Advertisement
ಈ ಸಂದರ್ಭ ಮಾತನಾಡಿದ ಕೆಆರ್‌ಸ್ ಪಕ್ಷದ ಅಧ್ಯಕ್ಷ ರವಿಕೃಷ್ಣ ರೆಡ್ಡಿ, ಬುದ್ಧಿವಂತರ ಜಿಲ್ಲೆ ಉಡುಪಿಯಲ್ಲಿ ಲಂಚದ ದೂರುಗಳು ಕೇಳಿ ಬಂದಿರುವುದು ಆಶ್ಚರ್ಯ ಉಂಟು ಮಾಡಿದೆ. ಆಹಾರ ಹಾಗೂ ಸರ್ವೇ ಇಲಾಖೆಯಲ್ಲಿ ಇಬ್ಬರು ವ್ಯಕ್ತಿಗಳನ್ನು ಅಧಿಕಾರಿಗಳು ಅನಧಿಕೃತವಾಗಿ ನೇಮಕ ಮಾಡಿಕೊಂಡಿರುವುದು ಗಮನಕ್ಕೆ ಬಂದಿದೆ. ಈ ಬಗ್ಗೆ ಕ್ರಮ ತೆಗೆದುಕೊಳ್ಳಲು ತಹಶೀಲ್ದಾರ್ ಅವರಿಗೆ ಮನವಿ ಮಾಡಲಾಗಿದೆ. ವ್ಯವಸ್ಥೆ ಉತ್ತಮವಾಗಿ ಆದರೆ ಸೇವೆಗಳಲ್ಲಿ ಬದಲಾವಣೆಯಾದಾಗ ಜನರಿಗೆ ಸರಿಯಾದ ಸಮಯಕ್ಕೆ ಸೇವೆ ಸಿಗಲು ಸಾಧ್ಯ ಎಂದರು.
ಕಚೇರಿಯಲ್ಲಿ ವಿವಿಧ ವಿಭಾಗಗಳ ಕೊಠಡಿಗಳಿಗೆ ನಾಮಫಲಕ ಇಲ್ಲದಿರುವುದು, ನೌಕರರ ಮೇಜಿನ ಮೇಲೆ ಪದನಾಮ ಇಲ್ಲದಿರುವುದು, ಅಟಲ್ ಜೀ ಸ್ನೇಹ ಕೌಂಟರ್‌ನಲ್ಲಿ ಟೋಕನ್ ವ್ಯವಸ್ಥೆ ಇಲ್ಲದಿರುವುದು, ಸರಕಾರಿ ಹಾಗೂ ಹೊರಗುತ್ತಿಗೆ ನೌಕರರು ಗುರುತಿ ಚೀಟಿ ಧರಿಸದೆ ಇರುವುದು, ನೌಕರರ ಸ್ಥಳದಲ್ಲಿ ಮಧ್ಯವರ್ತಿಗಳು ಅನಧಿಕೃತವಾಗಿ ಇರುವುದು, ಅನಧಿಕೃತ ವ್ಯಕ್ತಿಗಳ ಕೈಯಲ್ಲಿ ಸರಕಾರಿ ದಾಖಲೆ ಇರುವುದು, ಸರಕಾರಿ ಸಿಬಂದಿ ಸಾರ್ವಜನಿಕರೊಂದಿಗೆ ಸೌಜನ್ಯದಿಂದ ವರ್ತಿಸದೆ ಇರುವುದು, ಹಾಜರಾತಿ ಪಟ್ಟಿ ಇಲ್ಲದೆ ಇರುವುದು ಸೇರಿದಂತೆ ವಿವಿಧ ಬೇಡಿಕೆ ಹಾಗೂ ಕಾರ್ಯ ವೈಖರಿಗಳಲ್ಲಿನ ಲೋಪದೋಷಗಳನ್ನು ಸರಿಪಡಿ ಸುವಂತೆ ಮನವಿ ನೀಡಿದರು.