Advertisement

Bhairathi Ranagal: ಭೈರತಿ ಪಾತ್ರಕ್ಕೊಂದು ಸದುದ್ದೇಶವಿದೆ..: ಶಿವರಾಜ್‌ ಕುಮಾರ್‌

10:38 AM Nov 15, 2024 | Team Udayavani |

ಶಿವರಾಜ್‌ ಕುಮಾರ್‌ ನಾಯಕರಾಗಿರುವ “ಭೈರತಿ ರಣಗಲ್‌’ ಇಂದು ತೆರೆಕಾಣುತ್ತಿದೆ. ಈಗಾಗಲೇ ಟೀಸರ್‌, ಟ್ರೇಲರ್‌ ಮೂಲಕ ದೊಡ್ಡ ಮಟ್ಟದಲ್ಲಿ ನಿರೀಕ್ಷೆ ಹುಟ್ಟಿಸಿರುವ ಸಿನಿಮಾವಿದು. ನಟನೆ ಜೊತೆಗೆ ಗೀತಾ ಪಿಕ್ಚರ್ ಬ್ಯಾನರ್‌ ನಡಿ ಶಿವಣ್ಣ ಈ ಚಿತ್ರವನ್ನು ನಿರ್ಮಾಣ ಕೂಡಾ ಮಾಡಿದ್ದಾರೆ. ಈಗಾಗಲೇ ಬಹುತೇಕ ಶೋಗಳು ಹೌಸ್‌ಫ‌ುಲ್‌ ಆಗಿವೆ. ಹೀಗೆ ಭರ್ಜರಿ ನಿರೀಕ್ಷೆ ಹುಟ್ಟಿಸಿರುವ ಈ ಚಿತ್ರದ ಕುರಿತಾದ ಒಂದಷ್ಟು ಪ್ರಶ್ನೆಗಳಿಗೆ ಶಿವಣ್ಣ ಉತ್ತರಿಸಿದ್ದಾರೆ

Advertisement

ಟೀಸರ್‌, ಟ್ರೇಲರ್ದೊಡ್ಡ ಮಟ್ಟದಲ್ಲಿ ಹಿಟ್ಆಗಿದೆ. ಹೇಗನಿಸ್ತಾ ಇದೆ?

ಖುಷಿ ಇದೆ. ಜೊತೆಗೆ ಜನ ಹೇಗೆ ಸ್ವೀಕರಿಸುತ್ತಾರೋ ಎಂಬ ಕುತೂಹಲ, ಕಾತರವೂ ಇದೆ. ನಮ್ಮ ಇಷ್ಟು ದಿನ ಗಳ ಪರಿಶ್ರಮ ಇವತ್ತಿನಿಂದ ಜನರ ಮಡಿಲಿಗೆ ಹಾಕುತ್ತಿ ದ್ದೇವೆ. ನೋಡಬೇಕು, ಹೇಗೆ ತಗೋತಾರೆ ಎಂದು..

ಭೈರತಿ ಶಿವಣ್ಣನಿಗೆ ಎಷ್ಟು ಸ್ಪೆಷಲ್‌?

ಸ್ಪೆಷಲ್‌ ಅನ್ನೋದಕ್ಕಿಂತ ಇದೊಂದು ಬೇರೆ ತರಹ ಸಿನಿಮಾ. ಮμ¤ ಮಾಡುವಾಗ ಆ ಪಾತ್ರ ಇಷ್ಟೊಂದು ಫೇಮಸ್‌ ಆಗುತ್ತೆ ಎಂದು ಗೊತ್ತಿರಲಿಲ್ಲ. ಆದರೆ, ಆ ಪಾತ್ರವನ್ನು ಜನ ತುಂಬಾ ಇಷ್ಟಪಟ್ಟರು. ಅವತ್ತೇ ಈ ಸಿನಿಮಾದ ಪ್ರೀಕ್ವೆಲ್‌ ಮಾಡಲು ನಿರ್ಧರಿಸಿ, ಟೈಟಲ್‌ ಕೂಡಾ ರಿಜಿಸ್ಟರ್‌ ಮಾಡಿಸಿದೆವು

Advertisement

ಕಥೆಯಲ್ಲಿ ತುಂಬಾ ಇಷ್ಟವಾದ ಅಂಶ ಯಾವುದು?

ಇಡೀ ಕಥೆಯೇ ಬೇರೆ ಲೆವೆಲ್‌ಗೆ ಇದೆ. ಇದು ರಿವೆಂಜ್‌ ಮೇಲೆ ಹೋಗುವ ಕಥೆಯಾದರೂ ಚಿತ್ರಕ್ಕೊಂದು ಒಳ್ಳೆಯ ಆಶಯವಿದೆ. ಇಡೀ ಜರ್ನಿಯೇ ಬೇರೆ ತರಹ ಇದೆ. ರಣಗಲ್‌ ಪಾತ್ರಕ್ಕೊಂದು ವ್ಯಾಲ್ಯೂ ಇದೆ. ಒಂದು ಒಳ್ಳೆಯ ಉದ್ದೇಶವಿರುವ ಪಾತ್ರ. ಸಾಕಷ್ಟು ತ್ಯಾಗ ಮಾಡಿ, ಆ ಹಂತಕ್ಕೆ ಬಂದಿರುವ ಪಾತ್ರವದು. ಆತನಿಗೆ ಆತನ ಜನರೆಂದರೆ ಪ್ರಾಣ. ಅದು ಯಾಕೆ ಎನ್ನುವುದೇ ಕಥೆ.

