Advertisement

ಹಜ್‌ ಕಮಿಟಿಗೆ ಆಡಳಿತಾಧಿಕಾರಿ ನೇಮಕ

10:59 PM Jan 20, 2020 | Team Udayavani |

ಬೆಂಗಳೂರು: ಮಾಜಿ ಸಚಿವ ರೋಷನ್‌ ಬೇಗ್‌ ಅಧ್ಯಕ್ಷರಾಗಿದ್ದ ಕರ್ನಾಟಕ ಹಜ್‌ ಕಮಿಟಿಯ ಅವಧಿ ಮುಗಿದ ಕಾರಣ ಹೊಸ ಸಮಿತಿ ರಚಿಸಿ ಸರ್ಕಾರ ಆದೇಶ ಹೊರಡಿಸಿದೆ. ಅಲ್ಪಸಂಖ್ಯಾ ತರ ಇಲಾಖೆ ಕಾರ್ಯದರ್ಶಿ ಎ.ಬಿ.ಇಬ್ರಾಹಿಂ ಅವರನ್ನು ಆಡಳಿ ತಾಧಿಕಾರಿಯಾಗಿ ನೇಮಿಸಿದೆ.

Advertisement

ರಾಜ್ಯಸಭೆ ಸದಸ್ಯ ನಾಸೀರ್‌ ಹುಸೇನ್‌, ವಿಧಾನ ಪರಿಷತ್‌ ಸದಸ್ಯ ಬಿ.ಎಂ. ಫ‌ರೂಕ್‌, ಶಾಸಕಿ ಖನೀಜ್‌ ಫಾತಿಯಾ ಸೇರಿ ಹಜ್‌ ಕಮಿಟಿಗೆ 14 ಸದಸ್ಯರನ್ನು ನೇಮಿಸಿ ಆದೇಶ ಹೊರಡಿಸಿದೆ. ಎಂ.ಡಿ. ನಯೀಮ್‌, ಡಾ.ಮೊಹಮ್ಮದ್‌ ಕಬೀರ್‌ ಅಹಮದ್‌, ಎಂ.ಬಿ.ಮೊಹಮ್ಮದ್‌ ಹನೀಫ್ ಅಸಾಯ್‌, ಮೌಲಾನಾ ಹಫೀಜ್‌ ಮೊಹಮ್ಮದ್‌ ರಫೀಕ್‌, ಸೈಯದ್‌ ಮಂಜೂರ್‌ ರಾಜಾ, ಖುಸ್ರು ಖುರೇಶಿ, ರೌಫ‌ುದ್ದೀನ್‌, ರೆಹಮತುಲ್ಲಾ, ಚಾಂದ್‌ ಪಾಶಾ, ಮೊಹಿದ್ದೀನ್‌ ಸದ್ಯರಾಗಿದ್ದಾರೆ.

ವಕ್ಫ್ ಬೋರ್ಡ್‌ ಅಧ್ಯಕ್ಷರು, ಹಜ್‌ ಕಮಿಟಿ ಕಾರ್ಯನಿರ್ವಹಣಾ ಅಧಿಕಾರಿ ಸಹ ಸದಸ್ಯರಾಗಿರುತ್ತಾರೆ. ನೂತನ ಹಜ್‌ ಕಮಿ ಟಿಯ ಅವಧಿ ಮೂರು ವರ್ಷ ಇರಲಿದೆ ಎಂದು ತಿಳಿಸಲಾಗಿದೆ. ಮಾಜಿ ಸಚಿವ ರೋಷನ್‌ ಬೇಗ್‌ ತಮ್ಮನ್ನೇ ಮತ್ತೂಂದು ಅವಧಿಗೆ ಮುಂದು ವರೆಸುವಂತೆ ಸಿಎಂ ಅವರಿಗೆ ಮನವಿ ಮಾಡಿದ್ದರು ಎನ್ನಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next