Advertisement

ಹಸಿರು ಭೂಮಿ ಪ್ರತಿಷ್ಠಾನದ ಕಾರ್ಯ ನಿರ್ವಹಣೆಗೆ ಮೆಚ್ಚುಗೆ

11:08 AM May 20, 2019 | Suhan S |

ಹಾಸನ: ಮಾಯವಾಗುತ್ತಿರುವ ಕೆರೆ, ಕಟ್ಟೆಗಳನ್ನು ಪುನಶ್ಚೇತನಗೊಳಿಸಿ ಪರಿಸರ ಸಂರಕ್ಷಣೆಯ ಕೆಲಸ ಮಾಡುತ್ತಿರುವ ಹಾಸನದ ಹಸಿರು ಭೂಮಿ ಪ್ರತಿಷ್ಠಾನದ ಕಾರ್ಯನಿರ್ವಹಣೆಯ ಬಗ್ಗೆ ಸಮಾಜ ಪರಿವರ್ತನೆ ಪ್ರತಿಷ್ಠಾನದ ಅಧ್ಯಕ್ಷ, ಭ್ರಷ್ಟಾಚಾರ ವಿರೋಧಿ ಹೋರಾಟಗಾರ ಆರ್‌.ಸಿ.ಹಿರೇಮಠ ಮೆಚ್ಚುಗೆ ವ್ಯಕ್ತಪಡಿಸಿದರು.

Advertisement

ಹಸಿರು ಭೂಮಿ ಪ್ರತಿಷ್ಠಾನವು ಹಾಸನ ನಗರ ಸುತ್ತ ಮುತ್ತ ಕೈಗೊಂಡಿರುವ ಕೆರೆಗಳ ಪುನಶ್ಚೇತನ ಕೆಲಸವನ್ನು ವೀಕ್ಷಸಿ ಮಾತನಾಡಿದ ಅವರು, 1864ರಲ್ಲಿ ಅರಣ್ಯ ಇಲಾಖೆ ಅರಣ್ಯ ಕಾನೂನಡಿ ಅರಣ್ಯವನ್ನು ಉಳಿಸುವ ಕಾರ್ಯಕ್ಕೆ ಮುಂದಾ ಯಿತು. ಆದರೆ ನಮ್ಮ ಸಂಸ್ಕೃತಿಯ ವೈಶಿಷ್ಟತೆ ಎಂದರೇ ಸ್ಥಳೀಯ ಜನರೇ ಅರಣ್ಯ, ಕೆರೆ, ಕಟ್ಟೆಗಳ ನಿರ್ವ ಹಣೆಯಲ್ಲಿ ತೊಡಗಬೇಕು. ಆಗ ಮಾತ್ರ ಅವುಗಳನ್ನು ಉಳಿಸಲು ಸಾಧ್ಯ ಎಂದರು.

ವ್ಯವಸ್ಥಿತ ನಿರ್ವಹಣೆ ಅಗತ್ಯ: ಪೂರ್ವ ಜರು ಹಿಂದೆ ನಿರ್ಮಿಸಿದ ಕೆರೆ, ಕಟ್ಟೆಗಳನ್ನು ಇಂದು ಪುನರುಜ್ಜೀವನಗೊಳಿ ಸುವ ಅಗತ್ಯವಿದೆ. ಯಾವುದೇ ಸಂಪ ನ್ಮೂಲಗಳು ವ್ಯವಸ್ಥಿತವಾಗಿ ನಿರ್ವಹಣೆ ಯಾಗಬೇಕಾದರೆ ಮತ್ತು ಅವುಗಳಲ್ಲಿ ಸಮಗ್ರತೆ ಇರಬೇಕಾದರೆ ಉತ್ತಮ ನಿರ್ವಹಣೆ ಇರಬೇಕು. ಸಂಸ್ಕೃತಿ ಹಾಗೂ ಪ್ರಕೃತಿ ನಡುವೆ ಸಮನ್ವಯತೆ ಇರಬೇಕು ಎಂದರು.

ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಿ: ನೈಸರ್ಗಿಕ ಸಂಪನ್ಮೂಲಗಳನ್ನು ಸರ್ಕಾರದ ನಿರ್ವಹಣೆಗೆ ಕೊಟ್ಟಿದ್ದೇವೆ. ಅದನ್ನು ನಮ್ಮದನ್ನಾಗಿ ಮಾಡಿಕೊಂಡು ಸಂರಕ್ಷಣೆ ಮಾಡುತ್ತಾ ಹೋದರೆ ಭ್ರಷ್ಟಾಚಾರಕ್ಕೂ ಕಡಿವಾಣ ಹಾಕಬಹುದು ಎಂದು ಹಿರೀಮಠ ಅವರು ಅಭಿಪ್ರಾಯಪಟ್ಟರು. ಹಸಿರು ಭೂಮಿ ಪ್ರತಿಷ್ಠಾನದಿಂದ ಪುನಶ್ಚೇತನಗೊಳಿಸಿರುವ ದೊಡ್ಡಕೊಂಡ ಗುಳ ಕೆರೆ, ಜವೇನಹಳ್ಳಿ ಕೆರೆ, ಚಿಕ್ಕಕಟ್ಟೆ ಕೆರೆ, ಬಿ.ಕಾಟೀಹಳ್ಳಿ ಕೆರೆ, ಗವೇನಹಳ್ಳಿ ಕೆರೆ ಸೇರಿದಂತೆ ವಿವಿಧ ಕೆರೆಗಳ ಅಭಿವೃದ್ಧಿಯನ್ನು ಎಸ್‌.ಆರ್‌. ಹಿರೇಮs್ ದಂಪತಿ ವೀಕ್ಷಣೆ ಮಾಡಿ ವಿವರ ಪಡೆದರು.

ಹಸಿರು ಭೂಮಿ ಪ್ರತಿಷ್ಠಾನದ ಅಧ್ಯಕ್ಷ ಸುಬ್ಬಸ್ವಾಮಿ, ಗೌರವಾಧ್ಯಕ್ಷ ಆರ್‌.ಪಿ. ವೆಂಕಟೇಶ್‌ಮೂರ್ತಿ, ಖಜಾಂಚಿ ಡಾ. ಮಂಜುನಾಥ್‌, ಟ್ರಸ್ಟಿ ಮಂಜುನಾಥ್‌ ಶರ್ಮ, ಜವೇನಹಳ್ಳಿ ಕೆರೆ ಸಂರಕ್ಷಣಾ ಸಮಿತಿಯ ಅಧ್ಯಕ್ಷ ವಿಶ್ವನಾಥ್‌, ಖಜಾಂಚಿ ಭರತ್‌ಭೂಷಣ್‌, ಸಾಮಾಜಿಕ ಕಾರ್ಯಕರ್ತ ಪುಟ್ಟಯ್ಯ ಹಾಗೂ ಚಿತ್ರಕಲಾದ ದೇಸಾಯಿ ಮತ್ತಿತರರು ಉಪಸ್ಥಿತರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.