರುವುದೇ ಸಾಕ್ಷಿಯಾಗಿದೆ. ನಟ ಪುನೀತ್ ಅವರ ಆದರ್ಶವನ್ನು ಯುವಜನರು ಮೈಗೂಡಿಸಿಕೊಂಡು ಸಮಾಜಮುಖೀಯಾಗಬೇಕು ಎಂದು ಸಲಹೆ ನೀಡಿದರು.
Related Articles
Advertisement
ಅನ್ನಸಂತರ್ಪಣೆ ಕಾರ್ಯದಲ್ಲಿ ಸಾವಿರಾರು ಜನರು ಊಟ ಮಾಡಿದರು. 18430ಕ್ಕೂ ಹೆಚ್ಚು ಜನರು, ನೇತ್ರದಾನಕ್ಕೆ ನೋಂದಣಿ ಮಾಡಿಸಿದರೆ, 315ಕ್ಕೂ ಹೆಚ್ಚು ಜನರು ರಕ್ತದಾನ ಮಾಡುವ ಮೂಲಕ ತಮ್ಮ ನೆಚ್ಚಿನ ನಾಯಕನಿಗೆ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಿದರು.