Advertisement

ಪರಿಸರ ಸ್ನೇಹಿ ದೀಪಾವಳಿ ಆಚರಣೆಗೆ ಮನವಿ

02:34 PM Oct 25, 2021 | Team Udayavani |

ದಾವಣಗೆರೆ: ಬೆಳಕಿನ ಹಬ್ಬ ದೀಪಾವಳಿಯನ್ನು ಜಾಗರೂಕತೆ ಹಾಗೂ ಸುರಕ್ಷತೆಯಿಂದ ಆಚರಿಸಬೇಕು ಎಂದು ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಮನವಿ ಮಾಡಿದೆ.

Advertisement

ದೀಪಾವಳಿ ಬೆಳಕಿನ ಹಬ್ಬ, ಎಲ್ಲರೂ ಸಡಗರ ಮತ್ತು ಸಂಭ್ರಮ ದಿಂದ ಆಚರಿಸುವ ಹಬ್ಬ. ಹಬ್ಬದ ಸಂದರ್ಭದಲ್ಲಿ ಪಟಾಕಿಗಳನ್ನು ಬಳಸುವಾಗಎಚ cರವಹಿಸಬೇಕು.ಮೈಮರೆತಲ್ಲಿ ಜೀವನದ ಬೆಳಕನ್ನೇ ಕಸಿದುಕೊಳ್ಳಬಹುದು. ಹಾಗಾಗಿ ಹಬ್ಬದ ಆಚರಣೆ ಜಾಗರೂಕತೆ ಹಾಗೂ ಸುರಕ್ಷತೆಯಿಂದ ಕೂಡಿರಲಿ ಎಂದು ಮನವಿ ಮಾಡಲಾಗಿದೆ.

ಅಪಾರ್ಟ್‌ಮೆಂಟ್‌, ವಠಾರ, ನೆರೆಹೊರೆಯ ಮನೆಯವರು ಒಂದೆಡೆ ಕುಳಿತು ಪರಿಸರ ಸ್ನೇಹಿ ಹಬ್ಬದ ಆಚರಣೆಯಲ್ಲಿ ಬೆಳಕೇ ಪ್ರಧಾನವಾಗಿರಬೇಕು. ಗಿಡ-ಮರಗಳು ಮತ್ತು ಪ್ರಾಣಿ-ಪಕ್ಷಿಗಳಿಗೆ ಯಾವುದೇ ಹಾನಿಯಾಗದಂತೆ ಎಚ್ಚರವಹಿಸಬೇಕು. ಪಟಾಕಿಗಳು ಶಾಶ್ವತ ಕುರುಡುತನ ಅಥವಾ ಕಿವುಡುತನಗಳಿಗೆ ಎಡೆ ಮಾಡಿಕೊಡುವುದರಿಂದ ಪಟಾಕಿಗಳನ್ನು ಖರೀದಿಸುವ ಮುನ್ನ ಲೇಬಲ್‌ಗ‌ಳನ್ನು ಪರಿಶೀಲಿಸಿ, ಗುಣಮಟ್ಟದ ಬಗ್ಗೆ ಖಾತರಿ ಮಾಡಿಕೊಂಡು ಎಚ್ಚರವಹಿಸುವುದರೊಂದಿಗೆ ಅಪಾಯ ತಡೆಯಬೇಕು ಎಂದು ಸಲಹೆ ನೀಡಲಾಗಿದೆ.

