Advertisement
ನೆರಿಗೆ ಗಟ್ಟಲು ವಯಸ್ಸು ಮುಖ್ಯ ಕಾರಣವಾಗಿದ್ದರೂ ಕೂಡ ವಾತಾವರಣ, ಕೆಲವು ಅನುವಂಶೀಯ ಗುಣಗಳು ಪ್ರಭಾವ ಬೀರುತ್ತವೆ. ಅದಲ್ಲದೆ ಕೆಲವರಿಗೆ ಬಿಸಿಲಿನ ಪ್ರಮಾಣ ಜಾಸ್ತಿಯಿಂದಾಗಿ ಧೂಳು ಪ್ರದೂಷಣೆ, ಅತಿಯಾದ ಧೂಮಪಾನ ಮಾಡುವುದು ಇವೆಲ್ಲವೂ ನೆರಿಗೆಗಟ್ಟಲು ಕಾರಣ.ಅದಕ್ಕಾಗಿ ಇದನ್ನು ತಡೆಗಟ್ಟಲು ಕೆಲವು ಸರಳ ಉಪಯೋಗ ಇಲ್ಲಿದೆ.
ನಿಂಬೆಹಣ್ಣಿನ ರಸವನ್ನು ಒಂದು ಚಿಕ್ಕ ಬೌಲ್‌ನಲ್ಲಿ ತೆಗೆದಿಟ್ಟುಕೊಂಡು 5 ನಿಮಿಷಗಳ ಬಳಿಕ ಅದನ್ನು ನೆರಿಗೆ ಕಟ್ಟಿದ ಜಾಗಕ್ಕೆ ಚೆನ್ನಾಗಿ ಲೇಪಿಸಿಕೊಳ್ಳಿ. ಮುಖದಲ್ಲಿ ಮೊಡವೆ ಅಥವಾ ಗಾಯವಾದ ಸ್ಥಳಕ್ಕೆ ಹಚ್ಚುವುದು ಸೂಕ್ತವಲ್ಲ. ಬದಲಾಗಿ ಮುಖದಲ್ಲಿ ಕಪ್ಪು ಕಲೆ ಮುಂತಾದೆಡೆ ನಯವಾಗಿ ಹಚ್ಚಿ 20 ನಿಮಿಷಗಳ ಬಳಿಕ ಉಗುರು ಬೆಚ್ಚಗಿನ ನೀರಿನಲ್ಲಿ ಮುಖ ತೊಳೆದಾಗ ಮೂರು ದಿನದೊಳಗೆ ಮುಖ ಕಾಂತಿಯುತವಾಗಿ ಸುಕ್ಕು ಗಟ್ಟಿದ ನೆರಿಗೆ ಗಳು ಮಾಯವಾಗಿರುತ್ತವೆ. ಬಾಳೆಹಣ್ಣು
ಬಾಳೆಹಣ್ಣು ನಿಮ್ಮ ಮುಖದ ಕಾಂತಿಯನ್ನು ಇಮ್ಮಡಿಗೊಳಿಸಿ ಸುಕ್ಕು ಗಟ್ಟಿದ ತ್ವಚೆಯನ್ನು ನಿವಾರಿಸುತ್ತದೆ. ಎರಡು ಹಣ್ಣುಗಳ ತಿರುಳು ತೆಗೆದು ಚೆನ್ನಾಗಿ ಕಿವುಚಿಕೊಂಡು ನಯವಾದ ಲೇಪ ತಯಾರಿಸಿಕೊಂಡು ಮುಖದ ಮೇಲೆ ಹಚ್ಚಿ ಅರ್ಧ ಗಂಟೆ ಹಾಗೇ ಬಿಡಿ. ಅನಂತರ ಉಗುರು ಬೆಚ್ಚಗಿನ ನೀರಿನಲ್ಲಿ ತೊಳೆದುಕೊಳ್ಳಿ. ಈಗ 3ರಿಂದ 4ದಿನ ಮಾಡಿ.
Related Articles
Advertisement
ಲೋಳೆರಸಆಲೋವೆರಾದಲ್ಲಿರುವ ಮ್ಯಾಲಿಕ್ ಆಮ್ಲ ಚರ್ಮದ ಸೆಳೆತವನ್ನು ಹೆಚ್ಚಿಸುವ ಗುಣ ಹೊಂದಿರುವುದರಿಂದ ಇದರ ತಿರುಳು ತೆಗೆದು ಮುಖಕ್ಕೆ ಹಚ್ಚಿ ಒಣಗಿದ 15 ನಿಮಿಷದ ಬಳಿಕ ಉಗುರು ಬೆಚ್ಚಗಿನ ನೀರಿನಲ್ಲಿ ತೊಳೆದರೆ ಸುಕ್ಕು ಗಟ್ಟುವಿಕೆಯನ್ನು ಹೋಗಲಾಡಿಸಿಕೊಳ್ಳಬಹುದು. -ಪ್ರೀತಿ ಭಟ್ ಗುಣವಂತೆ