Advertisement

ಚುನಾವಣಾ ಸಿಬ್ಬಂದಿ ಕಾರ್ಯಕ್ಕೆ ಮೆಚ್ಚುಗೆ

06:22 PM Jan 18, 2021 | Team Udayavani |

ವಿಜಯಪುರ: ವಿಜಯಪುರ ಜಿಲ್ಲೆಯ ಅಂತಿಮ ಮತದಾರರ ಪಟ್ಟಿ ಜ. 18ರಂದು ಪ್ರಕಟಿಸಲಾಗುತ್ತಿದ್ದು ಇದಕ್ಕಾಗಿ ಸಕಲ ಕ್ರಮ ಕೈಗೊಂಡಿರುವ ಅಧಿಕಾರಿ ಮತ್ತು ಸಿಬ್ಬಂದಿಗಳ ಕಾರ್ಯದ ಬಗ್ಗೆ ಮತದಾರರ ಪಟ್ಟಿ ವೀಕ್ಷಕ ಡಿ.ರಂದೀಪ್‌ ಸಂತಸ ವ್ಯಕ್ತಪಡಿಸಿದ್ದಾರೆ. ರವಿವಾರ ಜಿಲ್ಲಾ ಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಅಂತಿಮ ಮತದಾರರ ಪಟ್ಟಿ ಪ್ರಕಟಕ್ಕೆ ಕೈಗೊಂಡ ಸಿದ್ಧತೆಗಳ ಬಗ್ಗೆ ಚುನಾವಣಾಧಿಕಾರಿ, ಸಹಾಯಕ ಚುನಾವಣಾಧಿಕಾರಿಗಳ ಜೊತೆ ಸಭೆ ನಡೆಸಿದ ಅವರು, ಜಿಲ್ಲೆಯ ಅಂತಿಮ ಮತದಾರರ ಪಟ್ಟಿ ಸಿದ್ಧಪಡಿಸುವಲ್ಲಿ ಅಧಿಕಾರಿಗಳು ಮತ್ತು ಸಿಬ್ಬಂದಿ ಅವಿರತ ಶ್ರಮಿಸಿದ್ದಾರೆ.

Advertisement

ಚುನಾವಣಾ ಸಮಯ ಇಲ್ಲದಿದ್ದರೂ ಕೂಡ ಅಧಿಕಾರಿಗಳು ನಿರಂತರ ಮತದಾರರ ಪಟ್ಟಿ ಪರಿಷ್ಕರಣೆ ಮತ್ತು ಸಿದ್ಧಪಡಿಸಲು ಕೈಗೊಂಡ ಕ್ರಮಗಳ ಬಗ್ಗೆ ಎಲ್ಲರಿಗೂ ಅಭಿನಂದನೆ ಸಲ್ಲಿಸಿದರು. ಚುನಾವಣಾ ಆಯೋಗದ ಹಾಗೂ ಮುಖ್ಯ ಚುನಾವಣಾ ಅಧಿಕಾರಿಗಳ ನಿರ್ದೇಶನದಂತೆ ನಿಯಮಾವಳಿ ಅನ್ವಯ ಅಂತಿಮ ಮತದಾರರ ಪಟ್ಟಿ ಪ್ರಕಟಿಸಲು ಕ್ರಮ ಕೈಗೊಳ್ಳಬೇಕು. ಜ. 25ರಂದು ರಾಷ್ಟ್ರೀಯ ಮತದಾನ ದಿನಾಚರಣೆ ಹಮ್ಮಿಕೊಳ್ಳುವ ಕುರಿತು ಜಿಲ್ಲೆಯಲ್ಲಿ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಸಿದ್ಧತೆ ಮಾಡಿಕೊಳ್ಳಬೇಕು. ನೂತನ ಯುವ ಮತ್ತು ಹಿರಿಯ ಮತದಾರರಿಗೆ ನೂತನ ಎಪಿಕ್‌ ಕಾರ್ಡ್‌ ವಿತರಣೆಗೆ ಕ್ರಮ ಕೈಗೊಳ್ಳಬೇಕು. ಅತ್ಯುತ್ತಮ ಬಿಎಲ್‌ ಒಗಳನ್ನು ಗುರುತಿಸಬೇಕು. ಮತದಾರರ ಪಟ್ಟಿ ಪರಿಷ್ಕರಣೆ ಕಾರ್ಯ ಮುಂದಿನ ದಿನಗಳಲ್ಲೂ ನಿರಂತರ ನಡೆಸುವಂತೆ ಸೂಚನೆ ನೀಡಿದರು.

