Advertisement

Apprenticeship Course: ಪದವಿ ಜತೆ ಅಪ್ರಂಟಿಸ್‌ಶಿಪ್‌ ಕೋರ್ಸ್‌ ಆರಂಭ…

09:31 PM Aug 14, 2024 | Team Udayavani |

ಬೆಂಗಳೂರು: ರಾಜ್ಯದ 45 ಸರಕಾರಿ ಕಾಲೇಜುಗಳಲ್ಲಿ “ಶಿಷ್ಯವೃತ್ತಿ (ಅಪ್ರಂಟಿಸ್‌ಶಿಪ್‌) ಆಧಾರಿತ ಪದವಿ ಕೋರ್ಸ್‌’ (ಎಇಡಿಪಿ) ಆರಂಭಿಸಲು ಉನ್ನತ ಶಿಕ್ಷಣ ಇಲಾಖೆಯು ಕೇಂದ್ರ ಯೋಜನೆ ಮತ್ತು ನೀತಿಗಳ ಸಂಶೋಧನ ಕೇಂದ್ರ (ಕ್ರಿಸ್‌³)ದ ಜತೆಗೆ ಒಪ್ಪಂದ ಮಾಡಿಕೊಂಡಿದೆ. ಈ ವರ್ಷ 1,373 ವಿದ್ಯಾರ್ಥಿಗಳು ಎಇಡಿಪಿಗೆ ದಾಖಲಾಗಿದ್ದಾರೆ.

Advertisement

ಉನ್ನತ ಶಿಕ್ಷಣ ಇಲಾಖೆ, ಕರ್ನಾಟಕ ರಾಜ್ಯ ಉನ್ನತ ಶಿಕ್ಷಣ ಪರಿಷತ್‌, ಸಂಯೋಜಕ ವಿಶ್ವವಿದ್ಯಾನಿಲಯಗಳು, ಕ್ರಿಸ್‌³ (ಯೋಜನೆ ಮತ್ತು ನೀತಿಗಳಲ್ಲಿ ಸಂಶೋಧನೆಗಾಗಿನ ಸಂಸ್ಥೆ), ಸೆಕ್ಟರ್‌ ಸ್ಕಿಲ್‌ ಕೌನ್ಸಿಲ್‌ಗ‌ಳಲ್ಲಿ ಸಹಭಾಗಿತ್ವದಲ್ಲಿ ಈ ಕಾರ್ಯಕ್ರಮ ಸ್ನಾತಕ ಪದವಿ ಹಂತದಲ್ಲಿ ಅನುಷ್ಠಾನಗೊಳ್ಳಲಿದೆ. ಈ ಕಾರ್ಯಕ್ರಮದಡಿ ವಿದ್ಯಾರ್ಥಿಗಳಿಗೆ ಅಂತಿಮ ಸೆಮಿಸ್ಟರ್‌ನಲ್ಲಿ ಇಂಟರ್ನ್ಶಿಪ್‌ ಜತೆಗೆ 10 ಸಾವಿರ ರೂ. ಶಿಷ್ಯವೇತನ ಸಿಗಲಿದೆ.

ಮಂಗಳವಾರ ಈ ಒಪ್ಪಂದಕ್ಕೆ ರಾಜ್ಯ ಉನ್ನತ ಶಿಕ್ಷಣ ಪರಿಷತ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಉನ್ನತ ಶಿಕ್ಷಣ ಸಚಿವ ಡಾ| ಎಂ.ಸಿ. ಸುಧಾಕರ್‌ ಮತ್ತು ಕ್ರಿಸ್‌³ ಆಡಳಿತಾಧಿಕಾರಿ ವಿಎಲ್‌ವಿಎಸ್‌ಎಸ್‌ ರಾವ್‌ ಸಹಿ ಹಾಕಿದರು.

