Advertisement

ಸ್ವಚ್ಛತೆ ಕಾಪಾಡಲು ಕ್ಯಾಪ್ಟನ್‌ ನೇಮಕ: ಡೀಸಿ

02:31 PM Aug 26, 2020 | Suhan S |

ಶಿಡ್ಲಘಟ್ಟ: ಚಿಕ್ಕಬಳ್ಳಾಪುರ ನಗರವನ್ನುಸ್ವಚ್ಛ ಮತ್ತು ಸುಂದರವಾಗಿಡಲು ಸಂಕಲ್ಪ ಮಾಡಿರುವ ಜಿಲ್ಲಾಧಿಕಾರಿ ಆರ್‌. ಲತಾ, ಮಂಗಳವಾರ ನಗರದಲ್ಲಿನ 11ನೇ ವಾರ್ಡ್‌ ಗೆ ಭೇಟಿ ನೀಡಿ ಸ್ವಚ್ಛತೆ ಹಾಗೂ ಮೂಲ ಸೌಲಭ್ಯ ಗಳನ್ನು ಪರಿಶೀಲಿಸಿದರು.

Advertisement

ವಾರ್ಡ್‌ನಲ್ಲಿ ರಸ್ತೆ ಮತ್ತು ಸ್ವಚ್ಛತೆ ಪರಿಶೀಲಿಸಿ ಬಳಿಕ ಸಾರ್ವಜನಿಕರ ಕುಂದು ಕೊರತೆ ಗಳನ್ನು ಆಲಿಸಿದರು. ನಗರದ ಪ್ರತಿಯೊಂದು ವಾರ್ಡ್‌ಗಳಲ್ಲಿಯೂ ಕೋವಿಡ್‌-19 ನಿಯಂ ತ್ರಣಕ್ಕೆ ಟಾಸ್ಕ್ಫೋರ್ಸ್‌ಗಳನ್ನು ನೇಮಿಸಿದಂತೆ ಸ್ವಚ್ಛತೆಯನ್ನು ಕಾಪಾಡಲು ಕ್ಯಾಪ್ಟನ್‌ಗಳನ್ನು ನೇಮಿಸುವ ಮೂಲಕ ನಗರದಲ್ಲಿನ ಬ್ಲಾಕ್‌ ಸ್ಪಾಟ್‌ಗಳನ್ನು ತಡೆಯಲು ಮುಂದಾಗಿದ್ದು ನಾಗರಿಕರೂ ನಗರ ವನ್ನು ಸ್ವತ್ಛವಾಗಿ ಡಲು ಸಹಕರಿಸಬೇಕೆಂದು ಮನವಿ ಮಾಡಿದರು.

ಪರಿಶೀಲನೆ: ಜಿಲ್ಲಾಧಿಕಾರಿ ಆರ್‌.ಲತಾ ಮಾತನಾಡಿ, ಚಿಕ್ಕಬಳ್ಳಾಪುರ ನಗರದ ವಾರ್ಡ್‌ ನಂಬರ್‌ 11 ರ ಎಲ್ಲಾ ರಸ್ತೆಗಳು, ಚರಂಡಿ ಗಳು, ಮನೆ-ಮನೆ ಕಸ ಸಂಗ್ರಹಣೆ ಬಗ್ಗೆ, ಹಸಿ, ಒಣ ಕಸ ಬೇರ್ಪಡಿಸುವಿಕೆ ಬಗ್ಗೆ, ಹೋಟೆಲ್‌ಗ‌ಳ ಶುಚಿತ್ವದ ಬಗ್ಗೆ, ಎಲ್ಲಾ ಅಂಗಡಿಗಳ ಮುಂದೆ ಕೊರೊನಾ ಬಗ್ಗೆ ಅರಿವು ಮೂಡಿಸುವ ಬ್ಯಾನರ್‌ಗಳ ಬಗ್ಗೆ, ಪರಿವೀಕ್ಷಣೆ ಮಾಡಿ ಸದರಿ ವಾರ್ಡ್‌ನ ಸ್ವಚ್ಛತೆ ಪರಿಶೀಲನೆ ಮಾಡಲಾಗುತ್ತಿದೆ ಎಂದರು.

ಸಾಂಕ್ರಾಮಿಕ ರೋಗ ನಿಯಂತ್ರಣ: ನಗರದ ಸಾರ್ವಜನಿಕರಿಗೆ ಕಸ ವಿಲೇವಾರಿ ಬಗ್ಗೆ ಅರಿವು ಮೂಡಿಸಿ, ಮನೆಗಳಿಂದಲೇ ಒಣ ಮತ್ತು ಹಸಿ ಕಸವಾಗಿ ವಿಂಗಡಿಸಿ ಸಮರ್ಪಕವಾಗಿ ವಿಲೇವಾರಿ ಮಾಡಬೇಕು. ಚರಂಡಿ ಮತ್ತು ರಸ್ತೆಗಳು ಸ್ವತ್ಛವಾಗಿರ ಬೇಕು. ಪ್ಲಾಸ್ಟಿಕ್‌ ಬಳ ಕೆಯು ಕಡಿಮೆ ಮಾಡಲು ಅರಿವು ಮೂಡಿಸಬೇಕು. ಇದರಿಂದ ಸಾಂಕ್ರಾಮಿಕ ರೋಗಗಳು ಹರಡದಂತೆ ತಡೆಯಬಹುದು ಎಂದರು. ಈ ಸಂದರ್ಭದಲ್ಲಿ ಚಿಕ್ಕಬಳ್ಳಾಪುರ ನಗರಸಭೆ ಪೌರಾಯುಕ್ತ ಲೋಹಿತ್‌, ವಾರ್ಡ್‌ ಸದಸ್ಯರು, ಕಿರಿಯ ಅಭಿಯಂತರರು, ಆರೋಗ್ಯ ನಿರೀಕ್ಷಕರು, ನೋಡಲ್‌ ಅಧಿಕಾರಿಗಳು, ಸ್ವತ್ಛತಾ ಕ್ಯಾಪ್ಟನ್‌ ಸೇರಿದಂತೆ ಮತ್ತಿತರರು ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next