Advertisement

ಪ್ರತಿ ಜಿಲ್ಲೆಗೆ ಗೋಶಾಲೆ ಸೇರಿದಂತೆ ವಿವಿಧ ಯೋಜನೆಗಳಿಗೆ ಅನುಮೋದನೆ: ಬಸವರಾಜ್ ಬೊಮ್ಮಾಯಿ

01:15 PM Jul 15, 2021 | Team Udayavani |

ಬೆಂಗಳೂರು: ಗದಗ ಪಶುಸಂಗೋಪನಾ ಕಾಲೇಜ್ ಎರಡನೇ ಹಂತದ ಕಾಮಗಾರಿಗೆ ಒಪ್ಪಿಗೆ ನೀಡಲಾಗಿದೆ, ಪ್ರತಿ ಜಿಲ್ಲೆಗೆ ಗೋಶಾಲೆ ತೆರೆಯಲು ತೀರ್ಮಾನಿಸಲಾಗಿದೆ. ಇದಕ್ಕಾಗಿ ಮೊದಲ ಹಂತದಲ್ಲಿ 15 ಕೋಟಿ ಬಿಡುಗಡೆ ಮಾಡಲಾಗುವುದು ಎಂದು ಗೃಹ ಸಚಿವ ಬಸವರಾಜ್ ಬಸವರಾಜ್ ಬೊಮ್ಮಾಯಿ ತಿಳಿಸಿದ್ದಾರೆ.

Advertisement

ಪತ್ರಿಕಾಗೋಷ್ಟಿಯನ್ನು ಉದ್ದೇಶಿಸಿ ಮಾತನಾಡಿದ ಅವರು ಕೃಷಿ ಇಲಾಖೆಯಿಂದ ಬೆಳೆ ಸಮೀಕ್ಷೆ ಮಾಡಲಾಗುವುದು. ಇದಕ್ಕಾಗಿ ಮೊಬೈಲ್ ಆ್ಯಪ್ ಮೂಲಕ ಸಮೀಕ್ಷೆ ನಡೆಸಲು ತೀರ್ಮಾನಿಸಲಾಗಿದೆ. ರೈತರು ಸ್ವಯಂ ಸಮೀಕ್ಷೆ ಮಾಡುವುದಕ್ಕೂ ಅವಕಾಶವಿದೆ.

ವಿಶ್ವ ಬಂಡವಾಳ ಹೂಡಿಕೆದಾರರ ಸಮಾವೇಶ, ಇನ್ವೆಸ್ಟ್ ಕರ್ನಾಟಕವನ್ನು 2022 ಫೆ 9, 10, 11 ರಂದು ಪ್ಯಾಲೆಸ್ ಗ್ರೌಂಡ್ ನಲ್ಲಿ ಮಾಡಲು ತೀರ್ಮಾನಿಸಲಾಗಿದೆ ಎಂದು ತಿಳಿಸಿದ್ದಾರೆ.

ರಾಜ್ಯದಲ್ಲಿ 9 ಆಕ್ಷಿಜನ್ ಘಟಕ ಇದೆ. 815 ಉತ್ಪಾದನಾ ಸಾಮರ್ಥ್ಯ ಇದೆ. 5000 ಮೆಟ್ರಿಕ್ ಟನ್ ಸಂಗ್ರಹ ಸಾಮರ್ಥ್ಯ ಇದೆ. ಉತ್ಪಾದನಾ ಸಾಮರ್ಥ್ಯ ಹೆಚ್ಚಳಕ್ಕೆ ಖಾಸಗಿ ಬಂಡವಾಳದಾರರು ಬಂದರೆ ಸಬ್ಸಿಡಿ ನೀಡಲಾಗುವುದು. ಕನಿಷ್ಠ 10 ಕೋಟಿ ಬಂಡವಾಳ ಹೂಡಬೇಕು ಎಂದರು.

ದಾಸನಪುರದಲ್ಲಿ ಎಪಿಎಂಸಿ 93 ಮಳಿಗೆಗಳಿವೆ. ಲೀಸ್ ಕಂ ಸೇಲ್ 24ಲಕ್ಷ ದಿಂದ 20 ಲಕ್ಷಕ್ಕೆ ಕಡಿಮೆ ಮಾಡಲಾಗಿದೆ. ಬಾಡಿಗೆ 20 ಸಾವಿರದಿಂದ 15 ಸಾವಿರಕ್ಕೆ ಇಳಿಸಲು ತೀರ್ಮಾನಿಸಲಾಗಿದೆ.

