ಚಾಮರಾಜನಗರ: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯು ಮುಖ್ಯಮಂತ್ರಿ ಮಾತೃಶ್ರೀ ಯೋಜನೆಯನ್ನು ಅನುಷ್ಠಾನಗೊಳಿಸಲಾಗಿದ್ದು ಸೌಲಭ್ಯಕ್ಕಾಗಿ ಅರ್ಜಿ ಆಹ್ವಾನಿಸಿದೆ. ಬಿಪಿಎಲ್ ಕಾರ್ಡ್ ಪಡೆದಿರುವ ಎಲ್ಲ ಗರ್ಭಿಣಿ ಹಾಗೂ ಬಾಣಂತಿಯರು (ಕುಟುಂಬದಲ್ಲಿ ಮೊದಲ ಎರಡು ಜೀವಂತ ಮಗುವಿಗೆ ಮಾತ್ರ) ಅರ್ಜಿ ಸಲ್ಲಿಸಬಹುದು.
ಪ್ರಸವದ 3 ತಿಂಗಳು (7 ರಿಂದ 9 ತಿಂಗಳ ಗರ್ಭಿಣಿ) ಮತ್ತು ಪ್ರಸವ ನಂತರದ 3 ತಿಂಗಳ (ಹೆರಿಗೆ ನಂತರ) ಒಟ್ಟು 6 ಕಂತುಗಳಲ್ಲಿ 6 ಸಾವಿರ ರೂ.ಗಳನ್ನು ಪಡೆಯಲು ಅರ್ಹರು.
ಅರ್ಜಿಯೊಂದಿಗೆ ಫಲಾನುಭವಿಯ ಆಧಾರ್ ಕಾರ್ಡಿನ ಪ್ರತಿ, ತಾಯಿ ಮತ್ತು ಮಕ್ಕಳ ರಕ್ಷಣಾ ಕಾರ್ಡಿನ ಪ್ರತಿ, ಫಲಾನುಭವಿಯ ಆಧಾರ್ ಲಿಂಕ್ ಆಗಿರುವ ಬ್ಯಾಂಕ್ ಖಾತೆಯ ವಿವರ, ಯಾವುದಾದರೊಂದು ವಿಳಾಸ ಗುರುತಿನ ಪತ್ರ (ರೇಷನ್ ಕಾರ್ಡಿನ ಪ್ರತಿ, ಒಪ್ಪಿಗೆ ಪತ್ರದ ದಾಖಲೆಗಳನ್ನು ಸಲ್ಲಿಸಬೇಕು.
ನೋಂದಣಿ ಕಾರ್ಯವು ಅಂಗನ ವಾಡಿ ಕೇಂದ್ರಗಳಲ್ಲಿ ನಡೆಯಲಿದೆ. ಮಾಹಿತಿಗೆ ತಾಲೂಕು ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಚೇರಿ, ಚಾಮರಾಜನಗರ, ದೂ.ಸಂ. 08226- 222603, ಗುಂಡ್ಲುಪೇಟೆದೂ.ಸಂ. 08229-222286, ಕೊಳ್ಳೇಗಾಲ- ದೂ.ಸಂ. 08224-252367, ಸಂತೇ ಮರಹಳ್ಳಿದೂ.ಸಂ. 08226-240215, ಯಳಂದೂರು 082260-240224 ಅಥವಾ ನಗರದ ಜಿಲ್ಲಾಡಳಿತ ಭವನ ದಲ್ಲಿರುವ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇ ಶಕರ ಕಚೇರಿ ದೂ.ಸಂ. 08226- 222445 ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.