Advertisement

ತ್ಯಾಜ್ಯ ಸಂಸ್ಕರಣಾ ಘಟಕ ಸ್ಥಾಪನೆಗೆ ಸಮ್ಮತಿ

01:59 PM Dec 30, 2020 | Team Udayavani |

ಮೈಸೂರು: ಮೈಸೂರು ಮಹಾನಗರ ಪಾಲಿಕೆಯ ಕೌನ್ಸಿಲ್‌ ಸಭೆಯಲ್ಲಿ ಸುದೀರ್ಘ‌ ಚರ್ಚೆಯ ಬಳಿಕ ಸುಸ್ಥಿರ ಟ್ರಸ್ಟ್‌ಗೆ 5 ವರ್ಷಗಳ ಕಾಲ ಕಟ್ಟಡ ತ್ಯಾಜ್ಯ ಸಂಸ್ಕರಣಾ ಘಟಕ ಸ್ಥಾಪನೆ ಹಾಗೂ ನಿರ್ವಹಣೆ ಷರತ್ತುಬದ್ಧ ಅನುಮತಿ ನೀಡಲು ಒಪ್ಪಿಗೆ ನೀಡಲಾಯಿತು.

Advertisement

ಇದಕ್ಕೂ ಮುನ್ನ ನಗರಪಾಲಿಕೆ ಆರೋಗ್ಯಾಧಿಕಾರಿ ಡಾ.ನಾಗರಾಜ್‌ ಈ ಬಗ್ಗೆ ಮಾಹಿತಿ ನೀಡಿ, ಕಳೆದ ಕೌನ್ಸಿಲ್‌ ಸಭೆಯ ನಂತರ ಈ ಸಂಬಂಧ ಪತ್ರಿಕಾ ಪ್ರಕಟಣೆ ಹೊರಡಿಸಲಾಗಿದೆ. ಅದನ್ನು ನೋಡಿ ಪ್ರಸ್ತಾವನೆ ಸಲ್ಲಿಸಿರುವ ನಾಲ್ಕು ಸಂಸ್ಥೆಗಳಲ್ಲಿ ಯಾವ ಸಂಸ್ಥೆಗೂ ಕಟ್ಟಡ ತ್ಯಾಜ್ಯ ಸಂಸ್ಕರಣೆಯಲ್ಲಿ ಅನುಭವ ಇಲ್ಲ ಎಂದು ಮಾಹಿತಿ ನೀಡಿದರು.

ಈ ಬಗ್ಗೆ ಮಾತನಾಡಿದ ಜೆಡಿಎಸ್‌ ಸದಸ್ಯರಾದ ಪ್ರೇಮ ಶಂಕರೇಗೌಡ ಹಾಗೂ ಎಸ್‌ಬಿಎಂ ಮಂಜು, ನಿಯಮದ ಪ್ರಕಾರ ಸುಸ್ಥಿರ ಟ್ರಸ್ಟ್‌ ಟೆಂಡರ್‌ನಲ್ಲಿಭಾಗವಹಿಸಬೇಕಿತ್ತು. ಈಗ ಇದ್ದಕ್ಕಿ ದ್ದಂತೆ ಅವರಿಗೆ ಜವಾಬ್ದಾರಿ ವಹಿಸುವುದು ಹೇಗೆ ಎಂದು ಪ್ರಶ್ನಿಸಿದರು. ಟೆಂಡರ್‌ ಇಲ್ಲದೆ ಅವರಿಗೆ ಜವಾಬ್ದಾರಿ ನೀಡಲು ಹೇಗೆಸಾಧ್ಯ? ಎಂದು ಪ್ರಶ್ನಿಸಿದರು.ಈ ವೇಳೆ ಸಂಸದ ಪ್ರತಾಪ್‌ ಸಿಂಹ ಸಭೆಗೆ ಪ್ರವೇಶಿಸಿ ಮಾತನಾಡಿ, ಸುಸ್ಥಿರ ಟ್ರಸ್ಟ್‌ನವರಿಗೆ ಕೆಲಕಾಲ ಷರತ್ತುಬದ್ಧ ಅನುಮತಿ ನೀಡೋಣ. ಬೇರೆ ಸಂಸ್ಥೆಗಳು ಪಾಲಿಕೆಗೆ ಈಮೂಲಕ ಆದಾಯ ಬರುವ ಯೋಜನೆಗಳನ್ನು ತಂದರೆ ಈ ಬಗ್ಗೆ ಯೋಚಿಸೋಣ. ಸದ್ಯಕ್ಕೆ ಈ ಯೋಜನೆಗೆ ಅನು  ಮೋದನೆ ನೀಡಿ ಎಂದು ಕೋರಿದರು. ನಂತರ ಒಪ್ಪಿಗೆದೊರೆಯಿತು. ನಗರದ ರೆವಿನ್ಯೂ ಬಡಾವಣೆಗಳಿಗೆ ಖಾತೆ ಮಾಡಿಕೊಡುವ ಸಂಬಂಧ ಕ್ರಮ ಕೈಗೊಳ್ಳಲು ಸಚಿವ ಭೈರತಿ ಬಸವರಾಜು ಅವರಲ್ಲಿ ಮನವಿ ಮಾಡಿ ದ್ದೇನೆ. ಈ ಬಗ್ಗೆ ಕ್ಯಾಬಿನೆಟ್‌ನಲ್ಲಿ ತೀರ್ಮಾನ ವಾಗುತ್ತದೆ.ಯುಜಿ ಕೇಬಲ್‌ ಕಾಮಗಾರಿ ಸಂಬಂಧ ಸೆಸ್ಕ್ ಅವರೊಂದಿಗೆ ಸಭೆ ಮಾಡೋಣ, ಮೈಸೂರನ್ನು ಸ್ಮಾರ್ಟ್‌ ಸಿಟಿ ಪಟ್ಟಿಗೆ ಸೇರಿ ಸಲು ಮನವಿ ಮಾಡುತ್ತೇನೆ. ಮುಂದಿನ ಅಧಿವೇಶನದಲ್ಲಿ ಅಗತ್ಯ ವಿಚಾರಗಳನ್ನು ಪ್ರಸ್ತಾಪಿಸುತ್ತೇನೆ ಎಂದು ಸಂಸದರು ವಿವಿಧ ಪ್ರಶ್ನೆಗಳಿಗೆ ಉತ್ತರಿಸಿದರು.

