Advertisement

ಈಡಿಗ ಅಭಿವೃದ್ಧಿ ನಿಗಮ ಸ್ಥಾಪನೆಗೆ ಆಗ್ರಹಿಸಿ ಮನವಿ

03:19 PM Dec 06, 2020 | Suhan S |

ಯಾದಗಿರಿ: ರಾಜ್ಯದಲ್ಲಿ ಲಕ್ಷಾಂತರ ಈಡಿಗ ಸೇರಿದಂತೆ ಹಲವು ಉಪಜಾತಿಗಳನ್ನೊಳಗೊಂಡ ಕುಲ ಕಸುಬು ಮಾಡುತ್ತಿರುವ ಈಡಿಗ ಸಮುದಾಯವು ಆರ್ಥಿಕವಾಗಿ ಹಿಂದುಳಿದಿದ್ದು, ಸಮಾಜದ ಅಭಿವೃದ್ಧಿಯ ದೃಷ್ಠಿಯಿಂದ ರಾಜ್ಯ ಸರ್ಕಾರವು ಈಡಿಗ ಅಭಿವೃದ್ಧಿ ನಿಗಮ ಸ್ಥಾಪಿಸಬೇಕೆಂದು ಒತ್ತಾಯಿಸಿ ಆರ್ಯ ಈಡಿಗ ಸಮಾಜ ಹಾಗೂ ಜೆ.ಪಿ. ನಾರಾಯಣಸ್ವಾಮಿ ಪ್ರತಿಷ್ಠಾನದವತಿಯಿಂದ ಜಿಲ್ಲಾ ಧಿಕಾರಿ ಮುಖಾಂತರ ಮುಖ್ಯಮಂತ್ರಿಗೆ ಮನವಿ ಸಲ್ಲಿಸಲಾಯಿತು.

Advertisement

ಇದೇ ವೇಳೆ ಮಾತನಾಡಿ ಮುಖಂಡರು, ಯಾದಗಿರಿ ಜಿಲ್ಲೆಯಲ್ಲಿ ಅತ್ಯಂತ ಹೆಚ್ಚು ಜನ ಸಂಖ್ಯೆ ಹೊಂದಿದ್ದರೂ ಜಿಲ್ಲಾ ಕೇಂದ್ರದಲ್ಲಿ ಮದುವೆ ಇನ್ನಿತರ ಕಲ್ಯಾಣ ಕಾರ್ಯಕ್ರಮಗಳಿಗಾಗಿ ಒಂದು ಸಮುದಾಯ ಭವನ, ವಿದ್ಯಾರ್ಥಿ ವಸತಿ ನಿಲಯ ಜೊತೆಗೆ ನಿಷೇಧ ಸಮಯದಲ್ಲಿ ಆರ್ಥಿಕ ನಷ್ಟಕ್ಕೊಳಗಾಗಿರುವ ಸಮುದಾಯ ಬಾಂಧವರಿಗೆ ತಮ್ಮ ಆರ್ಥಿಕ ಚೇತರಿಕೆ ಮಾಡಿಕೊಳ್ಳಲು ಸರ್ಕಾರದಿಂದ ಸೌಲಭ್ಯ ಕಲ್ಪಿಸಬೇಕು, ಕುಲ ಕಸುಬನ್ನು ನಂಬಿಕೊಂಡು ಜೀವನ ನಡೆಸುತ್ತಿರುವವರು ಆರ್ಥಿಕ ಜರ್ಜರಿತಕ್ಕೊಳಗಾಗಿ ಹಿಂದುಳಿಯುವಂತಾಗಿದೆ.ಆದ್ದರಿಂದ ಅವರಿಗೆ ರಾಜ್ಯದಲ್ಲಿ ಎಸ್ಸಿ, ಎಸ್ಟಿ ಮಾದರಿಯಲ್ಲಿಕಲ್ಯಾಣ ಯೋಜನೆಗಳನ್ನು ಜಾರಿಗೊಳಿಸಿ ಆರ್ಥಿಕ ಸಬಲತೆಗೆ ಮುಂದಾಗಬೇಕೆಂದು ಮನವಿ ಮಾಡಿದರು.

