Advertisement

ಸಾವಿರ ಆಶ್ರಯ ಮನೆಗೆ ಸಮ್ಮತಿ

03:19 PM Sep 14, 2020 | Suhan S |

ಚನ್ನರಾಯಪಟ್ಟಣ: ಶ್ರವಣಬೆಳಗೊಳ ‌ ವಿಧಾನಸಭಾ ಕ್ಷೇತ್ರಕ್ಕೆ ಒಂದು ಸಾವಿರ‌ ಆಶ್ರಯ ‌ಮನೆಯನ್ನು ಮಂಜೂರು ಮಾಡುವಲ್ಲಿ ವಸತಿ ಸಚಿವ ಸೋಮಣ್ಣ ಸಮ್ಮತಿ ನೀಡಿದ್ದಾರೆ. ಎಂದು ಶಾಸಕ ಸಿ.ಎನ್‌.ಬಾಲಕೃಷ್ಣ ಹೇಳಿದರು.

Advertisement

ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ‌ ಅವರು, ವಸತಿ ಸಚಿವ ಸೋಮಣ್ಣ ಜಿಲ್ಲಾ ಪ್ರವಾಸ ಕೈಗೊಂಡಿದ್ದ ವೇಳೆ ಹಾಸನ ಪ್ರವಾಸಿ ಮಂದಿರದಲ್ಲಿ ಅವರನ್ನು ಭೇಟಿ ಮಾಡಿ ತಾಲೂಕಿಗೆ ಅಗತ್ಯ ಇರುವ ಆಶ್ರಯ ಮನೆಗಳ ‌ ಬಗ್ಗೆ ವಿವರಿಸಿ ಮನವಿ ನೀಡಲಾಯಿತು.ಈಬಗ್ಗೆ ಮುಖ್ಯಮಂತ್ರಿಯೊಂದಿಗೆ ಚರ್ಚಿಸಿ ಅಗತ್ಯ ಇರುವ ಆಶ್ರಯ ಮನೆಗಳನ್ನು ಬಿಡುಗಡೆ ಮಾಡುವುದಾಗಿ ಭರವಸೆ ನೀಡಿದ್ದಾರೆ. ಎಂದರು.

ನಿಮ್ಮ ಮೇಲಿನ ವಿಶ್ವಾಸಕ್ಕೆ ಶಾಸಕನಾಗುವ ಮುಂಚೆಯೇ ಒಂದು ಸಾವಿರ ಮನೆಗಳಿಗೆ ಅನುದಾನ ‌ ನೀಡಿದ್ದೆ, ಈಗ ಶಾಸಕರಾಗಿ ಆಶ್ರಯ ಮನೆಗಳನ್ನು ಕೇಳಿದ್ದೀರಿ, ಕ್ಷೇತ್ರದ ಅಭಿವೃದ್ಧಿಯ ದೃಷ್ಟಿಯಿಂದ ಬಡವರಿಗೆ ಸೂರು ಒದಗಿಸುವುದು ಮಂತ್ರಿಯಾದ ನನ್ನ ಕರ್ತವ್ಯ, ಅಭಿವೃದ್ದಿ ವಿಷಯದಲ್ಲಿ ರಾಜಕೀಯ ಮಾಡುವುದಿಲ್ಲ, ಬಜೆಟ್‌ ವೇಳೆ ಸರ್ಕಾರ ಹಣ ನೀಡಿದ ಮೇಲೆ ಮಂಜೂರಾತಿಗೆ ಮುಂದಾಗುತ್ತೇ ಎಂದು ತಿಳಿಸಿದ್ದಾರೆ ಎಂದರು.

ಶ್ರವಣಬೆಳಗೊಳ ಕ್ಷೇತ್ರಕ್ಕೆ ಒಂದು ಸಾವಿರ ‌ ಮನೆಗಳನ್ನು ಮಂಜೂರು ಮಾಡುವಂತೆ ವಸತಿ ಇಲಾಖೆ ಕಾರ್ಯದರ್ಶಿಗೆ ಸಚಿವರು ಸ್ಥಳದಲ್ಲಿಯೇ ಸೂಚಿಸಿದರು. ಹಾಗೆಯೇ ಸಚಿವರು ನಮ್ಮ ಮೇಲೇ ಇಟ್ಟಿರುವ ನಂಬಿಕೆ ಹಾಗೂ ವಿಶ್ವಾಸಕ್ಕೆ ಋಣಿಯಾಗಿದ್ದೇನೆ ಎಂದು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next