Advertisement
ಉದ್ಯಾನನಗರಿಯ ಕಂಠೀರವ ಕ್ರೀಡಾಂಗಣದಲ್ಲಿರುವ ರಾಜ್ಯ ಕಬಡ್ಡಿ ಸಂಸ್ಥೆಯ ಕೊಠಡಿ ಸಂಖ್ಯೆ 20 ಅನ್ನು ಇದೀಗ ವಶಕ್ಕೆ ಪಡೆದುಕೊಳ್ಳಲಾಗಿದೆ ಎಂದು ಸಹಕಾರ ಇಲಾಖೆ ಮೇ19ರಂದು ಹೊರಡಿಸಿದ ಆದೇಶದಲ್ಲಿ ತಿಳಿಸಿದೆ.
ಈ ಹಿಂದೆ ಈ ಬಗ್ಗೆ ರಾಜ್ಯ ಸರಕಾರ ಕರ್ನಾಟಕ ಅಮೆಚೂರ್ ಕಬಡ್ಡಿ ಸಂಸ್ಥೆಗೆ ಮೂರು ಸಲ ನೋಟಿಸ್ ನೀಡಿತ್ತಾದರೂ ಇದಕ್ಕೆ ಕಬಡ್ಡಿ ಸಂಸ್ಥೆ ಯಾವುದೇ ಉತ್ತರವನ್ನು ನೀಡಿರಲಿಲ್ಲ. ಹೀಗಾಗಿ ಸರಕಾರ ಇದೀಗ ಅಧಿಕೃತ ಕ್ರಮ ತೆಗೆದುಕೊಂಡಿದ್ದು ಮುಂದಿನ 6 ತಿಂಗಳು ಆಡಳಿತಾಧಿಕಾರಿ ಕಬಡ್ಡಿ ಸಂಸ್ಥೆಯ ಉಸ್ತುವಾರಿ ನೋಡಿಕೊಳ್ಳಲಿದ್ದಾರೆ ಎಂದು ತಿಳಿಸಲಾಗಿದೆ.