ವಿಜಯಪುರ ಮತ್ತು ನಾಗಠಾಣ ಮತಕ್ಷೇತ್ರಗಳಲ್ಲಿ ಅದಲು ಬದಲು ಆದ ಮತದಾರರ ಬಗ್ಗೆ ಪರಿಶೀಲನೆ ನಡೆಸಿದ ಅವರು, ರಂಭಾಪುರ ಮತದಾರರು
ವಿಜಯಪುರ ನಗರ ವಿಧಾನಸಭಾ ಕ್ಷೇತ್ರದಲ್ಲೇ ಬರುವ ಬಗ್ಗೆ ಸೂಕ್ತ ಪರಿಶೀಲನಾತ್ಮಕ ನಕಾಶೆ ಆಧಾರಿತ ಮತದಾರರನ್ನು ಮತ್ತು ಮತದಾರ ಕ್ಷೇತ್ರವನ್ನು ಗೊತ್ತು
ಪಡಿಸುವಂತೆ ಸೂಚನೆ ನೀಡಿದರು.

ಬಸವನಬಾಗೇವಾಡಿ ಮತ್ತು ಸಿಂದಗಿ ವ್ಯಾಪ್ತಿಯಲ್ಲಿ ಇಪಿ ರೇಶಿಯೋ ಮತದಾರರ ಜನಸಂಖ್ಯಾ ಅನುಪಾತ ದಲ್ಲಿ ವ್ಯತ್ಯಾಸ ಬಂದ ಹಿನ್ನೆಲೆಯಲ್ಲಿ ಈ ಕುರಿತು ಸೂಕ್ತ
ನಿಗಾ ಇಡಬೇಕು. ನೂತನ ಎಪಿಕ್‌ ಕಾರ್ಡ್‌ ಹೊಂದುವ ಮತದಾರರಿಗೆ ಆಯಾ ಮತದಾನ ಕೇಂದ್ರದಲ್ಲಿ ಎಪಿಕ್‌ ಕಾರ್ಡ್‌ ಪಡೆಯುವ ಬಗ್ಗೆ ಅರಿವು ಮೂಡಿಸಬೇಕು.

ರಾಷ್ಟ್ರೀಯ ಮತದಾನ ದಿನಾಚರಣೆ ಕುರಿತು ಸೂಕ್ತ ದಾಖಲೀಕರಣ ವರದಿಯನ್ನು ಚುನಾವಣಾ ಆಯೋಗದ ಗಮನಕ್ಕೆ ತರುವಂತೆ ಸಲಹೆ ನೀಡಿದರು. ಕಳೆದ ನವೆಂಬರ್‌ 18ರಿಂದ ಡಿಸೆಂಬರ್‌ 17ರವರೆಗೆ ಅರ್ಜಿ ನಮೂನೆ 6, 7, 8, 8ಎ ಜಿಲ್ಲೆಯ  ವಿಧಾನಸಭಾವಾರು ಮತದಾರರ ಅಂಕಿಅಂಶ ನೋಂದಣಿ ಬಗ್ಗೆ, ದೂರುಗಳಿಗೆ ಸ್ಪಂದಿಸಿದ ಕ್ರಮಗಳ ಬಗ್ಗೆ ಪರಿಶೀಲಿಸಿದರು. ಲಿಂಗಾನುಪಾತ, ಇಪಿ ರೇಶಿಯೋ (ಮತದಾರರ ಜನಸಂಖ್ಯಾ ಅನುಪಾತ), ಮತದಾನ ಕೇಂದ್ರವಾರು, ಸಹಾಯಕ ಚುನಾವಣಾಧಿಕಾರಿ, ಜಿಲ್ಲಾ ಚುನಾವಣಾ ಧಿಕಾರಿ ಕಚೇರಿ ಮತ್ತು ಚುನಾವಣಾ ಆಯೋಗದ ವೆಬ್‌ಸೈಟ್‌ದಲ್ಲಿ ಅಂತಿಮ
ಮತದಾರರ ಪಟ್ಟಿ ಪ್ರಕಟಣೆಗೆ ಕೈಗೊಂಡ ಕ್ರಮಗಳ ಬಗ್ಗೆ ಪರಿಶೀಲಿಸಿದರು.

Advertisement

ಜಿಪಂ ಸಿಇಒ ಲಕ್ಷ್ಮೀಕಾಂತರೆಡ್ಡಿ, ಅಪರ ಜಿಲ್ಲಾಧಿಕಾರಿ ಡಾ| ಔದ್ರಾಮ್‌, ಉಪ ವಿಭಾಗಾ ಧಿಕಾರಿಗಳಾದ ರಾಹುಲ್‌ ಸಿಂಧೆ ಇಂಡಿ, ರಾಮಚಂದ್ರ ಗಡಾದೆ,
ಚುನಾವಣಾ ತಹಶೀಲ್ದಾರ್‌ರಾದ ಶಾಂತಲಾ ಚಂದನ್‌ ಸೇರಿದಂತೆ ಸಹಾಯಕ ಮತದಾರರ ನೋಂದಣಾಧಿಕಾರಿಗಳು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next