Advertisement

ಕಾನ್‌ಸ್ಟೇಬಲ್‌, ಪಿಎಸ್‌ಐ ಪಾರದರ್ಶಕ ನೇಮಕ

11:06 AM Oct 10, 2021 | Team Udayavani |

ಬೆಂಗಳೂರು: ಪೊಲೀಸ್‌ ಇಲಾಖೆಯಲ್ಲಿ ಪ್ರಸ್ತುತ ನಡೆಯುತ್ತಿರುವ ನಾಗರಿಕ ಕಾನ್‌ಸ್ಟೆàಬಲ್‌ ಹಾಗೂ ಸಬ್‌ ಇನ್ಸ್‌ಪೆಕ್ಟರ್‌ಗಳ ನೇಮಕಾತಿಗಳನ್ನು ಅತ್ಯಂತ ಪಾರದರ್ಶಕ ಹಾಗೂ ನಿಯಮಾನುಸಾರ ನಡೆಸುತ್ತಿದ್ದು, ಅಭ್ಯರ್ಥಿಗಳು ಹಾಗೂ ಅವರುಗಳ ಪೋಷಕರು ಯಾವುದೇ ರೀತಿಯ ವದಂತಿಗಳಿಗೆ ಕಿವಿಗೊಡಬೇಡಿ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಮನವಿ ಮಾಡಿದ್ದಾರೆ.

Advertisement

ನೇಮಕಾತಿಯಲ್ಲಿ ಕೆಲಸ ಕೊಡಿಸುತ್ತೇನೆಂದು ಕೆಲವರು ನಂಬಿಕೆ ಹುಟ್ಟಿಸಿ, ಅಭ್ಯರ್ಥಿಗಳನ್ನು ವಂಚಿಸುತ್ತಿರುವ ಕೆಲವು ಘಟನೆಗಳು ವರದಿಯಾಗಿದ್ದು, ಅಭ್ಯರ್ಥಿಗಳು ಹಾಗೂ ಅವರ ಪೋಷಕರು ಅಂತಹ ಯಾವುದೇ ಆಮಿಷಗಳಿಗೆ ಬೆಲೆ ಕೊಡಬಾರದು ಎಂದು ತಿಳಿಸಿದ್ದಾರೆ.

ಇದನ್ನೂ ಓದಿ:- ಕಬ್ಜ ಭರ್ಜರಿ ಶೂಟಿಂಗ್‌: ನವಾಬ್‌ ಷಾ ಎಂಟ್ರಿ- ಮಿನರ್ವ ಮಿಲ್‌ನಲ್ಲಿ ಚಿತ್ರತಂಡ

ಪೊಲೀಸ್‌ ಇಲಾಖೆಯಲ್ಲಿ ಪ್ರಸ್ತುತ 947 ಸಬ್‌ ಇನ್ಸ್‌ಪೆಕ್ಟರ್‌ ಹಾಗೂ 4000 ನಾಗರಿಕ ಕಾನ್‌ಸ್ಟೆàಬಲ್‌ ಹುದ್ದೆಗಳ ನೇಮಕಾತಿ ನಡೆಯುತ್ತಿದ್ದು, ನೇಮಕಾತಿ ಪ್ರಕ್ರಿಯೆಯಗಳ ಭಾಗವಾಗಿ ನಡೆಯುತ್ತಿರುವ ದೈಹಿಕ ಸಾಮರ್ಥ್ಯತೆ ಹಾಗೂ ಲಿಖೀತ ಪರೀಕ್ಷೆಗಳು, ಅತ್ಯಂತ ಪಾರದರ್ಶಕವಾಗಿದ್ದು ಇದರಲ್ಲಿ ದಾಖಲಾಗುವ ಫ‌ಲಿತಾಂಶಗಳೇ ಅಭ್ಯರ್ಥಿಗಳ ಆಯ್ಕೆಯ ಮಾನದಂಡಗಳಾಗಿರುತ್ತವೆ.

ಹುದ್ದೆ ಕೊಡಿಸುವುದಾಗಿ ಯಾರಾದರೂ ಆಮಿಷವೊಡ್ಡಿದರೆ, ಅಭ್ಯರ್ಥಿಗಳು ಅಥವಾ ಅವರ ಪೋಷಕರು, ವಿಷಯವನ್ನು ಪೊಲೀಸರಿಗೆ ತಿಳಿಸಬೇಕು ಮತ್ತು ವಂಚನೆಗೆ ಒಳಗಾಗುವುದರಿಂದ ತಪ್ಪಿಸಿಕೊಳ್ಳಬೇಕು ಎಂದು ತಿಳಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next