Advertisement

PSI: ಪರೀಕ್ಷೆಗೆ ಶೇ.35.5 ಮಂದಿ ಗೈರು; ಹಾಜರಿ 43,250, ಗೈರು ಹಾಜರಿ 23740

12:22 AM Oct 04, 2024 | Team Udayavani |

ಬೆಂಗಳೂರು: ತೀವ್ರ ಕುತೂಹಲ ಕೆರಳಿಸಿದ್ದ 402 ಹುದ್ದೆ ಗಳ ಪೊಲೀಸ್‌ ಸಬ್‌ ಇನ್‌ಸ್ಪೆಕ್ಟರ್‌ಗಳ ನೇಮಕಾತಿ ಪರೀಕ್ಷೆ ರಾಜ್ಯದ 6 ಜಿಲ್ಲೆಗಳ 163 ಕೇಂದ್ರಗಳಲ್ಲಿ ಯಾವುದೇ ಗೊಂದಲ ಇಲ್ಲದೆ ಗುರುವಾರ ಸುಸೂತ್ರವಾಗಿ ನಡೆಯಿತು. ಆದರೆ, ಇದಕ್ಕೆ ಶೇ. 35.5ರಷ್ಟು ಮಂದಿ ಗೈರಾಗಿದ್ದಾರೆ.

Advertisement

ಒಟ್ಟು 66,990 ಮಂದಿ ಪರೀಕ್ಷೆಗೆ ಅರ್ಹರಾಗಿದ್ದರು. ಅವರಲ್ಲಿ 56,528 ಮಂದಿ ಮಾತ್ರ ಪ್ರವೇಶ ಪತ್ರ ಡೌನ್ಲೋಡ್ ಮಾಡಿಕೊಂಡಿದ್ದರು. ಅದರಲ್ಲೂ 43,250 ಮಂದಿ ಪರೀಕ್ಷೆಗೆ (ಶೇ. 64.5ರಷ್ಟು) ಹಾಜರಾಗಿದ್ದರು ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕ ಎಚ್‌.ಪ್ರಸನ್ನ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಬೆಂಗಳೂರು, ವಿಜಯಪುರ, ಶಿವಮೊಗ್ಗ, ಕಲಬುರಗಿ, ಧಾರವಾಡ ಮತ್ತು ದಾವಣಗೆರೆ ನಗರಗಳಲ್ಲಿ ಪರೀಕ್ಷೆ ಆಯೋಜಿಸಲಾಗಿತ್ತು. ಸಿಸಿ ಕೆಮರಾಗಳ ಕಣ್ಗಾವಲಿನಲ್ಲಿ ಬಿಗಿ ಭದ್ರತೆಯಲ್ಲಿ ಪರೀಕ್ಷೆ ನಡೆಸಲಾಯಿತು. ಎಲ್ಲ ಕೇಂದ್ರಗಳಲ್ಲೂ ಜಾಮರ್‌ ಇತ್ತು ಎಂದು ಅವರು ವಿವರಿಸಿದರು.

ಎಲ್ಲ 163 ಪರೀಕ್ಷಾ ಕೇಂದ್ರಗಳ ಮೇಲೆ ನಿಗಾ ಇಡಲು ಜಿಲ್ಲಾ ಮಟ್ಟದಲ್ಲಿ ಮಾತ್ರವಲ್ಲದೆ, ಇಲ್ಲಿನ ಕೆಇಎ ಕಚೇರಿಯಲ್ಲಿಯೂ ಕಮಾಂಡ್‌ ಸೆಂಟರ್‌ ಕಾರ್ಯನಿರ್ವಹಿಸಿದೆ. ನೇಮಕಾತಿ ವಿಭಾಗದ ಹೆಚ್ಚುವರಿ ಪೊಲೀಸ್‌ ಮಹಾನಿರ್ದೇಶಕ ಶರತ್‌ ಚಂದ್ರ, ಡಿಐಜಿ ಸುಧೀಂದ್ರ ಕುಮಾರ್‌ ರೆಡ್ಡಿ ಅವರು ಖುದ್ದು ಕಮಾಂಡ್‌ ಸೆಂಟರ್‌ನಲ್ಲಿ ಕುಳಿತು ಪರೀಕ್ಷಾ ವ್ಯವಸ್ಥೆಯನ್ನು ವೀಕ್ಷಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next