Advertisement
ಮೀನಿನ ಬರ, ಹವಾಮಾನ ವೈಪರೀತ್ಯ, ಆಗಾಗ ಉಂಟಾಗುತ್ತಿರುವ ಚಂಡಮಾರುತ, ಈಗ ಕೊರೊನಾ ಲಾಕ್‌ಡೌನ್‌ನಿಂದಾಗಿ ಮೀನುಗಾರಿಕೆಗೆ ಭಾರೀ ಹೊಡೆತ ಬಿದ್ದಂತಾಗಿದೆ.
ಡಿಸೆಂಬರ್‌ವರೆಗೆ ಮಾತ್ರ ಡೀಸೆಲ್ ಸಬ್ಸಿಡಿ ಹಣ ಮೀನುಗಾರರ ಖಾತೆಗಳಿಗೆ ಪಾವತಿಯಾಗಿದ್ದು, ಅಲ್ಲಿಂದ ಈವರೆ ಗಿನದ್ದು ಬಾಕಿಯಿದೆ. ಉಡುಪಿ ಜಿಲ್ಲೆಯಲ್ಲಿ ಪ್ರತಿ ವರ್ಷ 1,600 ಮೀನು ಗಾರರಿಗೆ 7 ಕೋ.ರೂ. ಹಾಗೂ ದ.ಕ. ಜಿಲ್ಲೆಯಲ್ಲಿ 953 ಮೀನುಗಾರರಿಗೆ 6.32 ಕೋ.ರೂ. ಡೀಸೆಲ್ ಸಬ್ಸಿಡಿ ನೀಡಲಾಗುತ್ತಿದೆ. ನಾಡದೋಣಿಗಳಿಗೂ ಕೂಡ ಸಬ್ಸಿಡಿ ಸೀಮೆಎಣ್ಣೆ ಅಗತ್ಯದಷ್ಟು ಪೂರೈಕೆಯಾಗುತ್ತಿಲ್ಲ.
Related Articles
ಮೀನುಗಾರಿಕೆಯೆಂದರೆ ಮೀನು ಗಾರರು ಮಾತ್ರವಲ್ಲ ಬೋಟುಗಳಲ್ಲಿ ಕೆಲಸ ಮಾಡುವ ಕಾರ್ಮಿಕರು, ಮಹಿಳಾ ಮೀನು ಮಾರಾಟಗಾರರು, ಐಸ್ ಪ್ಲಾಂಟ್, ಫಿಶ್ ಮಿಲ್‌ಗಳಲ್ಲಿ ಕೆಲಸ ನಿರ್ವಹಿಸುವ ಸಾವಿರಾರು ಮಂದಿ ಕಾರ್ಮಿಕರಿದ್ದಾರೆ. ಇವರೆಲ್ಲ ಮೀನುಗಾರಿಕೆಯಿಲ್ಲದೆ ಸಂಕಷ್ಟ ದಲ್ಲಿದ್ದಾರೆ. ಒಂದೊಂದು ಬೋಟ್‌ಗಳಲ್ಲಿಯೇ 30-40 ಮಂದಿ ಇರುತ್ತಾರೆ.
Advertisement
ಶೀಘ್ರ ನಿರ್ಧಾರ: ಸಚಿವ ಕೋಟಈಗಾಗಲೇ ಕೈರಂಪಣಿ, ಮೋಟುಬಲೆ ಸಹಿತ ಸಾಂಪ್ರದಾಯಿಕ ಮೀನುಗಾರಿಕೆಗೆ ಅವಕಾಶ ನೀಡಲಾಗಿದೆ. ಆದರೆ ಯಾಂತ್ರೀಕೃತ ಮೀನುಗಾರಿಕೆ ಆರಂಭಿಸಿದರೆ ಸಾಮಾಜಿಕ ಅಂತರ ಹೇಗೆ ಕಾಯ್ದುಕೊಳ್ಳುವುದು ಎನ್ನುವುದರ ಬಗ್ಗೆ ಚಿಂತನೆ ನಡೆಯುತ್ತಿದ್ದು, ಇನ್ನು ಒಂದೆರಡು ದಿನಗಳಲ್ಲಿ ಈ ಬಗ್ಗೆ ತೀರ್ಮಾನ ಕೈಗೊಳ್ಳಲಾಗುವುದು. ಮೀನುಗಾರರಿಗೆ ಈಗಾಗಲೇ 3 ತಿಂಗಳ ಕಾಲ ಸಾಲ ಪಾವತಿಗೆ ವಿನಾಯಿತಿ ನೀಡಲಾಗಿದೆ. ಅವರಿಗೆ ರಜೆ ಆರಂಭವಾಗುವುದರಿಂದ ಮತ್ತೆ ವಿನಾಯಿತಿ ವಿಸ್ತರಣೆ ಕುರಿತಂತೆ ರಾಜ್ಯ ಸರಕಾರದೊಂದಿಗೆ ಚರ್ಚಿಸಿ ಸೂಕ್ತ ನಿರ್ಧಾರ ಕೈಗೊಳ್ಳಲಾಗುವುದು. ಅನ್ಯ ರಾಜ್ಯದವರ ಬೋಟ್ ಕಂಡು ಬಂದರೆ ನಿರ್ದಾಕ್ಷಿಣ್ಯ ಕ್ರಮಕ್ಕೆ ಸಂಬಂಧಪಟ್ಟ ಎಲ್ಲ ಜಿಲ್ಲಾಧಿಕಾರಿಗಳು, ಕರಾವಳಿ ಕಾವಲು ಪಡೆ ಎಸ್ಪಿಗಳಿಗೆ ಸೂಚನೆ ನೀಡಲಾಗಿದೆ. ಬೋಟ್ ವಶಕ್ಕೆ ಪಡೆಯಲು ಕೂಡ ಸೂಚಿಸಲಾಗಿದೆ ಎಂದು ಮೀನುಗಾರಿಕೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ. ಸಾಲ ಪಾವತಿ ಕಷ್ಟ
ಆಳ ಸಮುದ್ರ ಮೀನುಗಾರಿಕೆಗೆ ಭಾರೀ ಸಂಕಷ್ಟ ಎದುರಾಗಿದ್ದು, ಉತ್ತಮ ಮೀನುಗಾರಿಕೆ ಆಗಬಹುದು ಎಂದು ಸಹಕಾರಿ ಸಂಘ, ರಾಷ್ಟ್ರೀಕೃತ ಬ್ಯಾಂಕ್‌ಗಳಿಂದ ಲಕ್ಷಾಂತರ ರೂ. ಸಾಲ ಪಡೆದಿದ್ದಾರೆ. ಈವರೆಗೆ ಉತ್ತಮ ಮೀನುಗಾರಿಕೆಯೇ ನಡೆದಿಲ್ಲ. ಎಪ್ರಿಲ್- ಮೇಯಲ್ಲಾದರೂ ಉತ್ತಮ ಸೀಸನ್ ಆಗಬಹುದು ಎನ್ನುವ ನಿರೀಕ್ಷೆಯೂ ಕೋವಿಡ್-19 ದಿಂದ ಹುಸಿಯಾಗಿದೆ. ಇದರಿಂದ ಸಾಲ ಮರು ಪಾವತಿ ಮಾಡುವುದೇ ಕಷ್ಟವಾಗಿದ್ದು, ಇನ್ನು 5-6 ತಿಂಗಳ ಕಾಲ ಸಾಲ ಪಾವತಿಗೆ ಸರಕಾರ ವಿನಾಯಿತಿ ನೀಡಬೇಕು.
– ಕೃಷ್ಣ ಎಸ್. ಸುವರ್ಣ, ಅಧ್ಯಕ್ಷರು, ಮಲ್ಪೆ ಮೀನುಗಾರರ ಸಂಘ ವಿಶೇಷ ಪ್ಯಾಕೇಜ್ ಘೋಷಿಸಲಿ
ಮೀನುಗಾರಿಕೆಯನ್ನೇ ನಂಬಿಕೊಂಡಿರುವ ಉ. ಕನ್ನಡ, ದ.ಕ. ಹಾಗೂ ಉಡುಪಿ ಜಿಲ್ಲೆಯ ಸಾವಿರಾರು ಮಂದಿ ಮೀನುಗಾರರು, ಕಾರ್ಮಿಕರು ತೀವ್ರ ಸಂಕಷ್ಟದಲ್ಲಿದ್ದಾರೆ. ಆದರೆ ಯಾರೂ ಕೂಡ ಮೀನುಗಾರರ ಬಗ್ಗೆ ಗಮನವೇ ಹರಿಸುತ್ತಿಲ್ಲ. ರೈತರು, ಇತರ ವಲಯದಂತೆ ಮೀನುಗಾರಿಕೆಗೂ ವಿಶೇಷ ಪ್ಯಾಕೇಜ್ ಅನ್ನು ಸರಕಾರ ಘೋಷಿಸಬೇಕಿದೆ.
– ಬಾಬು ಕುಬಾಲ್, ಗೌರವಾಧ್ಯಕ್ಷರು, ಅಖೀಲ ಕರ್ನಾಟಕ ಪರ್ಸಿನ್
ಮೀನುಗಾರರ ಸಂಘ, ಕರಾವಳಿ ಜಿಲ್ಲೆ