Advertisement

ಅಪ್ಪು ನೀನು ಇನ್ನು ಅಭಿಮಾನಿಗಳಲ್ಲಿಯೇ ಬದುಕುತ್ತಿದೀಯಾ

06:48 PM Nov 05, 2021 | Team Udayavani |

ಬೆಂಗಳೂರು : ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರಿಗೆ ಅಭಿಮಾನಿಗಳ ಪ್ರೀತಿ ಎಷ್ಟರ ಮಟ್ಟಿಗೆ ಇತ್ತು ಎನ್ನುವುದು ಅವರು ಅಕಾಲಿಕವಾಗಿ ಅಗಲಿದಾಗ ಬಹಿರಂಗಗೊಂಡಿದೆ, ಇಪ್ಪತ್ತು ಲಕ್ಷಕ್ಕೂ ಹೆಚ್ಚು ಮಂದಿ ಅವರ ಅಂತಿಮ ದರ್ಶನ ಪಡೆದರೆ , ಅವರ ಸಮಾಧಿ ಬಳಿ ಪ್ರತಿ ಇತ್ಯವೂ ನೂರಾರು ಅಭಿಮಾನಿಗಳು, ಗಣ್ಯಾತಿ ಗಣ್ಯರು ಆಗಮಿಸಿ ಭಾವುಕರಾಗುತ್ತಿದ್ದಾರೆ.

Advertisement

ತಮ್ಮನ ಅಗಲುವಿಕೆಯಿಂದ ನೊಂದ ಅಣ್ಣ ರಾಘವೇಂದ್ರ ರಾಜ್ ಕುಮಾರ್ ಅವರು ಶುಕ್ರವಾರ, ಅಭಿಮಾನಿಯೊಬ್ಬರ ಮನೆಯಲ್ಲಿನ ಫೋಟೋ ಸಹಿತ ಟ್ವೀಟ್ ಮಾಡಿದ್ದಾರೆ.

”ಅಪ್ಪು, ನೀನು ಇನ್ನು ಅಭಿಮಾನಿಗಳಲ್ಲಿಯೇ ಬದುಕುತ್ತಿದೀಯಾ ಎಂಬ ಭಾವನೆ ನನಗೆ ಕಂದ.’ ದೇವರನ್ನು ಪೂಜಿಸುವ ಜಾಗದಲ್ಲಿ ಅಪ್ಪುವಿಗೆ ಕೊಟ್ಟಿರುವ ಈ ಸ್ಥಾನಕ್ಕೆ ನನ್ನ ಸಾಷ್ಟಾಂಗ ನಮಸ್ಕಾರಗಳು.ಈ ಸಂದರ್ಭದಲ್ಲಿ ಇಂತಹ ಕಾರ್ಯಗಳಿಂದ ನಮಗೆ ಇನ್ನಷ್ಟು ಶಕ್ತಿ ತುಂಬುವ ನಮ್ಮ ನೆಚ್ಚಿನ ಅಭಿಮಾನಿ ದೇವರುಗಳಿಗೆ ನನ್ನ ವಂದನೆಗಳು.- ನಿಮ್ಮ ರಾಘಣ್ಣ” ಎಂದು ಟ್ವೀಟ್ ನಲ್ಲಿ ಬರೆದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next