Advertisement
ಪಿಎಚ್.ಡಿ ಮುಗಿಸಲು 5 ವರ್ಷಗಳು ಪ್ಲಸ್ 2 ವರ್ಷಗಳ ಅವಕಾಶ ಈವರೆಗೆ ಇತ್ತು. ಇದನ್ನು ಆರು ಪ್ಲಸ್ ಒಂದು ವರ್ಷಕ್ಕೆ ಮಾರ್ಪಾಡು ಮಾಡಲಾಗಿದೆ. ಅಭ್ಯರ್ಥಿ ಐದು ವರ್ಷದಲ್ಲಿ ಪಿಎಚ್.ಡಿ ಮುಗಿಸದಿದ್ದರೆ ಅವಧಿ ವಿಸ್ತರಣೆಗೆ ಸರಾಸರಿ 30 ಸಾವಿರ ರೂ. ಶುಲ್ಕ ಪಾವ ತಿಸಬೇಕಿತ್ತು. ಈಗ ಆರು ವರ್ಷಗಳವರೆಗೆ ಅವಕಾಶ ನೀಡಲಾಗುವುದು. ಈ ಅವಧಿಯಲ್ಲಿ ಪಿಎಚ್.ಡಿ ಮುಗಿಸದಿ ದ್ದರೆ ವಿಸ್ತರಣೆಗೆ ನಿಗದಿತ ಶುಲ್ಕವನ್ನು ಕಟ್ಟಬೇಕಾಗುತ್ತದೆ. ಮೈಸೂರು ವಿವಿ ಕುಲಪತಿ ಪ್ರೊ.ಜಿ. ಹೇಮಂತಕುಮಾರ್‌ಅಧ್ಯಕ್ಷತೆಯಲ್ಲಿ ಮಾನಸಗಂಗೋತ್ರಿಯ ಲಲಿತ ಕಲಾ ಕಾಲೇಜಿನ ಸಭಾಂಗಣದಲ್ಲಿ ನಡೆದ ಶಿಕ್ಷಣ ಮಂಡಳಿ ಸಭೆಯಲ್ಲಿ ಅನುಮೋದನೆ ನೀಡಲಾಯಿತು.
Advertisement
ಪಿಎಚ್‌ಡಿ ನಿಯಮಾವಳಿ ತಿದ್ದುಪಡಿಗೆ ಅನುಮೋದನೆ
05:43 PM Sep 24, 2022 | Team Udayavani |
Advertisement
Udayavani is now on Telegram. Click here to join our channel and stay updated with the latest news.