ಕಂಪ್ಲಿ: ಮಾಜಿ ಸಚಿವರೂ ಹಾಗೂ ಹಾಲಿ ವಿಧಾನಪರಿಷತ್ ಸದಸ್ಯರಾದ ಎಚ್. ವಿಶ್ವನಾಥ್ ಶನಿವಾರ ಸಂಜೆ ದಿಢೀರ್ ಕಂಪ್ಲಿ ಪಟ್ಟಣದ ಸಿಂಧೋಳ್ಳಕಾಲೋನಿಯಲ್ಲಿರುವ ಅಲೆಮಾರಿ ಗ್ರಂಥಾಲಯಕ್ಕೆ ಆಕಸ್ಮಿಕವಾಗಿ ಭೇಟಿ ನೀಡಿ ಪಟ್ಟಣದಲ್ಲಿರುವವಿವಿಧ ಅಲೆಮಾರಿಗಳ ಜನಾಂಗಗಳೊಂದಿಗೆ ಸುದೀರ್ಘವಾಗಿ ಚರ್ಚಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಕರ್ನಾಟಕ ರಾಜ್ಯ ಅಲೆಮಾರಿ, ಅರೆ ಅಲೆಮಾರಿ, ವಿಮುಕ್ತಬುಡಕಟ್ಟುಗಳ ಒಕ್ಕೂಟದ ಉಪಾಧ್ಯಕ್ಷರಾದ ಎಚ್. ಪಿ. ಶಿಕಾರಿ ರಾಮು ಅವರು, ರಾಜ್ಯದಲ್ಲಿ ಲಕ್ಷಾಂತರ ಸಂಖ್ಯೆಯಲ್ಲಿ ಅಲೆಮಾರಿಗಳು ವಾಸವಿದ್ದು ಅವರ ಅಭಿವೃದ್ಧಿಗಾಗಿ ಅಲೆಮಾರಿ, ಅರೆ ಅಲೆಮಾರಿ, ಪರಿಶಿಷ್ಟ ಜಾತಿ, ಪಂಗಡಗಳ ರಾಜ್ಯ ಆಯೋಗ ಮತ್ತು ನಿಗಮಗಳನ್ನು ಸರ್ಕಾರ ರಚಿಸಬೇಕೆಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಹಂಪಿ ಕನ್ನಡ ವಿವಿ ಪ್ರೊ| ಕೆ.ಎಂ. ಮೇತ್ರಿಯವರು ಅಲೆಮಾರಿ ಹಾಗೂ ಹಿಂದುಳಿದ ವರ್ಗಗಳ ಕುರಿತು ಅಲೆಮಾರಿ,ಅರೆ ಅಲೆಮಾರಿ, ವಿಮುಕ್ತ ಬುಡಕಟ್ಟುಗಳುಸಮಗ್ರವಾದ ಮಾಹಿತಿ ಮತ್ತು ಜೀವನ ಶೈಲಿ ವಿವರಿಸಿದರು.
ಎಚ್. ವಿಶ್ವನಾಥ್ ಮಾತನಾಡಿ, ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರೊಂದಿಗೆ ಅಲೆಮಾರಿ, ಅರೆ ಅಲೆಮಾರಿ ಹಾಗೂ ವಿಮುಕ್ತ ಬುಡಕಟ್ಟುಗಳ ಆಯೋಗ ಮತ್ತು ನಿಗಮ ಸ್ಥಾಪನೆ ಬಗ್ಗೆ ಚರ್ಚಿಸಿ ರಚಿಸುವ ಬಗ್ಗೆ ಪ್ರಾಮಾಣಿಕ ಪ್ರಯತ್ನಗಳನ್ನು ಮಾಡುವುದಾಗಿ ಭರವಸೆ ನೀಡಿದರು. ಪಟ್ಟಣದಲ್ಲಿ ಈಜನಾಂಗ ಬದಲಾಗುತ್ತಿರುವ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದರಲ್ಲದೆ, ಅಲೆಮಾರಿಗಳ ಗ್ರಂಥಾಲಯಕ್ಕೆ ಗ್ರಂಥಗಳನ್ನು ಕೊಡುಗೆಯಾಗಿ ನೀಡಿದರು. ಎಚ್.ವಿಶ್ವನಾಥ್ ಅವರನ್ನುಸಮುದಾಯದ ಪರವಾಗಿ ಆತ್ಮೀಯವಾಗಿ ಸನ್ಮಾನಿಸಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಸಮುದಾಯದ ಮುಖಂಡರಾದ ಬಳ್ಳಾರಿ ಜಿಲ್ಲಾ ಹಕ್ಕಿಪಿಕ್ಕಿ ಸಮುದಾದ ಅಧ್ಯಕ್ಷ ಎಚ್.ಪಿ. ಶ್ರೀಕಾಂತ್, ಕರ್ನಾಟಕ ರಾಜ್ಯ ಸಿಂಧೋಳ್ಳ ಸಮಾಜದ ರಾಜ್ಯಾಧ್ಯಕ್ಷ ರಾವುಲ್ ನಾಗಪ್ಪ, ಎಚ್. ಪರಮೇಶ್,ಆರ್.ಡಿ. ಶರತ್, ಕಿರಣಕುಮಾರ್, ಆರ್. ಶಿವು ಸೇರಿದಂತೆ ಇತರರು ಉಪಸ್ಥಿತರಿದ್ದರು.