ಮೈಸೂರು: ಸರ್ಕಾರ ಕೋವಿಡ್-19 ನೆಪವೊಡ್ಡಿ ಗ್ರಾಪಂ ಚುನಾವಣೆಯನ್ನು ಮುಂದೂ ಡುವ ಮೂಲಕ ಗ್ರಾಪಂಗಳಿಗೆ ಆಡಳಿತ ಮಂಡಳಿ ನೇಮಕ ಮಾಡಿ, ಗ್ರಾಮೀಣ ಮಟ್ಟದಲ್ಲಿ ಪಕ್ಷವನ್ನು ಬಲಪಡಿಸುವ ಹುನ್ನಾರ ನಡೆಸುತ್ತಿದೆ ಎಂದು ಶಾಸಕ ಜಿ.ಟಿ. ದೇವೇಗೌಡ ಆರೋಪಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ 1993ರ ರೂಲ್ 8ರ ಅನ್ವಯ ಗ್ರಾಪಂಗಳಿಗೆ ಸದಸ್ಯರನ್ನು ಚುನಾವಣೆ ಮೂಲಕ ಆಯ್ಕೆ ಮಾಡಲು ಸಾಧ್ಯವಾಗದಿದ್ದಲ್ಲಿ ಆಡಳಿತ ಆಡಳಿತ ಸಮಿತಿ ಅಥವಾ ಆಡಳಿತಾಧಿಕಾರಿ ನೇಮಕ ಮಾಡಲು ಅವಕಾಶ ಇದೆ. ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ 1993 ಪ್ರಕರಣ 7 ಉಪ ಪ್ರಕರಣ 2ರ ಅನ್ವಯ ಗ್ರಾಪಂಗಳ ಚುನಾವಣೆಯನ್ನು ಪಕ್ಷ, ಚಿಹ್ನೆ ರಹಿತವಾಗಿ ನಡೆಸಲಾಗುತ್ತಿದೆ.
ಜೊತೆಗೆ ಬಿಎಸ್‌ವೈ ಅವರು 2009-10ರಲ್ಲಿ ಸಿಎಂ ಆಗಿ ದ್ದಾಗ ಗ್ರಾಪಂಗಳಿಗೆ ಆಡಳಿತ ಮಂಡಳಿ ರಚಿ ಸಲು ಅವಕಾಶವಿದ್ದರೂ, ಸಮಿತಿ ನೇಮಕ ಮಾಡದೆ, ಪಂಚಾಯತ್ ರಾಜ್ ವ್ಯವಸ್ಥೆ ಬಲಪಡಿಸುವ ಉದ್ದೇಶದಿಂದ ಆಡಳಿತಾಧಿಕಾರಿ ಯನ್ನು ನೇಮಿಸಿದ್ದರು. ಈ ಹಿನ್ನೆಲೆ ಈಗಲೂ ಗ್ರಾಪಂಗಳಿಗೆ ಆಡಳಿತ ಮಂಡಳಿ ರಚಿಸಲು ಅವಕಾಶ ನೀಡದೆ, ದಕ್ಷ ಆಡಳಿತಾಧಿಕಾರಿಗಳನ್ನು ನೇಮಿಸಿ ಗ್ರಾಮ ಸ್ವರಾಜ್ ಮೂಲ ಆಶಯಕ್ಕೆ ಧಕ್ಕೆಯಾಗದಂತೆ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದರು.
ಪ್ರಜಾಪ್ರಭುತ್ವದ ಆಶಯಕ್ಕೆ ವಿರುದ್ಧ: ಮತದಾರರೆ ಜನಪ್ರತಿನಿಧಿಗಳನ್ನು ಆಯ್ಕೆ ಮಾಡಿಕೊಳ್ಳ ಬೇಕು. ಪಂಚಾಯತ್ ರಾಜ್ ವ್ಯವಸ್ಥೆ ಜನರ ಪಂಚಾಯ್ತಿಗಳಾಗಬೇಕೆ ಹೊರೆತು ಒಂದು ಪಕ್ಷದ ಪಂಚಾಯ್ತಿಗಳು ಆಗಬಾರ ದು. ಆಗ ರ್ವರ ಅಭಿವೃದಿಟಛಿ ಸಾಧ್ಯವಾಗುವು ದಿಲ್ಲ. ಆದರೆ, ಬಿಜೆಪಿಯವರು ಗ್ರಾಪಂಗಳಿಗೆ ಆಡಳಿತ ಮಂಡಳಿ ರಚಿಸಿ ತಮ್ಮ ಪಕ್ಷದ ಕಾರ್ಯಕರ್ತರನ್ನು ಆಡಳಿತ ಮಂಡಳಿಗೆ ನೇಮಿಸಲು ಮುಂದಾಗಿದ್ದಾರೆ.
