Advertisement

ಕುಲಸಚಿವ ಹುದ್ದೆಗೆ ಕೆಎಎಸ್‌ ಅಧಿಕಾರಿಗಳ ನೇಮಕ

10:59 PM Feb 24, 2020 | Lakshmi GovindaRaj |

ಕಲಬುರಗಿ: ರಾಜ್ಯದ ವಿಶ್ವವಿದ್ಯಾಲಯಗಳಲ್ಲಿ ಸಾಕಷ್ಟು ಆಡಳಿತಾತ್ಮಕ ಸಮಸ್ಯೆಯಿದೆ. ಆಡಳಿತದಲ್ಲಿ ಬಿಗಿ ತರಲು ಹಾಗೂ ಸುಧಾರಣೆ ನಿಟ್ಟಿನಲ್ಲಿ ಕೆಎಎಸ್‌ ಅ ಧಿಕಾರಿಗಳನ್ನು ವಿವಿ ಕುಲಸಚಿವರನ್ನಾಗಿ ನೇಮಿಸಲಾಗುವುದು ಎಂದು ಉನ್ನತ ಶಿಕ್ಷಣ ಸಚಿವ, ಉಪ ಮುಖ್ಯಮಂತ್ರಿ ಡಾ. ಅಶ್ವಥ್‌ ನಾರಾಯಣ ತಿಳಿಸಿದರು.

Advertisement

ಗುಲಬರ್ಗಾ ವಿಶ್ವವಿದ್ಯಾಲಯಕ್ಕೆ ಸೋಮವಾರ ಭೇಟಿ ನೀಡಿ ಮಾತನಾಡಿ, ಎಲ್ಲ ವಿವಿಗಳನ್ನು ಏಕೀಕೃತ ನಿರ್ವಹಣಾ ವ್ಯವಸ್ಥೆಯಡಿ ಜಾರಿಗೆ ತರಲಾಗುತ್ತದೆ. ಕುಲಪತಿಗಳ ಆಯ್ಕೆಯಲ್ಲಿ ಪಾರದರ್ಶಕತೆ ಕಾಪಾಡಲು ಕರ್ನಾಟಕ ವಿವಿ ಕಾಯ್ದೆಗೆ ತಿದ್ದುಪಡಿ ಮಾಡುವ ಉದ್ದೇಶ ಇದೆ. ಅದೇ ರೀತಿ ವಿಶ್ವವಿದ್ಯಾಲಯಗಳಲ್ಲಿ ಬಹುತೇಕ ಕುಲಸಚಿವರು ಉಪನ್ಯಾಸಕರೇ ಆಗಿರುತ್ತಾರೆ.

ಹೀಗಾಗಿ ಅವರ ಬದಲಿಗೆ ಕೆಎಎಸ್‌ ಅಧಿಕಾರಿಗಳನ್ನು ನೇಮಿಸುವ ಮೂಲಕ ಆಡಳಿತದಲ್ಲಿ ಬದಲಾವಣೆ ತರಲಾಗುವುದು ಎಂದರು. ಇದೇ ಶೈಕ್ಷಣಿಕ ವರ್ಷದಿಂದ ರಾಯಚೂರು ವಿವಿ ಕಾರ್ಯಾರಂಭ ಮಾಡಲು ಕ್ರಮ ವಹಿಸಲಾಗುತ್ತಿದೆ. ಶೀಘ್ರದಲ್ಲೇ ಆಡಳಿತಾತ್ಮಕ ಅನುಮೋದನೆ ನೀಡಿ ಸಂಪನ್ಮೂಲವನ್ನು ಒದಗಿಸಲಾಗುವುದು ಎಂದರು.

ತಿಂಗಳೊಳಗೆ ನೇಮಕ: ಎಂಟು ತಿಂಗಳಿಂದ ಗುಲಬರ್ಗಾ ವಿವಿ ಕುಲಪತಿ ಹುದ್ದೆ ಖಾಲಿ ಇರುವುದು ದುರದೃಷ್ಟಕರ. ಮುಂದಿನ ಒಂದು ತಿಂಗಳೊಳಗೆ ಕಾಯಂ ಕುಲಪತಿ ನೇಮಕ ಮಾಡಲಾಗುವುದು ಅಶ್ವಥ್‌ ನಾರಾಯಣ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.