Advertisement

285 ರೈತರಿಂದ ದಯಾಮರಣಕ್ಕೆ ಅರ್ಜಿ

06:00 AM May 02, 2018 | |

ನರಗುಂದ: ಸರ್ಕಾರಗಳ ನಿರ್ಲಕ್ಷ್ಯ ಧೋರಣೆಗೆ ಬೇಸತ್ತು ರಾಷ್ಟ್ರಪತಿಗಳಿಗೆ ಮೊರೆ ಹೋಗಲು ದೆಹಲಿ ಚಲೋ ನಡೆಸಿದ ಮಹದಾಯಿ ಹೋರಾಟಗಾರರು, ಮಹದಾಯಿ ವಿವಾದದಲ್ಲಿ ಮಧ್ಯಸ್ಥಿಕೆ ವಹಿಸಿ ನೀರು ದೊರಕಿಸಿಕೊಡಬೇಕು. ಇಲ್ಲವಾದರೆ ದಯಾಮರಣಕ್ಕೆ ಅನುಮತಿ ನೀಡಬೇಕೆಂದು ಆಗ್ರಹಿಸಿ ರಾಷ್ಟ್ರಪತಿ ರಾಮನಾಥ ಕೋವಿಂದ್‌ ಅವರಿಗೆ ಮನವಿ ಸಲ್ಲಿಸಿ ತಿಂಗಳ ಗಡುವು ನೀಡಿದ್ದಾರೆ.

Advertisement

ಏ.25ರಂದು ಹುಬ್ಬಳ್ಳಿಯಿಂದ ರೈಲ್ವೆಯಲ್ಲಿ ತೆರಳಿದ ಸುಮಾರು 285ಕ್ಕೂ ಹೆಚ್ಚು ಮಹದಾಯಿ ಹೋರಾಟಗಾರರು ರೈತ ಸೇನಾ ರಾಜ್ಯಾಧ್ಯಕ್ಷವೀರೇಶ ಸೊಬರದಮಠ ನೇತೃತ್ವದಲ್ಲಿ ಏ.28ರಿಂದ ಮೂರು ದಿನಗಳ ಕಾಲ ದೆಹಲಿ ಸಂಸತ್‌ ಭವನದ
ಎದುರು ಧರಣಿ ನಡೆಸಿದರು. ಧರಣಿಯ ಮೂರನೇ ದಿನದಂದು ಮಹದಾಯಿ ಹೋರಾಟದ 1021ನೇ ದಿನವಾದ ಏ.30ರಂದು ರಾಷ್ಟ್ರಪತಿಗೆ ಮನವಿ ಅರ್ಪಿಸುವ ಕಾರ್ಯ ನಿಗದಿಪಡಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಅಂದು ವೀರೇಶ ಸೊಬರ ದಮಠ ನೇತೃತ್ವದಲ್ಲಿ ಐದು ಜನ ಹೋರಾಟಗಾರರು ತೆರಳಿ ರಾಷ್ಟ್ರಪತಿಗೆ ಮನವಿ ಸಲ್ಲಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next