Advertisement

ವಿವಿಧ ಬೇಡಿಕೆ ಈಡೇರಿಸುವಂತೆ ಮನವಿ

12:05 PM Apr 22, 2021 | Team Udayavani |

ಮಣಿಪಾಲ: ವಿಶ್ವಾದಾದ್ಯಂತ ಇರುವ ಅನಿವಾಸಿ ಕನ್ನಡಿಗರ ಸಂಘಟನೆಗಳನ್ನು ಒಂದೇ ವೇದಿಕೆಯಡಿಯಲ್ಲಿ ಒಗ್ಗೂಡಿಸಿ, ವಿದೇಶಗಳಲ್ಲೂ ಕನ್ನಡದ ಕಂಪನ್ನು ಪಸರಿಸಲು ಹಾಗೂ ಅನಿವಾಸಿ ಕನ್ನಡಿಗರ ಪ್ರತಿಯೊಂದು ಸಮಸ್ಯೆಗೂ ಒಗ್ಗಟ್ಟಿನಿಂದ ಧ್ವನಿಗೂಡಿಸಲೆಂದು ರಚನೆಯಾದ ಅಂತಾರಾಷ್ಟ್ರೀಯ ಕನ್ನಡಿಗರ ಒಕ್ಕೂಟ (ಇಂಟರ್‌ನ್ಯಾಶನಲ್‌ ಕನ್ನಡಿಗಾಸ್‌ ಫೆಡರೇಷನ್‌)ತಂಡವು 34 ದೇಶಗಳಲ್ಲಿ ಇರುವ 124ಕ್ಕೂ ಹೆಚ್ಚಿನ ಕನ್ನಡಪರ, ಅನಿವಾಸಿ ಕನ್ನಡಿಗರ ಸಂಘಟನೆಗಳನ್ನು ಒಂದೇ ವೇದಿಕೆಯಲ್ಲಿ ಒಗ್ಗೂಡಿಸುವಲ್ಲಿ ಯಶಸ್ವಿಯಾಗಿದೆ.

Advertisement

ಅನಿವಾಸಿ ಕನ್ನಡಿಗರು ಕನ್ನಡಿಗಾಸ್‌ ಫೆಡರೇಷನ್‌ ಜತೆಗೂಡಿ ಕಳೆದ 6 ತಿಂಗಳುಗಳಿಂದ ಕರ್ನಾಟಕ ಅನಿವಾಸಿ ಭಾರತೀಯ ಸಮಿತಿಗೆ ಉಪಾಧ್ಯಕ್ಷರನ್ನು ನೇಮಿಸುವಂತೆ ಒಕ್ಕೊರಲಿನ ಅಭಿಯಾನ ನಡೆಸುತ್ತಿದೆ.

ಇದರೊಂದಿಗೆ ಉಪಾಧ್ಯಕ್ಷರ ಸ್ಥಾನಕ್ಕೆ ಅನಿವಾಸಿಗಳ ಸಂಕಷ್ಟ ಬಲ್ಲ ಒಬ್ಬ ಸಮರ್ಥ ಅನಿವಾಸಿ ಕನ್ನಡಿಗರನ್ನೇ ನೇಮಿಸಬೇಕು, ನನೆಗುದಿಗೆ ಬಿದ್ದಿರುವ ಎನ್‌.ಆರ್‌.ಕೆ. ಕಾರ್ಡ್‌ ಯೋಜನೆಯನ್ನು ತ್ವರಿತವಾಗಿ ಜಾರಿಗೊಳಿಸಬೇಕು, ಬಹ್ರೈನ್‌ನಲ್ಲಿ ಕನ್ನಡ ಭವನಕ್ಕೆ ಅನುದಾನ ನೀಡಿದಂತೆ ಹೆಚ್ಚು ಕನ್ನಡಿಗರಿರುವ ದೇಶಗಳಲ್ಲಿ ಕನ್ನಡ ಭವನ ನಿರ್ಮಾಣ ಮಾಡಬೇಕು ಎನ್ನುವ ಬೇಡಿಕೆಯನ್ನು ಅನಿವಾಸಿ ಕನ್ನಡಿಗರ ಪರವಾಗಿ ಅನಿವಾಸಿ ಕನ್ನಡಿಗರ ಒಕ್ಕೂಟದ ಸಂಚಾಲಕರಾದ ಹಿದಾಯತ್‌ ಅಡೂxರ್‌ ಮತ್ತು ಸಂಯೋಜಕರಾಗಿರುವ ರಾಜೇಶ್‌ ಸಿಕ್ವೇರ ಅವರು ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರಿಗೆ ಸಲ್ಲಿಸಿದ ಮನವಿಯ ಪ್ರತಿಯನ್ನು ಕ್ಯಾ| ಗಣೇಶ್‌ ಕಾರ್ಣಿಕ್‌ ಅವರಿಗೂ ಸಲ್ಲಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next