Advertisement

ಜಿಲ್ಲೆಯ ಪ್ರವಾಸೋದ್ಯಮ ಅಭಿವೃದ್ಧಿಗೆ ಆಗ್ರಹಿಸಿ ಮನವಿ

04:48 PM Sep 27, 2020 | Suhan S |

ವಿಜಯಪುರ: ಜಿಲ್ಲೆಯಲ್ಲಿ ಪ್ರವಾಸೋದ್ಯಮ ಸಮೃದ್ಧತೆ ಇದ್ದರೂ ಮೂಲ ಸೌಲಭ್ಯ ಹಾಗೂ ಅಭಿವೃದ್ಧಿ ಕೊರತೆಯಿಂದ ಹಿಂದುಳಿದಿದೆ. ಜಿಲ್ಲೆ ಅಭಿವೃದ್ಧಿಗೆ ತೊಡಕಾಗಿರುವ ಭಾರತೀಯ ಪುರಾತತ್ವ ಇಲಾಖೆ ಜಿಲ್ಲಾಡಳಿತಕ್ಕೆ ಪರವಾನಿಗೆ ನೀಡುವಂತೆ ದಿ ಬಿಜಾಪುರ ಹೇರಿಟೇಜ್‌ ಫೌಂಡೇಶನ್‌ನಿಂದ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಲಾಯಿತು.

Advertisement

ಅಪರ ಜಿಲ್ಲಾಧಿಕಾರಿ ಡಾ| ಔದ್ರಾಮ್‌ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿ ಮಾತನಾಡಿದ ಬಿಜಾಪುರ ಹೇರಿಟೇಜ್‌ ಫೌಂಡೇಶನ್‌ನ ಅನೀಸ ಮನಿಯಾರ, ಜಗತ್‌ ಪ್ರಸಿದ್ಧ ಗೋಲಗುಮ್ಮಟವನ್ನು ವಿಶ್ವ ಪಾರಂಪರಿಕ ಪಟ್ಟಿಗೆ ಸೇರಿಸಬೇಕು. ವಿಜಯಪುರ ಜಿಲ್ಲೆಯ ಪುರಾತತ್ವ ಇಲಾಖೆ ಅಧೀನದ ಎಲ್ಲ ಪುರಾತನ ಸ್ಮಾರಕಗಳ ಎದುರು ಸಮಗ್ರ ಮಾಹಿತಿ ಫಲಕ ಅಳವಡಿಸಬೇಕು. ನಗರದ ಹೃದಯ ಭಾಗದಲ್ಲಿರುವ ಗಗನಮಹಲ್‌ ಕಂದಕ ಸ್ವತ್ಛಗೊಳಿಸಿ ಬೋಟಿಂಗ್‌ ಆರಂಭಿಸಬೇಕು. ಸಂಗೀತ ಕಾರಂಜಿ ಅಳವಡಿಸಿ ವಾಕಿಂಗ್‌ ಟ್ರ್ಯಾಕ್‌ ನಿರ್ಮಿಸಬೇಕು ಎಂದು ಆಗ್ರಹಿಸಿದರು.

ಹಮ್ಜಾ ಮೆಹಬೂಬ್‌ ಮಾತನಾಡಿ, ನಗರದ ಸುರಂಗ ಬಾವಡಿಯಲ್ಲಿ ಆದಿಲ್‌ಶಾಹಿ ಕಾಲದ ಬಾವಡಿಯಲ್ಲಿ ನೀರಾವರಿ ವ್ಯವಸ್ಥೆಯ ಪುನಶ್ಚೇತನಗೊಳಿಸಿ ಲೈಟಿಂಗ್‌ ವ್ಯವಸ್ಥೆ ಮಾಡಬೇಕು. ಪುರಾತತ್ವ ಸ್ಥಳಗಳ ಸುತ್ತಮುತ್ತ ಸುಮಾರು 100 ಮೀ. ಅಂತರ ಕಾಯ್ದುಕೊಂಡು ಕಟ್ಟಡ ನಿರ್ಮಾಣಕ್ಕೆ ಪರವಾನಗಿ ನೀಡಬೇಕು. ಪ್ರವಾಸಿಗರು ಪುರಾತ್ವ ಸ್ಥಳಗಳಿಗೆ ಸುಲಭವಾಗಿ ಭೇಟಿ ನೀಡಲು ಸೂಕ್ತ ರಸ್ತೆ, ಕುಡಿಯುವ ನೀರು ಹಾಗೂ ಶೌಚಾಲಯಗಳಂಥ ಮೂಲ ಸೌಲಭ್ಯ ಕಲ್ಪಿಸಬೇಕು ಎಂದು ಆಗ್ರಹಿಸಿದರು.

ಸಂಘಟನೆ ಪ್ರಮುಖರಾದ ಅಮೀತ ಹುದ್ದಾರ, ಹಮ್ಜಾ ಮೆಹಬೂಬ್‌, ಆಸೀಫ್‌ ಹೆರಿಕಲ್‌, ಶೌಖತ್‌ ಕೋತ್ವಾಲ್‌, ಕಾವ್ಯಾ ಹಣಮಸಾಗರ, ಯುವರಾಜ ಚೋಳಕೆ, ಹಿರೇಮಠ, ಸತೀಶ, ಶಕೀಲ ಸೇರಿದಂತೆ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next