ವಿದ್ಯಾರಣ್ಯಪುರಂನಲ್ಲಿ ಕಸ ಸಂಸ್ಕರಣಾ ಘಟಕ ಸ್ಥಾಪನೆಯ ಸಂಬಂಧ ಆದಷ್ಟು ಬೇಗ ಕೌನ್ಸಿಲ್‌ ಸಭೆ ಯಲ್ಲಿ ಚರ್ಚೆ ಮಾಡಿ ನಿರ್ಧಾರ ತೆಗೆದುಕೊಳ್ಳಿ. ಇದರಿಂದಾಗಿ ಸುತ್ತ  ಮುತ್ತಲಿನ ಜನರಿಗೆ ಆಗುತ್ತಿರುವ ಕಿರಿಕಿರಿ ತಪ್ಪುತ್ತದೆ. ಜೊತೆಗೆ ನಗರದ ಸ್ವಚ್ಛತೆ ಯಲ್ಲಿ ಇದು ಪ್ರಮುಖ ಪಾತ್ರ ವಹಿಸು ತ್ತದೆ ಎಂದು ಪ್ರತಾಪ್‌ ಸಿಂಹ ಮನವಿ ಮಾಡಿದರು. ತಮ್ಮ ಸ್ವಂತ ಉಪಯೋಗಕ್ಕೆ ಅನಧಿಕೃತವಾಗಿ ರಸ್ತೆ ಅಗೆಯುವವರಿಗೆ ದಂಡ ವಿಧಿ ಸಲು ನಿರ್ಧರಿಸಲಾಗಿದೆ. ಇದೇ ರೀತಿ ರಸ್ತೆಗಳಲ್ಲಿ ಟ್ರಾನ್ಸ್‌ಫಾರ್ಮರ್‌ಗಳನ್ನು ಹಾಕು  ವವರಿಗೂ ದಂಡ ವಿಧಿಸಬೇಕು. ಇದರಿಂದಾಗಿ ಸಾರ್ವಜನಿಕರಿಗೆ ಸಮಸ್ಯೆ ಯಾಗುತ್ತಿದೆ ಎಂದು ಬಿ.ವಿ.ಮಂಜು  ನಾಥ್‌ ಅಭಿಪ್ರಾಯಪಟ್ಟರು.

ಸಭೆಯಲ್ಲಿ ಉಪಮಹಾಪೌರರಾದ ಶ್ರೀಧರ್‌, ವಿರೋಧ ಪಕ್ಷದ ನಾಯಕಿ ಪ್ರೇಮಾ ಶಂಕರೇಗೌಡ, ಆಡಳಿತ ಪಕ್ಷದ ನಾಯಕ ಸುಬ್ಬಯ್ಯ, ನಗರಪಾಲಿಕೆ ಸದಸ್ಯರು, ಆಯುಕ್ತ ಗುರುದತ್ತ ಹೆಗಡೆ, ಹೆಚ್ಚುವ‌ರಿ ಆಯುಕ್ತ ಶಶಿಕುಮಾರ್‌, ನಗರ ಪಾಲಿಕೆ ಅಧಿಕಾರಿಗಳು ಇದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next