Advertisement

ರೈತರಿಗೆ ಬೆಳೆಹಾನಿ ಪರಿಹಾರ ನೀಡಲು ಮನವಿ

11:42 AM Feb 23, 2022 | Team Udayavani |

ಸೇಡಂ: ಕಳೆದ ವರ್ಷ ಮತ್ತು ಈ ವರ್ಷ ಅತಿವೃಷ್ಠಿಯಿಂದ ಬೆಳೆಹಾನಿಯಾದ ರೈತರಿಗೆ ಪರಿಹಾರ ಹಣ ಇನ್ನೂ ತಲುಪಿಲ್ಲ ಎಂದು ಕರವೇ ಶೆಟ್ಟಿ ವತಿಯಿಂದ ಒತ್ತಾಯಿಸಲಾಗಿದೆ. ಈ ಕುರಿತು ಜಿಲ್ಲಾಧಿಕಾರಿಗಳಿಗೆ ಬರೆದ ಮನವಿ ಪತ್ರವನ್ನು ತಹಶೀಲ್ದಾರ್‌ ಬಸವರಾಜ ಬೆಣ್ಣೆಶಿರೂರ ಅವರಿಗೆ ಸಲ್ಲಿಸಿದ ಕಾರ್ಯಕರ್ತರು, ಕೂಡಲೇ ಪರಿಹಾರ ಹಣ ನೀಡುವಂತೆ ಒತ್ತಾಯಿಸಿದ್ದಾರೆ.

Advertisement

ತಾಲೂಕಿನ 2000 ಸಣ್ಣ ಹಾಗೂ ಅತಿ ಸಣ್ಣ ರೈತರ ಖಾತೆಗೆ ಸರಿಯಾದ ರೀತಿಯಲ್ಲಿ ಪರಿಹಾರ ಹಣ ಜಮೆಯಾಗಿಲ್ಲ. ಈ ಕುರಿತು ಅಧಿಕಾರಿಗಳ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ. ಕೂಡಲೇ ಈ ಕುರಿತು ಗಮನಹರಿಸಿ ರೈತರ ಖಾತೆಗೆ ಪರಿಹಾರ ಜಮೆ ಮಾಡಬೇಕು ಎಂದು ಒತ್ತಾಯಿಸಲಾಯಿತು.

ಈ ವೇಳೆ ಕರವೇ ಅಧ್ಯಕ್ಷ ರಾಮಚಂದ್ರ ಗುತ್ತೇದಾರ, ಮಹೇಶ ಪಾಟೀಲ ಬಟಗೇರಾ, ಶ್ರೀನಿವಾಸ ರೆಡ್ಡಿ, ದೇವು ನಾಟೀಕಾರ, ಚಂದ್ರಶೇಖರ ಪೂಜಾರಿ, ಮಲ್ಲಿಕಾರ್ಜುನ ಕಾಕಲವಾರ, ಚನ್ನಬಸಪ್ಪ, ಭೀಮು ಮದರಿ, ರವಿಸಿಂಗ, ಮಹೇಶರೆಡ್ಡಿ, ಭೀಮಾಶಂಕರ, ವೆಂಕಟೇಶ ಕೋಡ್ಲಾ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next