Advertisement

ED ಮುಂದೆ ಹಾಜರಾಗಿ; ಕಾನೂನಿನೊಂದಿಗೆ ಆಡಬೇಡಿ: ಕಾರ್ತಿಗೆ ಸುಪ್ರೀಂ

06:21 AM Jan 30, 2019 | udayavani editorial |

ಹೊಸದಿಲ್ಲಿ : ಏರ್‌ಸೆಲ್‌ ಮ್ಯಾಕ್ಸಿಸ್‌ ಮತ್ತು ಐಎನ್‌ಎಕ್ಸ್‌ ಕೇಸುಗಳಿಗೆ ಸಂಬಂಧಿಸಿ ಮಾರ್ಚ್‌ 5, 6, 7 ಮತ್ತು 12ರಂದು ವಿಚಾರಣೆಗೆ ಜಾರಿ ನಿರ್ದೇಶನಾಲಯದ ಮುಂದೆ ಹಾಜರಾಗಬೇಕು ಎಂದು ಹಿರಿಯ ಕಾಂಗ್ರೆಸ್‌ ನಾಯಕ ಪಿ ಚಿದಂಬರಂ ಅವರ ಪುತ್ರ ಕಾರ್ತಿ ಚಿದಂಬರಂ ಅವರಿಗೆ ಸುಪ್ರೀಂ ಕೋರ್ಟ್‌ ಇಂದು ಬುಧವಾರ ಆದೇಶಿಸಿದೆ; ಮಾತ್ರವಲ್ಲ ಕಾನೂನಿನೊಂದಿಗೆ ಆಟವಾಡಕೂಡದೆಂಬ ಖಡಕ್‌ ಎಚ್ಚರಿಕೆಯನ್ನೂ ನೀಡಿದೆ. 

Advertisement

ವಿದೇಶಕ್ಕೆ ಹೋಗುವುದಕ್ಕೆ ಅನುಮತಿ ನೀಡಿರುವಲ್ಲಿನ ಶರತ್ತುಗಳಲ್ಲಿ ಒಂದಾಗಿದ್ದ ಪ್ರಕಾರ 10 ಕೋಟಿ ರೂ.ಗಳನ್ನು ಕೋರ್ಟ್‌ ರಿಜಿಸ್ಟ್ರಿಯಲ್ಲಿ ಜಮೆ ಮಾಡುವಂತೆಯೂ ಸುಪ್ರೀಂ ಕೋರ್ಟ್‌, ಕಾರ್ತಿ ಚಿದಂಬರಂ ಗೆ ಅಪ್ಪಣೆ ಮಾಡಿದೆ. 

ತನಗೆ ಫೆ.21ರಿಂದ 28ರ ತನಕ ಫ್ರಾನ್ಸಿಗೆ ಹೋಗುವುದಕ್ಕೆ ಅನುಮತಿ ನೀಡಬೇಕೆಂದು ಕೋರಿ ಕಾರ್ತಿ, ಕಳೆದ ವರ್ಷ ನವೆಂಬರ್‌ನಲ್ಲಿ ಕೋರ್ಟಿಗೆ ಮನವಿ ಮಾಡಿಕೊಂಡಿದ್ದರು. 

“ನೀವು ಎಲ್ಲಿಗೆ ಬೇಕಾದರೂ ಹೋಗಬಹುದು; ಏನು ಬೇಕಾದರೂ ಮಾಡಬಹುದು. ಆದರೆ ಕಾನೂನಿನೊಂದಿಗೆ ಮಾತ್ರ ಆಟವಾಡಕೂಡದು. ವಿಚಾರಣೆಗೆ ನಿಮ್ಮಿಂದ ಸಹಕಾರ ಸಿಗುತ್ತಿಲ್ಲ ಎಂಬ ಬಗ್ಗೆ ಒಂದು ಬಿಂದುವಿನಷ್ಟು ಸಂದೇಹ ನಮಗೆ ಬಂದರೂ ನಾವು ನಿಮ್ಮನ್ನು ಕಟುವಾಗಿ ದಂಡಿಸುವೆವು’ ಎಂದು ವರಿಷ್ಠ ನ್ಯಾಯಮೂರ್ತಿ ರಂಜನ್‌ ಗೊಗೋಯ್‌ ನೇತೃತ್ವದ ಪೀಠ, ಕಾರ್ತಿ ಚಿದಂಬರಂ ಗೆ ಖಡಕ್‌ ಎಚ್ಚರಿಕೆ ನೀಡಿತು. 

Advertisement

Udayavani is now on Telegram. Click here to join our channel and stay updated with the latest news.

Next