Advertisement

ಒರೆಸುವ ಬಟ್ಟೆ ತಯಾರಿಸಲಿದೆ ಆ್ಯಪಲ್‌ ಸಂಸ್ಥೆ !

08:30 PM Dec 15, 2019 | Lakshmi GovindaRaj |

“ಆ್ಯಪಲ್‌’, ಮಾರುಕಟ್ಟೆಗೆ ನವನವೀನ ಸವಲತ್ತುಗಳನ್ನು ನೀಡುವುದರಲ್ಲಿ ಮುಂಚೂಣಿಯಲ್ಲಿರುವ ತಂತ್ರಜ್ಞಾನ ಸಂಸ್ಥೆ. ಅದೀಗ ಶುಚಿಗೊಳಿಸುವ ಬಟ್ಟೆ ತಯಾರಿಕೆಗೂ ಇಳಿದಿದೆ. ವಿಶ್ವದಲ್ಲೇ ಉತೃಷ್ಟ ಗುಣಮಟ್ಟದ ಉಪಕರಣಗಳನ್ನು ಜನರಿಗೆ ತಲುಪಿಸುವ ಸಂಸ್ಥೆ ಒರೆಸುವ ಬಟ್ಟೆಯನ್ನು ತಯಾರಿಸಲಿದೆ ಎನ್ನುವ ಸುದ್ದಿ ಕೇಳಿದಾಕ್ಷಣ ಅದರ ಸತ್ಯಾರ್ಹತೆಯ ಬಗ್ಗೆ ಗೊಂದಲ ಮೂಡುವುದು ಸಹಜ. ಆದರೆ, ಈ ಸುದ್ದಿಯಲ್ಲಿ ಯಾವುದೇ ಲೋಪದೋಷಗಳಿಲ್ಲ.

Advertisement

ಅದರಲ್ಲಿ ಹೇಳಿರುವುದು ದಿಟವೇ. ಆದರೆ, ಮೊದಲು ಅದರ ಹಿನ್ನೆಲೆಯನ್ನು ತಿಳಿದುಕೊಳ್ಳುವುದು ಒಳಿತು. ಆ್ಯಪಲ್‌, ಕೆಲ ದಿನಗಳ ಹಿಂದಷ್ಟೇ “ಪ್ರೊ ಡಿಸ್‌ಪ್ಲೇ ಎಕ್ಸ್‌ಡಿಆರ್‌’ ಎನ್ನುವ 32 ಇಂಚಿನ ಮಾನಿಟರ್‌ (ಡಿಜಿಟಲ್‌ ಪರದೆ)ಅನ್ನು ಮಾರುಕಟ್ಟೆಗೆ ಬಿಡುಗಡೆಗೊಳಿಸಿತ್ತು. ಅದರ ಬೆಲೆ ಸುಮಾರು ಮೂರೂವರೆ ಲಕ್ಷ ರೂ. ಇನ್ನೂ 75,000 ರೂ. ಹೆಚ್ಚಿಗೆ ತೆತ್ತರೆ “ನ್ಯಾನೋ ಟೆಕ್ಸ್‌ಚರ್‌’ ಎನ್ನುವ ಸವಲತ್ತನ್ನು ಹೆಚ್ಚುವರಿಯಾಗಿ ಅದು ನೀಡುತ್ತಿತ್ತು.

ಅದು ಪರದೆಯ ಗುಣಮಟ್ಟವನ್ನು ಇನ್ನಷ್ಟು ಸುಧಾರಿಸುವ ತಂತ್ರಜ್ಞಾನ. ದುಬಾರಿ ಪರದೆ ಎಂದಮೇಲೆ ಅದನ್ನು ಮಿಕ್ಕೆಲ್ಲಾ ಪರದೆಯನ್ನು ಶುಚಿಗೊಳಿಸುವಂತೆ ಒರೆಸಲಾ ದೀತೆ? ಖಂಡಿತವಾಗಿಯೂ ಇಲ್ಲ. ಮೈಕ್ರೋಫೈಬರ್‌ ಬಟ್ಟೆಯನ್ನೂ ಬಳಸುವ ಹಾಗಿಲ್ಲವಂತೆ. ಅಷ್ಟು ಸೂಕ್ಷ್ಮ ಈ ಪರದೆ. ಗ್ರಾಹಕರು ಯಾವ ಯಾವುದೋ ಬಟ್ಟೆಯಿಂದ ಒರೆಸಿ ಅಷ್ಟೊಳ್ಳೆಯ, ದುಬಾರಿ ಬೆಲೆಯ ಪರದೆಯನ್ನು ಹಾಳು ಮಾಡಿಕೊಳ್ಳುವುದು ಬೇಡ ಎನ್ನುವುದು ಆ್ಯಪಲ್‌ನ ಉದ್ದೇಶ.

ಅದಕ್ಕಾಗಿಯೇ, ತಾನೇ ಖುದ್ದು ಪರದೆ ಒರೆಸುವ ಬಟ್ಟೆಯನ್ನು ತಯಾರಿಸಿ ನೀಡಲು ಮುಂದಾಗಿದೆ. “ಪ್ರೊ ಡಿಸ್‌ಪ್ಲೇ ಎಕ್ಸ್‌ಡಿಆರ್‌’ ಮಾನಿಟರ್‌ ಕೊಂಡರಷ್ಟೇ ಈ ಬಟ್ಟೆ ದೊರೆಯುವುದು. ಸಂಸ್ಥೆ, ಬಟ್ಟೆಯನ್ನು ಮಾತ್ರ ನೀಡುತ್ತಿಲ್ಲ. ಈ ವಿಶೇಷ ಪರದೆಯನ್ನು ಯಾವ ರೀತಿ ಒರೆಸಬೇಕು ಎನ್ನುವ ಮಾಹಿತಿ ಇರುವ ಕೈಪಿಡಿಯನ್ನೂ ಜೊತೆಯಲ್ಲಿ ನೀಡುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next