ಈ ಕುರಿತು ಉನ್ನತ ಶಿಕ್ಷಣ ಸಚಿವ ಡಾ| ಎಂ.ಸಿ. ಸುಧಾಕರ್‌ ಮಾತನಾಡಿ, ಬಿ.ಕಾಂ. ಲಾಜಿಸ್ಟಿಕ್ಸ್‌ ಆಪರೇಷನ್‌, ಇ-ಕಾಮರ್ಸ್‌ ಆಪರೇಷನ್‌, ಬ್ಯಾಂಕಿಂಗ್‌ ಫೈನಾನ್ಸ್‌ ಸರ್ವಿಸ್‌ ಆ್ಯಂಡ್‌ ಇನ್ಶೂರೆನ್ಸ್‌, ರಿಟೇಲ್‌ ಆಪರೇಷನ್ಸ್‌ ಈ 4 ಕೋರ್ಸ್‌ಗಳನ್ನು 2024-25ನೇ ಶೈಕ್ಷಣಿಕ ವರ್ಷವೇ ಆರಂಭಿಸಲಿದ್ದು, ಮೊದಲ 4 ಸೆಮಿಸ್ಟರ್‌ಗಳಲ್ಲಿ ವಿದ್ಯಾರ್ಥಿಗಳು ಆಯಾ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಾರೆ. 5 ಮತ್ತು 6ನೇ ಸೆಮಿಸ್ಟರ್‌ಗಳಲ್ಲಿ ಸಂಬಂಧಪಟ್ಟ ಸೆಕ್ಟರ್‌ ಸ್ಕಿಲ್‌ ಕೌನ್ಸೆಲ್‌ ವತಿಯಿಂದ ನಿಗದಿಗೊಂಡ ಕೈಗಾರಿಕೆ, ಸಂಸ್ಥೆಗಳಲ್ಲಿ ಈ ವಿದ್ಯಾರ್ಥಿಗಳಿಗೆ ಅಪ್ರಂಟಿಸ್‌ಶಿಪ್‌ ತರಬೇತಿ ನೀಡಲಾಗುತ್ತದೆ ಎಂದು ಮಾಹಿತಿ ನೀಡಿದರು.

ಇದು ಹಾಲಿ ಇರುವ ಕೋರ್ಸ್‌ಗಿಂತ ವಿಭಿನ್ನವಾಗಿದೆ. ಇದರ ಬೋಧನೆಗಾಗಿ ಪ್ರಾಧ್ಯಾಪಕರಿಗೆ ಸಹ ತರಬೇತಿ ನೀಡಲಾಗುತ್ತದೆ. ಅಪ್ರಂಟಿಸ್‌ ಶಿಪ್‌ಗಾಗಿ ಕೈಗಾರಿಕೆಗಳಿಗೆ ತೆರಳುವ ವಿದ್ಯಾರ್ಥಿಗಳು ಪ್ರತೀ ತಿಂಗಳು ಅಂದಾಜು 10 ಸಾವಿರ ರೂ.ಗಳನ್ನು ಪಡೆಯಲಿದ್ದಾರೆ. ಮುಂದಿನ ವರ್ಷ ಇನ್ನಷ್ಟು ಕ್ಷೇತ್ರಗಳಲ್ಲಿ ಮತ್ತು ಇನ್ನೂ ಹಲವು ಕಾಲೇಜುಗಳಲ್ಲಿ ಈ ಮಾದರಿಯ ಕೋರ್ಸ್‌ ಆರಂಭಿಸಲಾಗುವುದು ಎಂದರು.

Advertisement

ವಿಎಲ್‌ವಿಎಸ್‌ಎಸ್‌ ರಾವ್‌ ಮಾತನಾಡಿ, ಇಂದು ಸಾಮಾನ್ಯ ಪದವಿ ಕೋರ್ಸ್‌ ವ್ಯಾಸಂಗ ಮಾಡಿದ ವಿದ್ಯಾರ್ಥಿಗಳಿಗೆ ಉದ್ಯೋಗವಕಾ ಶಗಳು ಸಿಗುತ್ತಿರುವುದು ಕಡಿಮೆ ಆಗುತ್ತಿರುವಾಗ ಈ ರೀತಿಯ ಕೋರ್ಸ್‌ ಗಳು ವಿದ್ಯಾರ್ಥಿಗಳು ಉದ್ಯೋಗ ಪಡೆಯುವ ಸಾಧ್ಯತೆಯನ್ನು ಹೆಚ್ಚಿಸು ತ್ತದೆ ಎಂದು ಹೇಳಿದರು.

