Advertisement

ರಾಚವಿ ಸ್ಥಳಾಂತರ ವಿರೋಧಿಸಿ ಸಂಸದರಿಗೆ ಮನವಿ

11:53 AM Oct 13, 2019 | Team Udayavani |

ಯಮಕನಮರಡಿ: ಬೆಳಗಾವಿ ರಾಣಿ ಚನ್ನಮ್ಮಾ ವಿಶ್ವವಿದ್ಯಾಲಯ ಸ್ಥಳಾಂತರಿಸದೇ ಭೂತರಾಮನಹಟ್ಟಿ ಗ್ರಾಮದಲ್ಲಿಯೇ ಮುಂದುವರಿಸಬೇಕೆಂದು ಭೂತರಾಮನಹಟ್ಟಿ ರಾಣಿ ಚನ್ನಮ್ಮಾ ವಿಶ್ವವಿದ್ಯಾಲಯ ಹೋರಾಟ ಸಮಿತಿ ಶನಿವಾರ ಚಿಕ್ಕೋಡಿ ಸಂಸದ ಅಣ್ಣಾಸಾಹೇಬ ಜೊಲ್ಲೆಯವರಿಗೆ ಮನವಿ ಅರ್ಪಿಸಿದರು.

Advertisement

ಭೂತರಾಮನಹಟ್ಟಿ ಗ್ರಾಮದ ಪುರಾತನ ಗೋಮಾಳ ಜಾಗದಲ್ಲಿ 177ಎಕರೆ ಜಮೀನನ್ನು ಕರ್ನಾಟಕ ವಿಶ್ವವಿದ್ಯಾಲಯ ಧಾರವಾಡ ಸ್ನಾತಕೋತ್ತರ ಕೇಂದ್ರ ಸ್ಥಾಪಿಸಲು ಗ್ರಾಮದ ಹಿರಿಯರು ಶಿಕ್ಷಣದ ಉದ್ದೇಶಕ್ಕಾಗಿ ಬಿಟ್ಟುಕೊಟ್ಟಿದ್ದಾರೆ. ನಂತರ ರಾಜ್ಯ ಸರ್ಕಾರ 2010ರಲ್ಲಿ ಕರ್ನಾಟಕ ವಿಶ್ವವಿದ್ಯಾಲಯದ ಸ್ನಾತಕೋತ್ತರ ಕೇಂದ್ರವನ್ನು ರಾಣಿ ಚನ್ನಮ್ಮಾ ವಿಶ್ವವಿದ್ಯಾಲಯವೆಂದು ಘೋಷಣೆ ಮಾಡಿ ಪ್ರಾರಂಭಿಸಿತು.

ವಿಶ್ವವಿದ್ಯಾಲಯ ಪ್ರಾರಂಭವಾದ 10ವರ್ಷಗಳಲ್ಲಿ ಭೂತರಾಮನಹಟ್ಟಿ ಹಾಗೂ ಸುತ್ತಮುತ್ತಲಿನ ಎಲ್ಲ ಗ್ರಾಮಗಳಲ್ಲಿ ಶಿಕ್ಷಣ ಜಾಗೃತಿ ಮೂಡಿದೆ. ಉತ್ತಮ ಶೈಕ್ಷಣಿಕ ಪರಿಸರ ಕಾಳಜಿ ಬೆಳೆದಿದೆ. ಆದರೆ ಈಗ ರಾಣಿ ಚನ್ನಮ್ಮಾ ವಿಶ್ವವಿದ್ಯಾಲಯ ಇರುವ ಭೂಪ್ರದೇಶ ಅರಣ್ಯ ಇಲಾಖೆಗೆ ಸಂಬಂಧಿಸಿದ ಕಾಯ್ದಿರಿಸಿದ ಅರಣ್ಯ ಪ್ರದೇಶವೆಂದು ಕೇಂದ್ರ ಅರಣ್ಯ ಇಲಾಖೆ ಆಕ್ಷೇಪಣೆ ಮಾಡಿದೆ. ಇದರಿಂದ ರಾಣಿ ಚನ್ನಮ್ಮಾ ವಿಶ್ವವಿದ್ಯಾಲಯ ಬೇರೆ ಪ್ರದೇಶಕ್ಕೆ ಸ್ಥಳಾಂತರಗೊಳ್ಳುತ್ತಿದ್ದು, ಈ ಭಾಗದ ಎಲ್ಲ ವರ್ಗದ ಜನರಿಗೆ ಅನ್ಯಾಯವಾಗುತ್ತಿದೆ. ಆದ್ದರಿಂದ ಈ ಸ್ಥಳಾಂತರ ಪ್ರಸ್ತಾವನೆಯನ್ನು ಕೈಬಿಡಬೇಕೆಂದು ಮನವಿಯಲ್ಲಿ ತಿಳಿಸಲಾಗಿದೆ.

ಈ ಸಂದರ್ಭದಲ್ಲಿ ಭೀಮಗೌಡ ಪಾಟೀಲ, ಅಶೋಕ ಪಾಟೀಲ, ಮಾರುತಿ ಚೌಗಲಾ, ಶಿವರಾಯಿ ಪಾಟೀಲ, ಮಹಾದೇವ ಪಾಟೀಲ, ನಾಗಣ್ಣ ನಂದನವಾಡ, ಪ್ರಕಾಶ ಕಮತಿ, ಆನಂದ ಚೌಗಲೆ, ಪ್ರಮೋದ ಚಿಂವಗೋಳ, ಪ್ರಕಾಶ ಹೊಂಡಾಯ ಹಾಗೂ ಇನ್ನಿತರರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next