ಇದು ಪ್ರಜಾ ಪ್ರಭುತ್ವದ ಆಶಯಗಳಿಗೆ ವಿರುದ್ಧವಾಗಿದೆ. ಗ್ರಾಪಂಗಳಿಗೆ ಚುನಾವಣೆ ನಡೆಸಲು ಸಾಧ್ಯವಾಗ ದಿದ್ದಾಗ ಡೀಸಿ ಆಡಳಿತಾಧಿಕಾರಿಗಳನ್ನು ನೇಮಿಸಿರುವ ಉದಾಹರಣೆಗಳಿವೆ. ಆದರೆ, ಚುನಾಯಿತ ಸಂಸ್ಥೆಗಳಿಗೆ ಹೊರಗಿನವರನ್ನು ನಾಮ ನಿರ್ದೇಶನ ಮಾಡಿ ಆಡಳಿತ ಸಮಿತಿಯನ್ನು ರಚಿಸಿದ ಉದಾಹರಣೆಗಳಿಲ್ಲ. ಭಾರತದ ಸಂವಿಧಾನದ ಆಶಯದಂತೆ ಗ್ರಾಪಂನಿಂದ ಲೋಕಸಭೆಯವರೆಗೂ ಜನ ಪ್ರತಿ ನಿಧಿಗಳು ಜನರಿಂದ ನೇರವಾಗಿ ಆಯ್ಕೆ ಯಾಗಿ ಆಡಳಿತದ ಚುಕ್ಕಾಣಿ ಹಿಡಿಯುವುದು ಸೂಕ್ತ ಎಂದರು.
ಗ್ರಾಪಂ ಮಟ್ಟದಿಂದ ಹೋರಾಟ: ಸರ್ಕಾರ ತನ್ನ ನಿಲುವಿನಿಂದ ಹಿಂದೆ ಸರಿಯಬೇಕು. ಇದೇ ವಿಚಾರದಲ್ಲಿ ನಾನು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಸರ್ಕಾರದ ಮೇಲೆ ಒತ್ತಡ ಹೇರುವಂತೆ ಮನವಿ ಮಾಡಿದ್ದೇನೆ. ಬೇರೆ ಯಾವ ಉದ್ದೇಶದಿಂದಲೂ ಸಿದ್ದರಾಮಯ್ಯ ಅವರ ನ್ನು ಭೇಟಿ ಮಾಡಿಲ್ಲ. ಒಂದು ವೇಳೆ ಸರ್ಕಾರ ಹೊರಗಿನವರನ್ನು ನಾಮ ನಿರ್ದೇಶ ನ ಮಾಡಿದರೆ ಗ್ರಾಪಂ ಮಟ್ಟದಿಂದ ಹೋರಾಟ ನಡೆಸಲಾಗುತ್ತದೆ ಎಂದರು.
ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರು ರಾಜ್ಯ ಸಭೆಗೆ ಸ್ಪರ್ಧಿಸಿದರೆ ನನ್ನ ಮೊದಲ ವೋಟನ್ನು ಅವರಿಗೇ ನೀಡುತ್ತೇನೆ. ರಾಷ್ಟ್ರ ರಾಜಕಾರಣದಲ್ಲಿ ದೇವೇಗೌಡರು ಇರಲೇಬೇಕು. ಹೀಗಾಗಿ, ನಾನು ಅವರಿಗೆ ಮತ ನೀಡುತ್ತೇನೆ.
-ಜಿ.ಟಿ.ದೇವೇಗೌಡ, ಶಾಸಕ