Advertisement

ಆ್ಯಪಲ್‌ ಬ್ಯಾಟರಿ ಬೆಲೆ 4 ಸಾವಿರ ರೂ.ಗಳಷ್ಟು ಕಡಿತ

02:21 PM Dec 30, 2017 | |

ವಾಷಿಂಗ್ಟನ್‌: ಭಾರತದಲ್ಲಿರುವ ಐಫೋನ್‌ ಗ್ರಾಹಕರಿಗೆ ಸಿಹಿ ಸುದ್ದಿಯನ್ನು ಕೊಟ್ಟಿರುವ ಆ್ಯಪಲ್‌ ಮೊಬೈಲ್‌ ಸಂಸ್ಥೆ, ಐಫೋನ್‌ 6 ಹಾಗೂ ಅದರ ನಂತರ ಮಾದರಿಗಳಲ್ಲಿರುವ ಬ್ಯಾಟರಿಗಳನ್ನು ಕಡಿಮೆ ಬೆಲೆಗೆ ಬದಲಿಸಿಕೊಡುವುದಾಗಿ ಪ್ರಕಟಿಸಿದೆ. ಅಲ್ಲದೆ, ಹೊಸ ಬ್ಯಾಟರಿಗಳ ಬೆಲೆಯಲ್ಲಿ 4 ಸಾವಿರ ರೂ.ಗಳಷ್ಟು ಇಳಿಕೆ ಮಾಡಿದೆ. 

Advertisement

ಸದ್ಯಕ್ಕೆ ಆ್ಯಪಲ್‌ ಫೋನ್‌ಗಳ ಬ್ಯಾಟರಿ ಬೆಲೆ 6 ಸಾವಿರ ರೂ.ಗಳಷ್ಟಿದ್ದು ಶೀಘ್ರ ಇದರ ಬೆಲೆ 2 ಸಾವಿರ ರೂ.ಗಳಿಗೆ ಇಳಿಯಲಿದೆ. ಇದಕ್ಕಿಂತ ಪ್ರಮುಖವಾದ ಮತ್ತೂಂದು ವಿಚಾರ ವೆಂದರೆ, ಐಫೋನ್‌ 6 ಹಾಗೂ ಅದರ ಮೇಲ್ಪಟ್ಟ ಮಾದರಿಗಳಲ್ಲಿ ತಾನು ಉದ್ದೇಶಪೂರ್ವಕವಾಗಿಯೇ ದೋಷಯುಕ್ತ ಬ್ಯಾಟರಿಗಳನ್ನು ಅಳವಡಿಸಿರುವುದಾಗಿ ಹೇಳಿರುವ ಆ್ಯಪಲ್‌ ತನ್ನ ಈ ನಡೆಗಾಗಿ ಗ್ರಾಹಕರಲ್ಲಿ ಕ್ಷಮೆಯನ್ನೂ ಕೋರಿದೆ.
 

Advertisement

Udayavani is now on Telegram. Click here to join our channel and stay updated with the latest news.

Next