ಮುಂಬಯಿ: ಕನ್ನಡ ವಿಭಾಗ ಮುಂಬಯಿ ವಿಶ್ವವಿದ್ಯಾಲಯವು ಕನ್ನಡ ಎಂ. ಎ (ಸೆಮಿಸ್ಟರ್) ಪ್ರಥಮ ವರ್ಷದ ತರಗತಿಗೆ ಅರ್ಜಿಗಳನ್ನು ಆಹ್ವಾನಿಸಿದೆ. ಬಿ.ಎ, ಬಿ.ಕಾಂ, ಬಿ.ಎಸ್ಸಿ ಉತ್ತೀರ್ಣರಾದವರು ಅರ್ಜಿಯನ್ನು ಸಲ್ಲಿಸಬಹುದು.
2019-20ನೇ ಶೈಕ್ಷಣಿಕ ಸಾಲಿನ ತರಗತಿಗಳಿಗೆ ಸೇರ
ಬಯಸುವ ಅರ್ಹ ಅಭ್ಯರ್ಥಿಗಳು ವಿಭಾಗದ ಕಚೇರಿಯಿಂದ ಹೆಚ್ಚಿನ ಮಾಹಿತಿಯನ್ನು ಪಡೆದುಕೊಳ್ಳಬಹುದು. ಅರ್ಜಿಗಳನ್ನು ಅಂಚೆ ಮೂಲಕ ತರಿಸಿಕೊಳ್ಳುವ ಅಭ್ಯರ್ಥಿಗಳು ಡಾ| ಜಿ. ಎನ್. ಉಪಾಧ್ಯ (ಮುಖ್ಯಸ್ಥರು), ಕನ್ನಡ ವಿಭಾಗ, ಮುಂಬಯಿ ವಿಶ್ವವಿದ್ಯಾಲಯ, ರಾನಡೆ ಭವನ, ವಿದ್ಯಾನಗರಿ, ಸಾಂತಾಕ್ರೂಜ್ (ಪೂರ್ವ) ಮುಂಬಯಿ- 400098 ಈ ವಿಳಾಸಕ್ಕೆ ಸ್ವವಿಳಾಸ ಹೊಂದಿದ ಹತ್ತು ರೂ. ಗಳ ಸ್ಟಾಂಪ್ ಹಚ್ಚಿದ ಕವರುಗಳನ್ನು ಲಗತ್ತಿಸಿ ವ್ಯವಹರಿಸಬೇಕು.
ಹೆಚ್ಚಿನ ಮಾಹಿತಿಗಾಗಿ 26543530, 26543469, 26543345 ಈ ನಂಬರುಗಳನ್ನು ಅಥವಾ Email: kannadadepartment@gmail.com , University Website www.mu.ac.in
ಸಂಪರ್ಕಿಸಬಹುದು. ಕನ್ನಡ ಅಭಿವೃದ್ಧಿ ಪ್ರಾಧಿಕಾರ ಅರ್ಹ ವಿದ್ಯಾರ್ಥಿಗಳಿಗೆ ವಾರ್ಷಿಕ 25,000 ರೂ. ಹಾಗೂ ಕರ್ನಾಟಕ ಸಂಘ ಮುಂಬಯಿ ವಾರ್ಷಿಕ ಮೂರು ಸಾವಿರ ರೂ. ವಿದ್ಯಾರ್ಥಿವೇತನ ನೀಡುತ್ತಿದೆ. ತುಂಬಿದ ಅರ್ಜಿಯನ್ನು ಜುಲೈ 15ರೊಳಗೆ ತಲುಪುವಂತೆ ಕಳುಹಿಸಿಕೊಡಬಹುದು. ಜುಲೈ 20 ರಂದು ಲಿಖೀತ ಪ್ರವೇಶ ಪರೀಕ್ಷೆ ನಡೆಯಲಿದ್ದು ಈ ಕುರಿತು ವಿಭಾಗದಿಂದ ಮಾಹಿತಿಯನ್ನು ಪಡೆದುಕೊಳ್ಳುವಂತೆ ವಿಭಾಗದ ಪ್ರಕಟನೆೆ ತಿಳಿಸಿದೆ.