Advertisement
ಏಕನಾಥ ಶಿಂಧೆ ನೇತೃತ್ವದ ಶಿವಸೇನೆಯೇ “ನೈಜ ಶಿವಸೇನೆ’ ಎಂದು ಹೇಳಿ, ಆ ಬಣದ ಶಾಸಕರನ್ನು ಅನರ್ಹಗೊಳಿಸಬೇಕೆಂಬ ಅರ್ಜಿಯನ್ನು ತಿರಸ್ಕರಿಸಿರುವ ಮಹಾರಾಷ್ಟ್ರ ಸ್ಪೀಕರ್ ರಾಹುಲ್ ನಾರ್ವೇಕರ್ ಅವರ ಆದೇಶ ಪ್ರಶ್ನಿಸಿ ಸೋಮವಾರ ಉದ್ಧವ್ ಬಣ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದೆ.
Related Articles
Advertisement
ಶಿವಸೇನೆ (ಯುಬಿಟಿ) ಮುಖ್ಯಸ್ಥ ಉದ್ಧವ್ ಠಾಕ್ರೆ ಅವರ ನಿವಾಸದ ಬಳಿ ವಿಧ್ವಂಸಕ ಕೃತ್ಯ ನಡೆಯಲಿದೆ ಎಂಬ ಬಗ್ಗೆ ಮುನ್ನೆಚ್ಚರಿಕೆಯ ದೂರವಾಣಿ ಕರೆ ಬಂದ ಹಿನ್ನೆಲೆಯಲ್ಲಿ ಪೊಲೀಸರು ಮಾತೋಶ್ರೀಗೆ ಭದ್ರತೆ ಹೆಚ್ಚಿಸಿ¨ªಾರೆ.ಮಹಾ ರಾಷ್ಟ್ರ ಪೊಲೀಸ್ ಪ್ರಧಾನ ಕಚೇರಿಯ ನಿಯಂತ್ರಣ ಕೊಠಡಿಗೆ ರವಿವಾರ ಸಂಜೆ ದೂರವಾಣಿ ಕರೆ ಬಂದಿದ್ದು, ಮುಂಬಯಿ- ಗುಜರಾತ್ ರೈಲಿನಲ್ಲಿ ಪ್ರಯಾಣಿಸುತ್ತಿ¨ªಾಗ ಜನರ ಗುಂಪು ಉರ್ದುವಿನಲ್ಲಿ ವಿಧ್ವಂಸಕ ಯೋಜನೆಗಳ ಬಗ್ಗೆ ಚರ್ಚಿ ಸುತ್ತಿದ್ದರು ಎಂದು ಕರೆ ಮಾಡಿದ್ದ ವ್ಯಕ್ತಿ ಹೇಳಿ ಕೊಂಡಿ¨ªಾನೆ. ಈ ಕರೆಯನ್ನು ಗಂಭೀರವಾಗಿ ಪರಿಗಣಿಸಿರುವ ಪೊಲೀಸರು ಮಾತೋಶ್ರೀಗೆ ಭದ್ರತೆ ಹೆಚ್ಚಿಸಿ¨ªಾರೆ ಹಾಗೂ ಕರೆ ಮಾಡಿದ ವ್ಯಕ್ತಿಯನ್ನು ಪತ್ತೆಹಚ್ಚಲು ಕ್ರಮ ಕೈಗೊಂಡಿದ್ದಾರೆ.