Advertisement

ಕುರುಬ ಸಮಾಜಕ್ಕೆ ಎಸ್ ಟಿ ಮೀಸಲಾತಿ ಅಗತ್ಯ ಕುರಿತು ಸಿಎಂಗೆ ಮನವಿ: ಶಾಸಕ ಪರಣ್ಣ ಮುನವಳ್ಳಿ

11:34 AM Nov 11, 2022 | Team Udayavani |

ಗಂಗಾವತಿ: ರಾಜ್ಯದಲ್ಲಿ ಅತಿ ಹೆಚ್ಚು ಸಂಖ್ಯೆಯಲ್ಲಿರುವ ಹಾಲುಮತ ಕುರುಬ ಸಮಾಜ ಶೈಕ್ಷಣಿಕ ಮತ್ತು ಸಾಮಾಜಿಕವಾಗಿ ಮುನ್ನೆಲೆಗೆ ಬರಲು ಎಸ್ ಟಿ ಮೀಸಲಾತಿ ಅಗತ್ಯವಿದ್ದು, ಈಗಾಗಲೇ ಸರ್ಕಾರ ಕುಲ ಶಾಸ್ತ್ರೀಯ ಅಧ್ಯಯನ ನಡೆಸಿ ವರದಿ ಪಡೆದುಕೊಂಡಿದ್ದು, ಮುಖ್ಯಮಂತ್ರಿಗಳಿಗೆ ಈ ಕುರಿತು ಮನವಿ ಮಾಡಲಾಗುತ್ತದೆ ಎಂದು ಶಾಸಕ ಪರಣ್ಣ ಮುನವಳ್ಳಿ ಹೇಳಿದರು.

Advertisement

ಅವರು ನಗರದ ಶ್ರೀ ಕನಕದಾಸ ವೃತ್ತದಲ್ಲಿ ಕನಕದಾಸರ ಜಯಂತ್ಯುತ್ಸವದಲ್ಲಿ ಪಾಲ್ಗೊಂಡು ಮಾತನಾಡಿದರು.

ವಿಶ್ವಮಾನವ ಸಂದೇಶ ಸಾರಿದ ಕನಕದಾಸರು ಸಮಾಜದ ಅಂಕುಡೊಂಕುಗಳನ್ನು ದಾಸಸಾಹಿತ್ಯದ ಮೂಲಕ 15-16 ಶತಮಾನದಲ್ಲಿ ತಿದ್ದುವ ಯತ್ನ ಮಾಡಿದರು. ಇಂಥ ಮಹನೀಯರ ಆದರ್ಶದಲ್ಲಿ ಎಲ್ಲರೂ ನಡೆಯಬೇಕು. ನಂಬಿಕೆ ವಿಶ್ವಾಸಕ್ಕೆ ಹಾಲುಮತ ಕುರುಬ ಸಮಾಜದ ಇಂಥ ಸಮಾಜ ಅತ್ಯಂತ ಹಿಂದುಳಿದಿದ್ದು ಶೈಕ್ಷಣಿಕ ಮತ್ತು ಸಾಮಾಜಿಕವಾಗಿ ಮುಂದೆ ಬರಲು ಎಸ್ಟಿ ಮೀಸಲಾತಿ ಅಗತ್ಯವಿದೆ ಎಂದು ಹೇಳಿದರು.