ಈ ಸಂದರ್ಭದಲ್ಲಿ ಸಮಾಜದ ಜಿಲ್ಲಾಧ್ಯಕ್ಷ ರಾಜಶೇಖರಗೌಡ ವಡಗೇರಾ, ಜೆ.ಪಿ.ನಾರಾಯಣಸ್ವಾಮಿ ಪ್ರತಿಷ್ಠಾನದ ಮುಖ್ಯ ಸಂಚಾಲಕರಾದ ಮಲ್ಲಯ್ಯ ಗುಂಡಗುರ್ತಿ, ಬಿಎಸ್‌ಎನ್‌ ಡಿಪಿ ರಾಜ್ಯಾಧ್ಯಕ್ಷ ಕೆ.ಸೆ„ದಪ್ಪ ಗುತ್ತೇದಾರ, ದೇವೇಂದ್ರಗೌಡ ರಾಚನಳ್ಳಿ, ಹಣಮಂತಿ ಗುತ್ತೇದಾರ, ಭೀಮಯ್ಯ ಮದ್ರಿಕಿ, ಲಕ್ಷ್ಮೀಕಾಂತ ನಿಡಜಂತಿ, ಬಸವರಾಜ ಮುಂಡರಗಿ, ಬನ್ನಯ್ಯ ಕಣೆಕಲ್‌, ಡಾ| ವೆಂಕಟೇಶ ಬದ್ದೆಪಲ್ಲಿ, ರಾಘವೇಂದ್ರಸೈದಾಪುರ, ಬಸವರಾಜ ಕೂಡ್ಲೂರ, ಶ್ರೀನಿವಾಸ ಸುರಪುರ, ಆಂಜನೇಯ ಕಲಾಲ, ವಿಜಯ ರಾಮಸಮುದ್ರ, ಶರಣು ಮಳ್ಳಳ್ಳಿ, ಮೊಗಲಯ್ಯ ಹೊಸಳ್ಳಿ ಇದ್ದರು.

ಕುಡಿವ ನೀರಿಗೆ ಸಮಸ್ಯೆ ನಿವಾರಣೆಗೆ ಮನವಿ :

ಯಾದಗಿರಿ: ಹೊರವಲಯದ ಎಂ. ಹೊಸಳ್ಳಿ ರಸ್ತೆಯ ಹೌಸಿಂಗ್‌ ಬೋರ್ಡ್‌ ಹಿಂದುಗಡೆ ಬುಡ್ಗ ಜಂಗಮ ಕಾಲೋನಿಯಲ್ಲಿ ನಿವಾಸಿಗಳು ಕುಡಿಯುವ ನೀರಿಗೆ ಪರಿತಪಿಸುವಂತಾಗಿದ್ದು, ಕೂಡಲೇ ಕ್ರಮ ಕೈಗೊಳ್ಳಲು ಒತ್ತಾಯಿಸಿ ಮುಖಂಡ ಬಿ.ಎಲ್‌. ಆಂಜಿನೇಯ ನಗರಸಭೆ ಅಧ್ಯಕ್ಷ ವಿಲಾಸ ಪಾಟೀಲ್‌ ಅವರಿಗೆ ಮನವಿ ಸಲ್ಲಿಸಿದರು. ನಗರಸಭೆ ಕಾರ್ಯಾಲಯದ ಅಧ್ಯಕ್ಷರಕಚೇರಿಯಲ್ಲಿ ಮನವಿ ಸಲ್ಲಿಸಿದ ಅವರು, ಅಲ್ಲಿ ಸುಮಾರು 50 ಕುಟುಂಬಗಳಿದ್ದು, ನಗರಸಭೆ ವ್ಯಾಪ್ತಿಯ 31ನೇ ವಾರ್ಡ್ ಗೆ ಒಳಪಟ್ಟಿದೆ. ಈ ಪ್ರದೇಶದಲ್ಲಿ ಕಡು ಬಡವರಿದ್ದು, ಕುಡಿಯುವ ನೀರಿನ ದೊಡ್ಡ ಸಮಸ್ಯೆಯಾಗಿದ್ದು, ಅಕ್ಕಪಕ್ಕದ ಬೋರ್‌ವೆಲ್‌ನಿಂದ ನೀರು ತಂದು ಸಂಸಾರ ನಡೆಸುತ್ತಿದ್ದೇವೆ ಎಂದು ಅಳಲು ತೋಡಿಕೊಂಡರು. ಹೌಸಿಂಗ್‌ ಬೋರ್ಡ್ ನಲ್ಲಿರುವ ಟ್ಯಾಂಕಿನಿಂದ ಪೈಪ್‌ಲೈನ್‌ ಮೂಲಕ ಅಥವಾ ಬುಡ್ಗಜಂಗಮ ಕಾಲೋನಿಯಲ್ಲಿ ಹೊಸದಾಗಿ ಬೋರ್‌ವೆಲ್‌ ಕೊರಸಿ, ಟ್ಯಾಂಕ್‌ ನಿರ್ಮಿಸಿ ಶಾಶ್ವತ ಕುಡಿಯುವ ನೀರಿನ ವ್ಯವಸ್ಥೆ ಮಾಡಿಕೊಡಬೇಕು ಎಂದು ಮನವಿ ಸಲ್ಲಿಸಿದರು. ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ವಿಲಾಸ ಪಾಟೀಲ್‌ ಭರವಸೆ ನೀಡಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next