Advertisement

ವಿವಿಧ ಜಿಲ್ಲೆಗಳಿಗೆ ಉಪನಿರ್ದೇಶಕರ ನೇಮಕ

11:20 PM Aug 01, 2023 | Team Udayavani |

ಬೆಂಗಳೂರು: ಪದವಿ ಪೂರ್ವ ಶಿಕ್ಷಣ ಇಲಾಖೆಯು 12 ಮಂದಿ ಪಿಯು ಕಾಲೇಜುಗಳ ಪ್ರಾಂಶುಪಾಲರಿಗೆ ಉಪನಿರ್ದೇಶಕರ ಹುದ್ದೆಗೆ ಭಡ್ತಿ ನೀಡಿ ಆದೇಶ ಹೊರಡಿಸಿದೆ.
ಶ್ರೀರಂಗಪಟ್ಟಣದ ಕೊಡಿಯಾಲ ಪಿಯು ಕಾಲೇಜಿನ ಪ್ರಾಂಶುಪಾಲ ಆರ್‌. ಪುಟ್ಟಸ್ವಾಮಿ ಅವರನ್ನು ಚಿತ್ರದುರ್ಗ ಜಿಲ್ಲೆಯ ಉಪನಿರ್ದೇಶಕ, ಚನ್ನಪಟ್ಟಣದ ಪಿಯು ಕಾಲೇಜಿನ ಪ್ರಾಂಶುಪಾಲ ಜಿ.ಎಚ್‌. ಜಗದೀಶ್‌ – ಕೊಪ್ಪಳ ಜಿಲ್ಲಾ ಉಪನಿರ್ದೇಶಕ, ಯಾದಗಿರಿ ಬಾಲಿಕ ಪಿಯು ಕಾಲೇಜಿನ ಪ್ರಾಂಶುಪಾಲ ಚನ್ನಬಸಪ್ಪ ಕಾಳಪ್ಪ ಕುಳಗೇರಿ ಅವರನ್ನು ಸ್ಥಳ ನಿಯುಕ್ತಿ ಮಾಡದೆ ಉಪನಿರ್ದೇಶಕ ಸ್ಥಾನಕ್ಕೆ ಭಡ್ತಿ ನೀಡಲಾಗಿದೆ.

Advertisement

ಉಳಿದಂತೆ ಪಾವಗಡ ಪಿಯು ಕಾಲೇಜಿನ ಪ್ರಾಂಶುಪಾಲ ಡಿ. ಬಸವಲಿಂಗಪ್ಪ ಅವರನ್ನು ಮಲ್ಲೇಶ್ವರದ ಲೋಕಶಿಕ್ಷಣ ವಿಭಾಗದ ಡಿಎಸ್‌ಇಆರ್‌ಟಿ ಉಪನಿರ್ದೇಶಕರ ಹುದ್ದೆಗೆ ವರ್ಗಾಯಿಸಲಾಗಿದೆ. ಮೈಸೂರಿನ ಬಾಲಿಕ ಪಿಯು ಕಾಲೇಜಿನ ಪ್ರಾಂಶುಪಾಲೆ ಎಂ.ಪಿ. ನಾಗಮ್ಮ – ಚಾಮರಾಜನಗರದ ಉಪನಿರ್ದೇಶಕಿ, ಹಾಸನದ ವಿಭಜಿತ ಪಿಯು ಕಾಲೇಜಿನ ಪ್ರಾಂಶುಪಾಲ ಕೆ. ಪಿ. ಸುರೇಶ್‌ – ಪಿಯು ಇಲಾಖೆಯ ಕೇಂದ್ರ ಕಚೇರಿಯ ಉಪನಿರ್ದೇಶಕ, ಜಳಿ ಪಿಯು ಕಾಲೇಜಿನ ಪ್ರಾಂಶುಪಾಲ ಡಾ| ಚಂದ್ರಶೇಖರ್‌ ಹೊಸಮನಿ – ಕಲಬುರಗಿ ಜಿಲ್ಲೆಯ ಉಪನಿರ್ದೇಶಕ, ಒಂಟಿಕೊಪ್ಪಲು ಪಿಯು ಕಾಲೇಜಿನ ಪ್ರಾಂಶುಪಾಲ ಚೆಲುವಯ್ಯ ಸಿ. – ಧಾರವಾಡ ಜಿಲ್ಲೆಯ ಉಪನಿರ್ದೇಶಕ, ಮಧುಗಿರಿಯ ಕೋಟ್ಲಾಪುರ ಪಿಯು ಕಾಲೇಜಿನ ಪ್ರಾಂಶುಪಾಲ ಸಿ. ರಾಮಪ್ಪ – ವಿಜಯಪುರ ಜಿಲ್ಲೆಯ ಉಪನಿರ್ದೇಶಕ, ಮೈಸೂರಿನ ಹೆಬ್ಟಾಳ ಪಿಯು ಕಾಲೇಜಿನ ಪ್ರಾಂಶುಪಾಲ ಕೆ.ಪಿ. ಗಂಗಾಧರ – ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯಮಾಪನ ಮಂಡಳಿಯ ಉಪನಿರ್ದೇಶಕ, ಚಾಮರಾಜನಗರ ಬಾಲಿಕ ಪಿಯು ಕಾಲೇಜಿನ ಪ್ರಾಂಶುಪಾಲ ಎಂ. ಮರಿಸ್ವಾಮಿ – ಚಿಕ್ಕಬಳ್ಳಾಪುರ ಜಿಲ್ಲೆಯ ಉಪನಿರ್ದೇಶಕರನ್ನಾಗಿ ವರ್ಗಾಯಿಸಲಾಗಿದೆ.

ಚಿತ್ರದುರ್ಗ ಜಿಲ್ಲೆಯ ಉಪನಿರ್ದೇಶಕ ಎನ್‌. ರಾಜು ಅವರನ್ನು ಬೆಂಗಳೂರು ಉತ್ತರ ಜಿಲ್ಲೆಯ ಉಪನಿರ್ದೇಶಕರನ್ನಾಗಿ ವರ್ಗಾವಣೆ ಮಾಡಲಾಗಿದೆ.

 

Advertisement

Udayavani is now on Telegram. Click here to join our channel and stay updated with the latest news.

Next