ಸಿನಿಮಾದ ಮೇಕಿಂಗ್ನಿಂದ ಹಿಡಿದು ತಾರಾಬಳಗ ತುಂಬಾ ಅದ್ಧೂರಿಯಾಗಿದೆ?

ಹೌದು, ಇಡೀ ಕ್ಯಾನ್ವಾಸ್‌ ತುಂಬಾ ದೊಡ್ಡದಿದೆ. ಮೇಕಿಂಗ್‌ ಕೂಡಾ ಅಷ್ಟೇ. ಕಥೆಗೆ ಏನು ಬೇಕೋ ಅದನ್ನು ನೀಡಿದ್ದೇವೆ. ನಿರ್ದೇಶಕರು ಅದನ್ನು ಚೆನ್ನಾಗಿ ಬಳಸಿಕೊಂಡಿದ್ದಾರೆ.

ಚಿತ್ರವನ್ನು ನೀವೇ ನಿರ್ಮಾಣ ಮಾಡಲು ಕಾರಣ?

ಅದು “ಮಫ್ತಿ’ ಮಾಡುವ ಸಮಯದಲ್ಲೇ ನಿರ್ಧಾರವಾಗಿತ್ತು. ಅದರಂತೆ ಮಾಡಿದ್ದೇವೆ.

ನಿರ್ದೇಶಕ ನರ್ತನ್ಬಗ್ಗೆ ಹೇಳಿ? ಇಷ್ಟು ವರ್ಷ ಕಾದು ಮತ್ತೆ ನಿಮಗೆ ಸಿನಿಮಾ ಮಾಡಿದ್ದಾರೆ?

ಇಡೀ ಸಿನಿಮಾನಾ ತುಂಬಾ ನೀಟಾಗಿ ಮಾಡಿದ್ದಾರೆ. ಸಣ್ಣ ಸಣ್ಣ ಎಕ್ಸ್‌ಪ್ರೆಶನ್‌ ಬಗ್ಗೆಯೂ ಗಮನಹರಿಸುತ್ತಿದ್ದರು. ಒಬ್ಬ ನಿರ್ದೇಶಕನಿಗೆ ಇದು ತುಂಬಾ ಮುಖ್ಯ. ನರ್ತನ್‌ ಏನು ಬೇಕೋ ಅದನ್ನು ಪಡೆಯದೇ ಬಿಡುತ್ತಿರಲಿಲ್ಲ.

ಇಡೀ ಸಿನಿಮಾ ತುಂಬಾ ರಗಡ್ಆಗಿ ಕಾಣುತ್ತಿದೆ. ಔಟ್ಅಂಡ್ಮಾಸ್ಸಿನಿಮಾನಾ?

ಎರಡೂ ಇದೆ, ಕ್ಲಾಸ್‌-ಮಾಸ್‌. ಚಿತ್ರದಲ್ಲಿ ಫೈಟ್ಸ್‌ ಇದೆ. ಆದರೆ, ಸಿನಿಮಾ ಎಮೋಶನ್ಸ್‌ ಮೇಲೆ ಹೋಗುತ್ತೆ. ರಣಗಲ್‌ ಪಾತ್ರದ ಕಷ್ಟದ ಹಾದಿ ಇದೆ. ಆತನಿಗೆ ಸುಲಭವಾಗಿ ಆ ಪಟ್ಟ ಸಿಕ್ಕಿರುವುದಿಲ್ಲ. ಅದರ ಹಿಂದಿನ ಕಥೆಯಲ್ಲಿ ಎಮೋಶನ್ಸ್‌ ಹೆಚ್ಚಿದೆ.

ಟೀಸರ್‌, ಟ್ರೇಲರ್ನೋಡಿದಾಗ ಒಂದು ಕಡೆ ಭೈರತಿ ಇನ್ನೊಂದು ಕಡೆ ಲಾಯರ್‌?

ಕಥೆಯಲ್ಲಿ ತುಂಬಾ ಏರಿಳಿತಗಳಿವೆ. ಅದೇನು, ಯಾಕೆ ಎನ್ನುವುದನ್ನು ತೆರೆಮೇಲೆ ನೋಡಿದರೆ ಚೆಂದ.

ರವಿಪ್ರಕಾಶ್ರೈ

Advertisement

Udayavani is now on Telegram. Click here to join our channel and stay updated with the latest news.

Next