ಬೆಂಗಳೂರು: ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ನೇತೃತ್ವದಲ್ಲಿ ಕೈಗೊಂಡಿರುವ ರಾಜ್ಯ ಪ್ರವಾಸ ಯಶಸ್ವಿಗೊಳಿಸಲು ಉಸ್ತುವಾರಿಗಳ ನೇಮಕ ಹಾಗೂ ಸಮನ್ವಯ ಸಮಿತಿ ರಚಿಸಿ ಆದೇಶ ಹೊರಡಿಸಲಾಗಿದೆ.
ಉತ್ತರ ಕರ್ನಾಟಕ ಭಾಗದ ಜಿಲ್ಲೆಗಳಿಗೆ ಮಾಜಿ ಸಚಿವ ಬಸವರಾಜ ರಾಯರೆಡ್ಡಿ, ದಕ್ಷಿಣ ಕರ್ನಾಟಕ ಭಾಗದ ಜಿಲ್ಲೆಗಳಿಗೆ ರಾಜ್ಯಸಭೆ ಸದಸ್ಯ ಜಿ.ಸಿ.ಚಂದ್ರಶೇಖರ್ ಅವರನ್ನು ಉಸ್ತುವಾರಿಯನ್ನಾಗಿ ನೇಮಿಸಲಾಗಿದೆ.
ಉತ್ತರ ಕರ್ನಾಟಕ ಭಾಗಕ್ಕೆ ಬಸವರಾಜ ರಾಯರೆಡ್ಡಿ ನೇತೃತ್ವದಲ್ಲಿ ವಿ.ಆರ್.ಸುದರ್ಶನ್, ಬೋಸರಾಜ್, ಪ್ರಕಾಶ್ ರಾಥೋಡ್, ಆರ್.ಬಿ.ತಿಮ್ಮಾಪುರ, ವೀರಕುಮಾರ್ ಪಾಟೀಲ್, ಅರವಿಂದ ಅರಳಿ, ಚಂದ್ರಶೇಖರ ಪಾಟೀಲ್, ಸುನಿಲ್‌ಗೌಡ ಪಾಟೀಲ್, ಶರಣಗೌಡ ಎ ಪಾಟೀಲ್, ಕೆ.ಎಸ್.ಎಲ್. ಸ್ವಾಮಿ, ಮೋಹನ್ ಕೊಂಡಜ್ಜಿ, ಚನ್ನರಾಜ್ ಹಟ್ಟಿಹೊಳಿ, ಪ್ರೊ.ಐ.ಜಿ.ಸನದಿ, ರಾಜ ವೆಂಕಟಪ್ಪ ನಾಯಕ್, ವಿಜಯ್ ಸಿಂಗ್. ತಿಪ್ಪಣ್ಣ ಕಮಕನೂರ್, ಶರಣಪ್ಪ ಮಟ್ಟೂರು, ಮರಿಗೌಡ ಪಾಟೀಲ್, ಶಿವಾನಂದ ಹುನಗುಂಟಿ ಅವರನ್ನೊಳಗೊಂಡ ಸಮನ್ವಯ ಸಮಿತಿ ನೇಮಿಸಲಾಗಿದೆ.
ಅದೇ ರೀತಿ ದಕ್ಷಿಣ ಕರ್ನಾಟಕ ಭಾಗಕ್ಕೆ ಜಿ.ಸಿ.ಚಂದ್ರಶೇಖರ್ ನೇತೃತ್ವದಲ್ಲಿ ಕೆ.ಗೋವಿಂದರಾಜ್, ಎಚ್.ಎಂ.ರೇವಣ್ಣ, ಎಸ್.ರವಿ, ಮಂಜುನಾಥ ಭಂಡಾರಿ, ನಸೀರ್ ಅಹಮದ್, ಅಬ್ದುಲ್ ಜಬ್ಟಾರ್, ಎಂ.ನಾರಾಯಣಸ್ವಾಮಿ, ಧರ್ಮಸೇನಾ. ಡಾ.ತಿಮ್ಮಪ್ಪ, ಎಂ.ಎಲ್.ಅನಿಕ್‌ಕುಮಾರ್, ಮಧು ಜಿ ಮಾದೇಗೌಡ. ಬಿ.ಎನ್.ಚಂದ್ರಪ್ಪ, ದಿನೇಶ್ ಗೂಳಿಗೌಡ, ಪಿ.ವಿ.ಮೋಹನ್, ಬಿ.ಎಂ.ಸಂದೀಪ್, ಗಾಯಿತ್ರಿ ಶಾಂತೇಗೌಡ, ಆರ್.ವಿ.ವೆಂಕಟೇಶ್, ಎಂ.ಸಿ.ವೇಣುಗೋಪಾಲ್, ಜಿ.ಎ.ಬಾವಾ. ಎಸ್.ಎ.ಹುಸೇನ್, ನಿವೇದಿತ್ ಆಳ್ವ, ಮಂಜುಳಾ ನಾಯ್ಡು, ರಾಮಕೃಷ್ಣ, ಎಚ್.ಕೆ.ಮಹೇಶ್, ಗುರುಪಾದಸ್ವಾಮಿ, ಮಲ್ಲಿಕಾರ್ಜುನ್ ಅವರನ್ನೊಳಗೊಂಡ ಸಮನ್ವಯ ಸಮಿತಿ ನೇಮಿಸಲಾಗಿದೆ.