Advertisement

ಜೆಒಸಿ ಪಿಯುಸಿ ತತ್ಸಮಾನವಾದ ಶಿಕ್ಷಣ ಎಂದು ಪರಿಗಣಿಸಲಾಗುವುದು. ದೇವದುರ್ಗ ಎಂಜನೀಯರ್ ಕಾಲೇಜ್ ಗೆ 58 ಕೋಟಿ ರೂ. ಹಣ ಬಿಡುಗಡೆಗೆ ನಿರ್ಧರಿಸಲಾಗಿದೆ. ಕೆ.ಎಸ್ ಎಫ್.ಸಿ ಕಟ್ ಬಾಕಿ ಆಗಿರುವವರಿಗೆ ಅನುಕೂಲ ಕಲ್ಪಿಸಲು ಕ್ರಮ ವಹಿಸಲಾಗುವುದು. 15000 ಜನರು ಈಗಾಗಲೇ ಅನುಕೂಲ ಪಡೆದಿದ್ದಾರೆ. ಇನ್ನೂ 2-3.ಸಾವಿರ ಜನರು ಅನುಕೂಲ ಪಡೆಯಲಿದ್ದಾರೆ ಎಂದು ಹೇಳಿದರು.

ಕಾರಾಗೃಹ ಅಭಿವೃದ್ಧಿ ಮಂಡಳಿ ಅಧಿವೇಶನದಲ್ಲಿ ತರಲು ತೀರ್ಮಾನಿಸಲಾಗಿದ್ದು, 139 ಖೈದಿಗಳ ಸನ್ನಡತೆ ಆಧಾರದ ಮೇಲೆ ಬಿಡುಗಡೆಗೆ ಒಪ್ಪಿಗೆ ನೀಡಲಾಗಿದೆ. ಪ್ರವಾಹ ಸಂದರ್ಭದಲ್ಲಿ ಮನೆ ಕಳೆದುಕೊಂಡವರಿಗೆ ಪರಿಹಾರ ನೀಡಲು ಅನುಮೋದನೆ ಮಾಡಲಾಗಿದೆ.

ಕಂದಾಯ ಇಲಾಖೆಯಲ್ಲಿ ಸಾಮಾನ್ಯ ಹಿರಿತನ ಆಧಾರದಲ್ಲಿ ಬಡ್ತಿ ನೀಡುವ ಬಗ್ಗೆ ಬೇಡಿಕೆ ಇದ್ದು, ಅದಕ್ಕೆ ಸಂಪುಟ ಒಪ್ಪಿಗೆ ನೀಡಿದೆ. ಜರ್ಮನ್ ಟೆಕ್ನಾಲಜಿ ಇನ್ ಸ್ಟಿಟ್ಯೂಷನ್ ಕಟ್ಟಡ ನಿರ್ಮಾಣಕ್ಕೆ ಮಂಗಳೂರು ಮತ್ತು ಬೆಳಗಾವಿಯಲ್ಲಿ ಕಟ್ಟಡ ನಿರ್ಮಾಣಕ್ಕೆ ನಿರ್ಧರಿಸಲಾಗಿದ್ದು, ಶಿರಗುಪ್ಪಿ ಪಟ್ಟಣಕ್ಕೆ ಕುಡಿಯುವ ನೀರು ಒದಗಿಸಲು 45 ಕೋಟಿ ನೀಡಲಾಗುವುದು.

ರಾಣೆಬೆನ್ನೂರು 18 ಕೆರೆ ತುಂಬಿಸಲು 206 ಕೋಟಿ ಯೋಜನೆಗೆ ಒಪ್ಪಿಗೆ ಸಿಕ್ಕಿದೆ. ಕೊಪ್ಪಳ ಜಿಲ್ಲೆ ಗಂಗಾವತಿ 5 ಕೆರೆ ತುಂಬಿಸಲು 93 ಕೋಟಿ ರು ಗೆ ಅನುಮೋದನೆ ನೀಡಲಾಗಿದೆ. ನೇತ್ರಾವತಿಗೆ ಅಡ್ಡಲಾಗಿ ದಕ್ಷಿಣಕನ್ನಡ ದಲ್ಲಿ ಬ್ರಿಡ್ಜ್ ಕಂ ಬ್ಯಾರೇಜ್ ನಿರ್ಮಾನಕ್ಕೆ 66ಕೊಟಿಗೆ ಅನುಮೋದನೆ. ವಿಧಾನಸೌಧದ ಆವರಣದಲ್ಲಿ ಬಸವಣ್ಣನ ಮೂರ್ತಿ ಸ್ಥಾಪಿಸಲು ಸಂಪುಟ ಒಪ್ಪಿಗೆ ನೀಡಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next