ಹಲವು ದಶಕಗಳ ಕಾಲ ಹಾಲುಮತ ಕುರುಬ ಸಮಾಜದವರು ಎಸ್ಟಿ ಮೀಸಲಾತಿಗಾಗಿ ಹೋರಾಟ ನಡೆಸಿದ್ದಾರೆ. ಈಗಾಗಲೇ ಮೈಸೂರಿನ ಕುಲ ಶಾಸ್ತ್ರೀಯ ಅಧ್ಯಯನ ವಿಭಾಗ ಎಲ್ಲಾ ಜಿಲ್ಲೆಗಳಲ್ಲಿ ಸಂಚಾರ ಮಾಡಿ ಕುಲಶಾಸ್ತ್ರೀಯ ಅಧ್ಯಯನ ನಡೆಸಿದೆ. ಶೀಘ್ರವೇ ಮುಖ್ಯಮಂತ್ರಿಗಳು ಸೂಕ್ತ ನಿರ್ಣಯವನ್ನು ಕೈಗೊಳ್ಳಲಿದ್ದಾರೆ. ನಾನು ಸಹ ಮುಖ್ಯಮಂತ್ರಿಗಳಿಗೆ ಬೆಂಗಳೂರು ತೆರಳಿದ ನಂತರ ಭೇಟಿಯಾಗಿ ಎಸ್ಟಿ ಮೀಸಲಾತಿ ಬಗ್ಗೆ ಮನವಿ ಮಾಡಿಕೊಳ್ಳುತ್ತೇನೆ ಎಂದರು.

ಸಮಾಜದ ಮುಖಂಡರಾದ ವಿಠಲಾಪುರ ಯಮನಪ್ಪ ಮಾತನಾಡಿ, ಶಾಸಕ ಪರಣ್ಣ ಮುನವಳ್ಳಿಯವರು ಮತ್ತು ಇತರರ ಸಹಕಾರದಿಂದ ಕನಕದಾಸ ವೃತ್ತದಲ್ಲಿ ಶ್ರೀ ಕನಕದಾಸರ ಮೂರ್ತಿಯನ್ನು ಪ್ರತಿಷ್ಠಾಪನೆ ಮಾಡಲಾಗುತ್ತಿದೆ. ಅದರ ಜೊತೆಗೆ ಸಮುದಾಯ ಭವನ ಸೇರಿದಂತೆ ಇತರೆ ಸಾಮಾಜಿಕ ಕೆಲಸಗಳಿಗೆ ಶಾಸಕರು ಸರ್ಕಾರದ ಅನುದಾನ ಕೊಡಿಸುವಂತೆ ಮನವಿ ಮಾಡಿದರು.

Advertisement

ಗ್ರೇಡ್ 2 ತಹಶೀಲ್ದಾರ್ ವಿ.ಎಚ್. ಹೊರಪೇಟೆ, ಪೌರಾಯುಕ್ತ ವಿರೂಪಾಕ್ಷ ಮೂರ್ತಿ, ಬಿಇಒ ಸೋಮಶೇಖರ ಗೌಡ, ಬಿಸಿಎಂ ಇಲಾಖೆಯ ಸುರೇಶ್, ನೈರ್ಮಲ್ಯ ಅಧಿಕಾರಿ ನಾಗರಾಜ್, ಸಮಾಜ ಮುಖಂಡರಾದ ಶರಣೇಗೌಡ, ಬಿ ಪಕೀರಯ್ಯ, ಅಯ್ಯಪ್ಪ, ಮನೋಹರ ಗೌಡ, ವಿಠಲಾಪುರ ಯಮನಪ್ಪ, ಕೆ.ನಾಗೇಶಪ್ಪ, ಅಶೋಕ್ ಗೌಡ, ನೀಲಪ್ಪ ಸಣ್ಣಕ್ಕಿ, ಡ್ಯಾಗಿ ರುದ್ರೇಶ, ಶೇಖರ ಗೌಡ, ಹನುಮಂತಪ್ಪ ಡಗ್ಗಿ, ಯಮನಪ್ಪ ಗಡ್ಡಿ, ಗೀತಾವಿಕ್ರಂ, ಕಸ್ತೂರಮ್ಮ, ಕೆ.ಮಂಜುನಾಥ್, ಕೆ.ವೆಂಕಟೇಶ್, ಪುಂಡಗೌಡ, ಮರಿಯಪ್ಪ ಕುಂಟೋಜಿ, ಸಿದ್ದಲಿಂಗನಗೌಡ, ಯಮನೂರಪ್ಪ, ಮಲ್ಲಿಕಾರ್ಜುನ, ಅಡ್ಡಿ ಶಾಮಣ್ಣ ಸೇರಿದಂತೆ ಕುರುಬ ಮತ್ತು ಇತರ ಸಮಾಜಗಳ ಮುಖಂಡರು ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next