Advertisement

4 ಆವೃತ್ತಿಗಳಲ್ಲಿ 5ಜಿ ತಂತ್ರಜ್ಞಾನವಿರುವ ಐಪೋನ್‌ 12 ಬಿಡುಗಡೆ

04:53 PM Oct 14, 2020 | Karthik A |

ಮಣಿಪಾಲ: ಇನ್ನೇನಿದ್ದರೂ 5ಜಿ ಯುಗ. ಈ ಕಾಲದಲ್ಲಿ ದುಬಾರಿ ಮತ್ತು ಐಷಾರಾಮಿ ಫೋನ್‌ಗಳನ್ನು ಹೊಂದಬೇಕು ಎಂಬ ಆಸೆ ಎಲ್ಲರಲ್ಲಿಯೂ ಇರುತ್ತದೆ.

Advertisement

ಜಗತ್ತಿನ ದುಬಾರಿ ಫೋನ್‌ಗಳ ಸಾಲಿನಲ್ಲಿ ಗುರುತಿಸಿಕೊಂಡಿರುವ ಆ್ಯಪಲ್‌ ತನ್ನ 5ಜಿ ತಂತ್ರಜ್ಞಾನ ಆಧಾರಿತ ಫೋನ್‌ಗಳನ್ನು ಪರಿಚಯಿಸಿದೆ. ಸದ್ಯ ಇದು ಜಗತ್ತಿನ ಗಮನ ಸೆಳೆದಿದ್ದು, ದಿನದ ಟಾಪ್‌ ಟ್ರೆಂಡಿಂಗ್‌ನಲ್ಲಿಯೂ ಇದೆ.

6.1 ಇಂಚು ಡಿಸ್‌ಪ್ಲೇ ಇರುವ ‘ಐಫೋನ್‌ 12’, ಗಾತ್ರದಲ್ಲಿ ಐಫೋನ್‌ 11 ಮಾದರಿಯಂತೆಯೇ ಕಂಡರೂ ಹಗುರ ಮತ್ತು ತೆಳುವಾಗಿ ಆಕರ್ಷಕವಾಗಿದೆ.

ಐಫೋನ್ 12 ಸಿರೀಸ್‌ನಲ್ಲಿ ನಾಲ್ಕು ಮಾದರಿಗಳು ಬಿಡುಗಡೆಯಾಗಿವೆ. ಈ ಸರಣಿಯಲ್ಲಿ ಬಿಡುಗಡೆಯಾಗಿರುವ 4 ಫೋನ್‌ಗಳು ಭಿನ್ನವಾಗಿದೆ. ಐಫೋನ್ 12, ಐಫೋನ್ 12 ಮಿನಿ, ಐಫೋನ್ 12 ಪ್ರೊ ಮತ್ತು ಐಫೋನ್ 12 ಪ್ರೊ ಮ್ಯಾಕ್ಸ್ ಎಂದು ಅವುಗಳಿಗೆ ಹೆಸರಿಡಲಾಗಿದೆ.

ಎಲ್ಲ ಐಫೋನ್‌ಗಳು 5G ತಂತ್ರಜ್ಞಾನವನ್ನು ಹೊಂದಿವೆ. A14 ಬಯಾನಿಕ್ ಚಿಪ್, ಸೂಪರ್ ರೆಟಿನಾ XDR ಡಿಸ್‌ಪ್ಲೇ ಮತ್ತು ಸೆರಾಮಿಕ್ ಶೀಲ್ಡ್ ಕವರ್ ಹೊಂದಿದೆ. ಹೊಸ ಐಫೋನ್ 12 ಸರಣಿಯಲ್ಲಿ ಇಯರ್‌ಪಾಡ್ಸ್ ಇರುವುದಿಲ್ಲ. ಜತೆಗೆ ಚಾರ್ಜಿಂಗ್ ಅಡಾಪ್ಟರ್ ಕೂಡ ಇಲ್ಲ, ಆದರೆ ಫಾಸ್ಟ್ ಚಾರ್ಜಿಂಗ್ USB‑C ಟು Lightning ಕೇಬಲ್ ನೀಡಲಾಗುತ್ತದೆ ಎಂದು ಮೂಲಗಳು ತಿಳಿಸಿವೆ.

Advertisement

ಐಫೋನ್ 12, 6.1 ಇಂಚಿನ ಡಿಸ್‌ಪ್ಲೇ ಹೊಂದಿದೆ. 1P68 ವಾಟರ್ ಮತ್ತು ಡಸ್ಟ್ ರೆಸಿಸ್ಟ್ ಹೊಂದಿದೆ ಎಂದು ಸಂಸ್ಥೆ ಹೇಳಿದೆ. ತನ್ನ ನಾಲ್ಕು ಆವೃತ್ತಿಗಳಿಗೆ 4 ದರವನ್ನು ನಿಗದಿಪಡಿಸಲಾಗಿದೆ. ಆ್ಯಪಲ್ ಐಫೋನ್ 12, 64GB ಮಾದರಿಗೆ ದೇಶದಲ್ಲಿ 79,990 ರೂ. ಎಂದೂ, 128GB ಗೆ 84,990 ರೂ., 256GB ಮಾದರಿಗೆ 94,900 ರೂ. ದರ ನಿಗದಿಪಡಿಸಲಾಗಿದೆ.

ಐಫೋನ್ 12 ಮಿನಿ ಆವೃತ್ತಿಯಲ್ಲಿ 5G, A14 Bionic ಚಿಪ್, 5.4 ಇಂಚಿನ ಸೂಪರ್ Retina XDR ಡಿಸ್‌ಪ್ಲೇ ಇದೆ. ಇದಕ್ಕೆ 64 GB ಮಾದರಿಗೆ 69,900 ರೂ., 128 GB ಮಾದರಿಗೆ 74,900 ರೂ.ಮತ್ತು 256GB ಆವೃತ್ತಿಗೆ 84,900 ರೂ. ದರ ನಿಗದಿಪಡಿಸಲಾಗಿದೆ.
ಐಫೋನ್ 12 ಪ್ರೊ, 128GB, 256GB, ಮತ್ತು 512GB ಎಂಬ ಮೂರು ಆವೃತ್ತಿ ಮತ್ತು ನಾಲ್ಕು ಬಣ್ಣಗಳಲ್ಲಿ ಲಭ್ಯವಿದೆ. ಹೊಸ ಐಫೋನ್ 12 ಪ್ರೊ ಸರಣಿ ಬೆಲೆ ದೇಶದಲ್ಲಿ 1,19,900 ರೂ.ನಿಂದ ಆರಂಭವಾಗುತ್ತದೆ.

12 ಪ್ರೊ ಮ್ಯಾಕ್ಸ್ 6.7 ಇಂಚಿನ ಡಿಸ್‌ಪ್ಲೇ ಹೊಂದಿದ್ದು, A14 ಬಯಾನಿಕ್ ಪ್ರೊಸೆಸರ್ ಹೊಂದಿದೆ. ಇದೂ ಮೂರು ಆವೃತ್ತಿಯನ್ನು ಹೊಂದಿದ್ದು ದರಗಳು 1 ಲಕ್ಷದ ಮೇಲೆ ಇದೆ. 128 ಜಿಬಿ ಸಾಮರ್ಥ್ಯದ ಫೋನ್‌ಗೆ 1,29,900 ರೂ, 256 ಜಿ ಆವೃತ್ತಿಗೆ 1,39,900 ರೂ. 512 ಜಿಬಿ ಮಾದರಿಗೆ 1,59,900 ರೂ. ಎಂದು ನಿಗದಿಪಡಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next