ಕಳೆದ ದಶಕದಲ್ಲಿ ಸುಮಾರು ಸಾವಿರಾರು ಮಂದಿ ಪಟಾಕಿ ಸಿಡಿತದಿಂದ ಗಾಯಗೊಂಡಿದ್ದಾರೆ. ಶೇ.70 ರಷ್ಟು ಕಣ್ಣಿಗೆ ಸಂಬಂಧಿಸಿದ ಗಾಯಗಳಾಗಿವೆ. ವಾಯು ಹಾಗೂ ಶಬ್ದ ಮಾಲಿನ್ಯ ಮಟ್ಟ ಶೇ.10 ರಿಂದ ಶೇ.15 ರÐುr  ಹೆಚ್ಚಾಗುತ್ತದೆ. ಪಟಾಕಿಗಳು ಹೊರಸೂಸುವ ವಿಷಯುಕ್ತ ಅನಿಲ ಆರೋಗ್ಯ ಸಂಬಂಧಿತ ಕಾಯಿಲೆಗಳು ಹಾಗೂ ಪರಿಸರ ಮಾಲಿನ್ಯಕ್ಕೆ ಕಾರಣವಾಗುತ್ತವೆ. ಪಟಾಕಿ ಸಿಡಿಸಿದ ನಂತರ ಉತ್ಪತ್ತಿಯಾಗುವ ಘನತ್ಯಾಜ್ಯದ ಹೆಚ್ಚಳದಿಂದ ಶುಚಿತ್ವದ ಸಮಸ್ಯೆ ಉಲ್ಬಣಗೊಳುತ್ತ ದೆ ಎಂದು ಎಚ್ಚರಿಸಲಾಗಿದೆ.

ಶಬ್ದ ಮತ್ತು ವಾಯುಮಾಲಿನ್ಯಗಳಲ್ಲಿ ವೈಪರೀತ್ಯ, ಶಾಶ್ವತ ಕುರುಡುತನ ಅಥವಾ ಕಿವುvುತ  ನ, ಅಸ್ವಸ್ಥರು, ಮಕ್ಕಳು, ಗರ್ಭಿ‌ ಣಿಯರು ಮತ್ತು ವೃದ್ಧರ ಆರೋಗ್ಯದಲ್ಲಿ ಏರು-ಪೇರು, ಗಿಡ-ಮರಗಳು ಮತ್ತು ಪ್ರಾಣಿ-ಪಕ್ಷಿಗಳಿಗೆ ಸಂಚಕಾರ, ಪಟಾಕಿಗಳ ಸದ್ದಿನಿಂದ ಒತ್ತಡ, ನಿದ್ರಾಹೀನತೆ, ರಕ್ತದೊತ್ತಡ, ಹೃದಯಾಘಾತ ಹಾಗೂ ಅ  ಗ್ನಿ ಅವಘಡಗಳಿಗೆ ಕಾರಣವಾಗುವಂತಹ ಅನೇಕ ಅಪಾಯಗಳು ಉಂಟಾಗುತ್ತವೆ. 125 ಡೆಸಿಬಲ್‌ಗ‌ೂ (ಶಬ್ದದ ಪ್ರಮಾಣ) ಮೇಲ್ಪಟ್ಟ ಪಟಾಕಿಗಳ ಸಿಡಿಸುವುದನ್ನು ಹಾಗೂ ರಾತ್ರಿ 10 ರಿಂದ ಬೆಳಿಗ್ಗೆ 6 ಗಂಟೆಯ ನಡುವೆ ಪಟಾಕಿ ಸಿಡಿಸುವುದನ್ನು ಈಗಾಗಲೆ ನಿಷೇಧಿಸಲಾಗಿದೆ. ಆಸ್ಪತ್ರೆ, ವೃದ್ಧಾಶ್ರಮಗಳ ಹತ್ತಿರ  ಪಟಾಕಿಗಳನ್ನು ಸಿಡಿಸಬಾರದು. ಪಟಾಕಿಗೆ ವಿದಾಯ ಹೇಳಿ ಪರಿಸರ ಸ್ನೇಹಿ ದೀಪಾವಳಿ ಆಚರಿಸಿ ಎಂದು ಜಿಲ್ಲಾ ಪರಿಸರ ಅಧಿಕಾರಿಗಳು ಮನವಿ ಮಾಡಿ‌ದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next