Advertisement

‘ನಗರದ ಸೌಂದರ್ಯ, ಸ್ವಚ್ಛತೆಯಲ್ಲಿ ಭಾಗವಹಿಸುತ್ತಿರುವುದು ಶ್ಲಾಘನೀಯ’

12:41 PM Aug 25, 2018 | |

ಸುರತ್ಕಲ್‌: ನಗರದ ಸೌಂದರ್ಯ ಹಾಗೂ ಸ್ವಚ್ಛತಾ ಕಾರ್ಯಯೋಜನೆಗಳಲ್ಲಿ ಜನತೆ ಹಾಗೂ ಕೈಗಾರಿಕ ಸಂಸ್ಥೆಗಳು ಕೈಜೋಡಿಸಿ ಸಕ್ರಿಯವಾಗಿ ಪಾಲ್ಗೊಳ್ಳುತ್ತಿರುವುದು ಶ್ಲಾಘನೀಯ ಎಂದು ಸುರತ್ಕಲ್‌ನ ಬಿ.ಎ.ಎಸ್‌.ಎಫ್‌. ಕೈಗಾರಿಕ ಸಂಸ್ಥೆಯ ಸೈಟ್‌ ಆಫೀಸರ್‌ ಶ್ರೀನಿವಾಸ ಪ್ರಾಣೇಶ ಹೇಳಿದರು. ಸುರತ್ಕಲ್‌ ನಾಗರಿಕ ಸಲಹಾ ಸಮಿತಿಯ ವತಿಯಿಂದ ಆಯೋಜಿಸುತ್ತಿರುವ ಸುರತ್ಕಲ್‌ ಮೇಲ್ಸೇತುವೆಯ ಕೆಳಭಾಗದ ಸೌಂದರ್ಯ ಯೋಜನೆಯ ಉತ್ತರ ಭಾಗದಲ್ಲಿ ಬಿ.ಎ.ಎಸ್‌.ಎಫ್‌. ಸಂಸ್ಥೆ ಅಭಿವೃದ್ಧಿ ಪಡಿಸಿರುವ ಅಂಕಣ ಭಾಗವನ್ನು ಉದ್ಘಾಟಿಸಿ ಅವರು ಮಾತನಾಡಿದರು.

Advertisement

ಸುರತ್ಕಲ್‌ ಮೇಲ್ಸೇತುವೆಯ ತಳಭಾಗದ ಅಭಿವೃದ್ಧಿ ಕಾರ್ಯ ಅತ್ಯುತ್ತಮ ಮಾದರಿಯಲ್ಲಿ ನಡೆದಿದ್ದು ನಗರದ ಸೌಂದರ್ಯ ಉಳಿಸಿ, ಬೆಳೆಸುವುದು ಪ್ರತಿಯೊಬ್ಬ ನಾಗರಿಕನ ಕರ್ತವ್ಯವಾಗಿದೆ ಎಂದರು. ಬಿ.ಎ.ಎಸ್‌.ಎಫ್‌. ಸಂಸ್ಥೆಯ ಎಚ್‌. ಆರ್‌. ವಿಭಾಗದ ಅಧಿಕಾರಿ ನಟರಾಜ್‌, ಮಂಗಳೂರು ಉತ್ತರ ಸಂಚಾರಿ ಪೊಲೀಸ್‌ ಠಾಣೆಯ ಸರ್ಕಲ್‌ ಇನ್‌ಸ್ಪೆಕ್ಟರ್‌ ಮಂಜುನಾಥ್‌, ಸುರತ್ಕಲ್‌ ಪೊಲೀಸ್‌ ಠಾಣೆಯ ಸರ್ಕಲ್‌ ಇನ್‌ಸ್ಪೆಕ್ಟರ್‌ ರಾಮಕೃಷ್ಣ ಶುಭ ಹಾರೈಸಿದರು. ಸುರತ್ಕಲ್‌ ನಾಗರಿಕ ಸಲಹಾ ಸಮಿತಿ ಸಂಯೋಜಕ ಡಾ| ಕೆ. ರಾಜಮೋಹನ ರಾವ್‌ ಯೋಜನ ಕಾರ್ಯಗಳ ಕುರಿತು ಮಾತನಾಡಿದರು.

ಸಮಿತಿಯ ಕಾರ್ಯದರ್ಶಿ ಸತೀಶ್‌ ಸದಾನಂದ, ಹರಿಣಿ, ಚಂದನಾ ಶೆಟ್ಟಿ, ಸಂದೀಪ್‌ ರಾವ್‌ ಇಡ್ಯಾ, ರೋಟರಿ ಕ್ಲಬ್‌ ಆಫ್‌ ಸುರತ್ಕಲ್‌ ಎಜುಕೇಶನಲ್‌ ಆ್ಯಂಡ್‌ ಚಾರಿಟೆಬಲ್‌ ಟ್ರಸ್ಟ್‌ನ ಕಾರ್ಯದರ್ಶಿ ಶ್ರೀಧರ ಟಿ.ಎನ್‌., ಟೆಂಪೋ ಚಾಲಕ- ಮಾಲಕರ ಸಂಘದ ನಿಕಟಪೂರ್ವ ಅಧ್ಯಕ್ಷ ಲೋಕೇಶ್‌, ಟೆಂಪೋ ಟ್ರಾಕ್ಸ್‌ ಚಾಲಕ- ಮಾಲಕರ ಅಧ್ಯಕ್ಷ ಶರೀಮ್‌, ರಿಕ್ಷಾ ಚಾಲಕ ಮತ್ತು ಮಾಲಕರ ಸಂಘದ ಡೆನಿಸ್‌ ಕ್ರಾಸ್ತ, ಟ್ಯಾಕ್ಸಿ ಕಾರು ಮಾಲಕರ ಸಂಘದ ಅಧ್ಯಕ್ಷ ಸುರೇಶ್‌ ಮತ್ತು ಪದಾಧಿಕಾರಿಗಳು ಮೊದಲಾದವರು ಉಪಸ್ಥಿತರಿದ್ದರು. ಗೋವಿಂದದಾಸ ಕಾಲೇಜಿನ ಉಪಪ್ರಾಂಶುಪಾಲ ಕೃಷ್ಣಮೂರ್ತಿ ಕಾರ್ಯಕ್ರಮ ಸಂಯೋಜಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next