Advertisement

`Go First’ ಪುನಾರಂಭಕ್ಕೆ ಅನುಮೋದನೆ

08:34 PM Jul 21, 2023 | Team Udayavani |

ನವದೆಹಲಿ: ಕೆಲವು ಷರತ್ತುಗಳಿಗೆ ಒಳಪಟ್ಟು 15 ವಿಮಾನಗಳು ಹಾಗೂ 114 ದೈನಂದಿನ ವಿಮಾನಗಳೊಂದಿಗೆ ಕಾರ್ಯಾಚರಣೆಯನ್ನು ಪುನರ್‌ ಆರಂಭಿಸಲು ಗೋ ಫ‌ಸ್ಟ್‌ ಕಂಪನಿಗೆ ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯ(ಡಿಜಿಸಿಎ) ಅನುಮೋದನೆ ನೀಡಿದೆ.

Advertisement

ಬಜೆಟ್‌ ವಿಮಾನಯಾನ ಸೇವೆ ಒದಗಿಸುತ್ತಿದ್ದ ಗೋ ಫ‌ಸ್ಟ್‌ ಮೇ 3ರಂದು ಕಾರ್ಯಾಚರಣೆ ಸ್ಥಗಿತಗೊಳಿಸಿತ್ತು. ಪ್ರಸ್ತುತ ಅದರ ದಿವಾಳಿತನ ಪರಿಹಾರ ಪ್ರಕ್ರಿಯೆ ಚಾಲ್ತಿಯಲ್ಲಿದೆ. “ದೆಹಲಿ ಹೈಕೋರ್ಟ್‌ ಮತ್ತು ರಾಷ್ಟ್ರೀಯ ಕಂಪನಿ ಕಾನೂನು ಮಂಡಳಿ(ಎನ್‌ಸಿಎಲ್‌ಟಿ)ಯಲ್ಲಿ ಬಾಕಿ ಇರುವ ರಿಟ್‌ ಅರ್ಜಿ, ಇತರೆ ಅರ್ಜಿಗಳ ತೀರ್ಪಿಗೆ ಒಳಪಟ್ಟು ಕಾರ್ಯಾಚರಣೆ ಪುನರ್‌ ಆರಂಭಿಸಲು ಗೋ ಫ‌ಸ್ಟ್‌ ಕಂಪನಿಗೆ ಅನುಮೋದನೆ ನೀಡಲಾಗಿದೆ” ಎಂದು ಡಿಜಿಸಿಎ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next