ಬೆಂಗಳೂರಿನ 13 ಕಾಲೇಜುಗಳಲ್ಲಿ ಅಪ್ರಂಟಿಸ್‌ಶಿಪ್‌ ಕೋರ್ಸ್‌
ಅಪ್ರಂಟಿಸ್‌ಶಿಪ್‌ ಕೋರ್ಸ್‌ ಪ್ರಸ್ತುತ ಬಿಕಾಂ ಪದವಿಯಲ್ಲಿ ಆರಂಭಗೊಂಡಿದೆ. 1,373 ಮಂದಿಯಲ್ಲಿ 884 ವಿದ್ಯಾರ್ಥಿನಿಯರಿದ್ದಾರೆ. ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಈ ಕಾರ್ಯಕ್ರಮ ಹೆಚ್ಚು ಪ್ರಯೋಜನ ತರಲಿದೆ ಎಂದು ಸರಕಾರ ಹೇಳಿಕೊಂಡಿದೆ. ಆದರೆ ಬೆಂಗಳೂರಿನಲ್ಲಿ 13 ಕಾಲೇಜುಗಳಲ್ಲಿ ಈ ಕೋರ್ಸ್‌ ಆರಂಭಗೊಂಡಿದ್ದು 403 ವಿದ್ಯಾರ್ಥಿಗಳು ನೋಂದಣಿ ಮಾಡಿಕೊಂಡಿದ್ದಾರೆ.

ಕೋರ್ಸ್‌ ಜಾರಿ ಹೇಗೆ?
– ಪ್ರಸ್ತುತ ಬಿಕಾಂ ಪದವಿಯಲ್ಲಿ ಆರಂಭ
– ಸದ್ಯ 4 ವಿವಿಧ ಕ್ಷೇತ್ರಗಳ ಕುರಿತು ತರಬೇತಿ
– ಮೊದಲ 4 ಸೆಮಿಸ್ಟರ್‌ಗಳಲ್ಲಿ ಕಾಲೇಜಿನಲ್ಲೇ ಕಲಿಕೆ
– 5, 6ನೇ ಸೆಮಿಸ್ಟರ್‌ಗಳಲ್ಲಿ ಆಯ್ದ ಕೈಗಾರಿಕೆ, ಸಂಸ್ಥೆಗಳಲ್ಲಿ ತರಬೇತಿ
– ಕೈಗಾರಿಕೆ ತರಬೇತಿ ವೇಳೆ ಮಾಸಿಕ 10 ಸಾವಿರ ರೂ. ಶಿಷ್ಯವೇತನ

ದಕ್ಷಿಣ ಕನ್ನಡ, ಉಡುಪಿಯ ತಲಾ 1 ಕಾಲೇಜಿನಲ್ಲಿ ಆರಂಭ
ಉಳಿದಂತೆ ಕೋಲಾರದಲ್ಲಿ 4 ಕಾಲೇಜುಗಳಿಂದ 137, ಚಿಕ್ಕಬಳ್ಳಾ ಪುರ 3 ಕಾಲೇಜಿನಿಂದ 83, ಬಳ್ಳಾರಿಯಲ್ಲಿ 2 ಕಾಲೇಜಿನಿಂದ 62 ವಿದ್ಯಾರ್ಥಿಗಳು ನೋಂದಾಯಿಸಿ ಕೊಂಡಿದ್ದಾರೆ. ಉಳಿದಂತೆ ಉತ್ತರ ಕನ್ನಡ, ಹಾಸನ, ಕಲಬುರಗಿ, ಗದಗ, ಧಾರವಾಡ, ದಾವಣಗೆರೆಯಲ್ಲಿ ತಲಾ 2, ಉಡುಪಿ, ತುಮಕೂರು, ಶಿವ ಮೊಗ್ಗ, ರಾಮನಗರ, ಮೈಸೂರು, ಮಂಡ್ಯ, ಕೊಪ್ಪಳ, ಹಾವೇರಿ, ದಕ್ಷಿಣ ಕನ್ನಡ, ಚಾಮರಾಜನಗರ ಮತ್ತು ಬೆಂಗಳೂರು ಗ್ರಾಮಾಂತರದಲ್ಲಿ ತಲಾ ಒಂದು ಕಾಲೇಜಿನಲ್ಲಿ ಈ ಕೋರ್ಸ್‌ ಆರಂಭಗೊಳ್ಳಲಿದೆ.

Advertisement

Udayavani is now on Telegram. Click here to join our channel and stay updated with the latest news.

Next